ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತರ ಹಕ್ಕೋತ್ತಾಯ ಎರಡನೇ ಬೆಳೆಗಾಗಿ ಮಾರ್ಚ, ಏಪ್ರಿಲ್ ವರೆಗೆ ನೀರು ಪೂರೈಸಿ…!!!

Listen to this article

ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತರ ಹಕ್ಕೋತ್ತಾಯ
ಎರಡನೇ ಬೆಳೆಗಾಗಿ ಮಾರ್ಚ, ಏಪ್ರಿಲ್ ವರೆಗೆ ನೀರು ಪೂರೈಸಿ

ಕೊಪ್ಪಳ ನವೆಂಬರ್ : ಬೇಸಿಗೆ‌ಯ ಬೆಳೆ ತೆಗೆಯಲು ಅನುಕೂಲವಾಗುವಂತೆ ತುಂಗಭದ್ರಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಮಾರ್ಚ ಮತ್ತು ಏಪ್ರೀಲ್ ತಿಂಗಳ ಕೊನೆಯವರೆಗೆ ನೀರು ಹರಿಸಬೇಕು ಎಂದು ರಾಯಚೂರ, ವಿಜಯನಗರ ಬಳ್ಳಾರಿ ಜಿಲ್ಲೆಗಳ ರೈತರು ಮತ್ತು ರೈತ ಮುಖಂಡರು ತಮ್ಮ ಹಕ್ಕೋತ್ತಾಯ ಮಂಡಿಸಿದರು.


ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ನವೆಂಬರ್‌ 23ರಂದು ಟಿಬಿಪಿ ಮುನಿರಾಬಾದನಲ್ಲಿ ನಡೆದ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಕೇಳಿ ಬಂದ ಕಾಲುವೆಯಿಂದ ಹರಿಸುವ
ನೀರಿನ ಪ್ರಮಾಣ ಕಡಿಮೆ ಮಾಡಬೇಡಿ ಎಂಬುದಕ್ಕೆ
ವಿವಿಧ ಸಂಘಗಳ ರೈತ ಮುಖಂಡರು ಮತ್ತು ರೈತರು ಧ್ವನಿಗೂಡಿಸಿದರು.‌ ಬೇಸಿಗೆ ಬೆಳೆ ತೆಗೆಯಲು ನೀರು ಬೇಕು ಎಂದು
ಸರ್ವಾನುಮತದಿಂದ ಮನವಿ ಮಾಡಿದರು.
ಕರ್ನಾಟಕ ರೈತ ಸಂಘದ
ಚಾಮರಸ ಮಾಲಿಪಾಟೀಲ ಅವರು ಮಾತನಾಡಿ, ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗದ ಪ್ರದೇಶದಲ್ಲಿನ ಹತ್ತಿ, ಮೆಣಸಿನಕಾಯಿ, ಜೋಳ ಬೆಳೆಗಳಿಗೆ ಕಳೆದ ವರ್ಷ ಸಮಪರ್ಕ ನೀರು ಸಿಗಲಿಲ್ಲ. ಭತ್ತದ ಕಟಾವು ಮುಗಿದ ಬಳಿಕ ಬೇರೆ ಬೆಳೆಗಳನ್ನು ಬೆಳೆಯಲು 1000 ಕ್ಯೂಸೆಕ್ ನೀರು ಹರಿಸಿದರೆ ರಾಯಚೂರು, ಮಾನವಿ, ಶಿರವಾರ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಬಳ್ಳಾರಿ ಕೃಷಿಕ ಸಮಾಜದ ಅಧ್ಯಕ್ಷರಾದ ಲಕ್ಷ್ಮಿಕಾಂತ ರೆಡ್ಡಿ ಅವರು ಮಾತನಾಡಿ, ಶಿರಗುಪ್ಪ ತಾಲೂಕಿನಲ್ಲಿ ಹತ್ತಿ ಬೆಳೆ, ಬಳ್ಳಾರಿಯಲ್ಲಿ ಮೆನಸಿನಕಾಯಿ ಸಂಪೂರ್ಣ ನಾಶವಾಗಿದೆ.‌ ಈ ಭಾಗದವರು ಜನವರಿಯಲ್ಲಿ ತೆಗೆಯುವ ಬೆಳೆಗೆ ನೀರಿನ ಪ್ರಮಾಣ ಕಡಿಮೆಯಾಗಬಾರದು ಎಂದು ತಿಳಿಸಿದರು.
ರೈತ ಮುಖಂಡರಾದ ಎಂ ಗೋವಿಂದಪ್ಪ ಮಾತನಾಡಿ, ಮಳೆ ಹೆಚ್ಚು ಬಿದ್ದು ನೀರು ನಿಂತು ಮೊದಲನೇ ಬೆಳೆ ಹಾನಿಯಾಗಿದೆ. ಎರಡನೇ ಬೆಳೆಗೆ ಅನುಕೂಲವಾಗಲು ಮಾರ್ಚ,‌ ಏಪ್ರೀಲ್ ವರೆಗೆ ನೀರು ಕೊಡಬೇಕು ಎಂದು ಮನವಿ
ಮಾಡಿದರು.
ರಾಯಚೂರು ಭಾಗದ
ರೈತ ಮುಖಂಡರಾದ ಶರಣಪ್ಪ ಅವರು ಮಾತನಾಡಿ, 400 ಟಿಎಂಸಿನಷ್ಟು ನೀರು ತುಂಗಭದ್ರಾ ಜಲಾಶಯದಿಂದ ಅನವಶ್ಯಕ ಹರಿದು ಹೋಗುತ್ತಿದೆ. ಹೀಗಾಗಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ, ಕಾಲುವೆಗಳ ಆಧುನಿಕರಣಕ್ಕೆ ಒತ್ತು ಕೊಡಬೇಕು. ರೈತರಿಗೆ ನೀರವಾರಿ ಸಹಾಯವಾಣಿ ಆರಂಭಿಸಬೇಕು. ಡಿಸೆಂಬರ್ ಮಾಹೆಯೊಳಗೆ
ಭದ್ರಾ ಜಲಾಶಯದಿಂದ 6 ಟಿಎಂಸಿ ನೀರು ಪಡೆದರೆ ಬಲದಂಡೆ ಮೇಲ್ಮಟ್ಟದ ಕಾಲುವೆಯ ವ್ಯಾಪ್ತಿಯ
2 ಲಕ್ಷ ರೈತರಿಗೆ ಪರ್ಯಾಯ ಬೆಳೆ ಬೆಳೆಯಲು ಅನುಕೂಲವಾಗಲಿದೆ ಎಂದು ತಿಳಿಸಿದರು.
*ಕೆರೆಗೆ ನೀರು ತುಂಬಿಸಿ:* ಜನ- ಜಾನುವಾರುಗೆ ಕುಡಿಯಲು ಅನುಕೂಲವಾಗುವಂತೆ
ಬಾದನಟ್ಟಿ ಗ್ರಾಮದ ಕೆರೆಗೆ ಕಾಲುವೆಯಿಂದ ನೀರು ತುಂಬಿಸಬೇಕು ಎಂದು ಅಲ್ಲಿನ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಮನವಿ ಮನವಿ ಮಾಡಿದರು.
*ರೈತರ ಅಸಮಾಧಾನ:* ರೈತ ಮುಖಂಡರಾದ ಹನುಮಂತಪ್ಪ ಹಂಚಿನಾಳ, ಅಮರೇಶ,
ಬಿ ವಿ ಗೌಡ, ಪಿ ರಾಘವೆಂದ್ರ ರೆಡ್ಡಿ ಸೇರಿದಂತೆ ಇತರರು ಮಾತನಾಡಿ, ಮೇಲಿನಿಂದ ಕೆಳಭಾಗದವರೆಗೆ
ಗೇಜ್ ನಿರ್ಹಹಣೆ ಮಾಡುವಲ್ಲಿ, ಸುರಂಗ ಮಾರ್ಗ ವಿಸ್ತರಣೆ ಮಾಡುವಲ್ಲಿ, ನೀರಾವರಿ ಕಾಮಗಾರಿ ಮಾಡುವಲ್ಲಿ, ಕಾಲುವೆ ದುರಸ್ತಿ ಮಾಡುವಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅಧಿಕಾರಿಗಳ ಕಾರ್ಯವೈಖರಿಗೆ ಅಸಮಧಾನ ವ್ತಕ್ತಪಡಿಸಿದರು.
ಸಭೆಯಲ್ಲಿ ಸಚಿವರಾದ ಆನಂದಸಿಂಗ್, ಸಂಸದರು ವಿವಿಧ ಕ್ಷೇತ್ರಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಇದ್ದರು..

ವರದಿ. ಸಂಗೀತ, ಕೊಪ್ಪಳ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend