ಆಗೋಲಿ ಗ್ರಾಮದಲ್ಲಿ ಮರೀಚಿಕೆಯಾದ ಸ್ವಚ್ಛತೆ!ಕಣ್ಮುಚ್ಚಿ ಕುಳಿತರ ಸಂಬಂಧ ಪಟ್ಟ ಅಧಿಕಾರಿಗಳು…???

Listen to this article

ಆಗೋಲಿ ಗ್ರಾಮದಲ್ಲಿ ಶ್ರೀ ಕರಿಯಮ್ಮದೇವಿ ದೇವಸ್ತಾನ ಅತ್ತಿರ ಸ್ವಾಚತ್ತೆ ಇಲ್ಲವೇ ಇಲ್ಲ…

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆಗೋಲಿ ಗ್ರಾಮವು ಒಂದು ಪುಟ್ಟ ಸುಂದರ ಹಳ್ಳಿಯಾಗಿರುತ್ತದೆ ಸದರಿ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದು ಸರಕಾರ ಮತ್ತು ಗ್ರಾಮ ಪಂಚಾಯತಿಗಳಾಗಿರುತ್ತವೆ. ಈ ಗ್ರಾಮದಲ್ಲಿ ಸ್ವಚ್ಛತೆಯೇ ಇಲ್ಲದ ಕಾರಣ ಮತ್ತು ಕರಿಯಮ್ಮದೇವಿ ದೇವಸ್ತಾನದ ಸ್ವಚ್ಛತೆ ಇಲ್ಲ ಮತ್ತು ಇದು ಜನ ಸಾಮಾನ್ಯರ ರಸ್ತೆ ಆಗಿರುವುದರಿಂದ ಎಲ್ಲರಿಗೂ ಅವಶ್ಯಕತೆಯಾಗಿರುತ್ತದೆ. ಮತ್ತು ಇಲ್ಲಿ ರಾತ್ರಿ ಸಮಯದಲ್ಲಿ ಸಂಚರಿಸುವುದು ತುಂಬಾ ಕಷ್ಟ ಹಾಗೂ ವಿದ್ಯುತ್ ಸಂಪರ್ಕ ಇಲ್ಲ ಇಲ್ಲಿಗೆ ಮೂರು ವಿದ್ಯುತ್ ಕಂಬ ಬೇಕಾಗಿರುತದೆ.

ಎಲ್ಲಿಯ ಸ್ವಚ್ಚ ಭಾರತ್ ಮಿಷಿನ್ ಯೋಜನೆ ಇದು ಯೋಜನೆಗಷ್ಟೇ ಸೀಮಿತನ ಯಾಕೆಂದರೆ ಅಲ್ಲಿಯ ಸಾರ್ವಜನಿಕ ಮಹಿಳೆಯರು ಮಲ, ಮೂತ್ರ ವಿಸರ್ಜನೆ ಮಾಡ್ತಿದ್ದಾರೆ ಅಲ್ಲಿಯ ರಸ್ತೆ ಮೇಲೆ ಗ್ರಾಮಸ್ಥರು ಓಡಾಡುವುದು ಕಷ್ಟ ಆಗುತ್ತಿದೆ ಪಕ್ಕದಲ್ಲಿ ಮನೆಗಳು ಇದ್ದು . ರಾತ್ರಿ ವೇಳೆ ಪ್ರಾಣಿಗಳು ಬರತಿದವೆ ಮತ್ತು ಅಲ್ಲಿರುವ ಜನರಿಗೆ ದುರ್ವಾಸನೆ ಕುಡಿಯುವುದರಿಂದ ರೋಗಗಳು ಉಂಟಾಗಿದ್ದು. ಮಾನ್ಯ ಜಿಲ್ಲಾ ಅಧಿಕಾರಿಗಳಿಗೆ ಗಂಗಾವತಿಗೆ ಬಂದಾಗ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದ್ದೇವೆ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ 4 ರಿಂದ 5 ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದೇವೆ ಆದಕಾರಣ ಇನ್ನುವರಿಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ. ಗ್ರಾಮದ ಪಂಚಾಯತ್ ಪಿ ಡಿ ಒ ಇವರು ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ.

ಜಕ್ಸಂ ಇಲಾಖೆ ಗಂಗಾವತಿ ಇವರಿಗೆ ಮನವಿ ಸಲ್ಲಿಸಿದ್ದೇವೆ ಅವರು ಗ್ರಾಮ ಪಂಚಾಯತಿ ಪಿಡಿಓ ಹತ್ತಿರ ಕೇಳಿ ಅಂತ ಹೇಳುತ್ತಾರೆ. ಇದೆ ರೀತಿಯಾಗಿ ಗ್ರಾಮದಲ್ಲಿ ಸರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ. ಸoವಿಧಾನದ ಅಡಿಯಲ್ಲಿ ಮೂಲ ಭೂತ ಹಕ್ಕುಗಳನ್ನು ಪಡೆಯುವುದು ಸಾರ್ವಜನಿಕರ ಹಾಗೂ ಜನರ ಹಕ್ಕುಗಾಗಿರುತ್ತದೆ,ಆದರೆ ಈ ಗ್ರಾಮದಲ್ಲಿ ಸ್ವಚ್ಛತೆ ಇಲ್ಲವೆಂದು ತಿಳಿದು ಬಂದಿದೆ ಇನ್ನಾದರೂ ಈ ಒಂದು ಗ್ರಾಮಸ್ಥರ ಅಳಲನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಲಿ ಹಾಗೂ ಪರಿಹರಿಸಲಿ ಎಂಬುದು ನಮ್ಮ ಪತ್ರಿಕಾ ತಂಡದ ಆಶಯ….

ವರದಿ. ಮಂಜುನಾಥ್ ಉಪ್ಪಾರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend