ಚಳ್ಳಕೆರೆಯ, ಶ್ರೀ ರಘುಮೂರ್ತಿ ಯವರ ಸೇವೆಯನ್ನು ಮೆಚ್ಚಿ, ಸತತವಾಗಿ ಮೂರನೇ ಬಾರಿಗೆ ಅವಕಾಶ ಕೊಟ್ಟ ಮತದಾರರು…!!!

Listen to this article

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ. ರಘುಮೂರ್ತಿ ಸತತ ಮೂರನೇ ಗೆಲುವು ಸಾಧಿಸಿ ಚಳ್ಳಕೆರೆ ವಿಧಾಸಭೆ ಕ್ಷೇತ್ರ ಇತಿಹಾಸದ ಪುಟ ಸೇರುವಂತೆ ದಾಖಲೆ ಮಾಡಿದ್ದಾರೆ.ಚಳ್ಳಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ. ರಘುಮೂರ್ತಿ ಅವರು ತಮ್ಮ ಪ್ರತಿಸ್ಪರ್ಧಿ ಜೆಡಿಎಸ್‌ನ ರವೀಶ್ ಕುಮಾರ್ ಎದುರು 16,127 ಮತಗಳ ಅಂತರದಿಂದ ಭರ್ಜರಿ ಗೆಲುವು ಕಂಡಿದ್ದಾರೆಚಳ್ಳಕೆರೆ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಟಿ. ರಘುಮೂರ್ತಿ 67,363 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ.ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ಪಡೆದ ಮತಗಳು 51,236 ಮತ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಕೆ.ಟಿ. ಕುಮಾರಸ್ವಾಮಿ 28928ಮತಗಳನ್ನು ಗಳಿಸಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಅನಿಲ್‌ಕುಮಾರ್ 22,732 ಮತ ಪಡೆದು ಡಬಲ್ ಇಂಜಿನ್ ಸರಕಾರದ ಅಭ್ಯರ್ಥಿ ನಾಲ್ಕನೇ ಸ್ಥಾನ ಪಡೆದು ಸೋಲು ಕಂಡಿದ್ದಾರೆಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿತ್ತು. ಅಂತಿಮವಾಗಿ 16,127 ಮತಗಳ ಅಂತರದಿAದ ಕಾಂಗ್ರೆಸ್ ಅಭ್ಯರ್ಥಿ ಟಿ ರಘುಮೂರ್ತಿ ಗೆಲುವು ಸಾಧಿಸಿದ್ದಾರೆ. ಅಚ್ಚರಿಯೆಂದರೆ, ಪಕ್ಷೇತರ ಅಭ್ಯರ್ಥಿಗಿಂತ ಬಿಜೆಪಿ ಕಡಿಮೆ ಮತ ಪಡೆದು ಮುಖಭಂಗ ಅನುಭವಿಸಿದ್ದಾರೆ.
ಎಸ್ಟಿ ಮೀಸಲಾತಿ ಮುಗಿಯುವ ತನಕ ಶಾಸಕ ಟಿ.ರಘುಮೂರ್ತಿ ಎದುರು ಹೊರಗಿನ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಹಿಂದು ಮುಂದು ನೋಡುವಂತಾಗಿದೆ ಎಂಬ ಮಾತುಗಳು ಕ್ಷೇತ್ರದ ಜನರಲ್ಲಿ ಕೇಳಿ ಬರುತ್ತಿವೆ.2023 ರ ವಿಧಾನ ಸಭಾ ಚುನಾವಣೆಯಲ್ಲೂ ಸಹ ಶಾಸಕ ಟಿ.ರಘುಮೂತಿ 3 ನೇ ಸ್ಥಾನ, ಹೊಸ ಮುಖ ಬಿಜೆಪಿ ಅನಿಲ್ ಕುಮಾರ್ 4 ನೇ ಸ್ಥಾನ ಪಡೆದು ಸೋಲುಂಡಿದ್ದಾರೆ.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಶಾಸಕ ಟಿ.ರಘುಮೂರ್ತಿ ಗೆಲುವಿನ ಸಂಭ್ರಮ ಆಚರಣೆ ಮಾಡಿದರು….

ವರದಿ, ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend