ತೆರೆವು ಗೊಳಿಸಿದ ಶೌಚಾಲಯವನ್ನು ಮರು ನಿರ್ಮಾಣಿಸಲು ಶಾಸಕರಿಂದ ಅನುಮತಿ…!!!

Listen to this article

ತೆರೆವು ಗೊಳಿಸಿದ ಶೌಚಾಲಯವನ್ನು ಮರು ನಿರ್ಮಾಣಿಸಲು ಶಾಸಕರಿಂದ ಅನುಮತಿ

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಪಟ್ಟಣದ 9ನೇ ವಾರ್ಡ್ ನಲ್ಲಿ ಪಟ್ಟಣ ಪಂಚಾಯ್ತಿ ಯಿಂದ ಇತ್ತೀಚೆಗಷ್ಟೇ ತೆರವುಗೊಂಡ ಸಾಮೂಹಿಕ ಮಹಿಳಾ ಶೌಚಾಲಯವನ್ನು ಪುನಃ ಅದೇ ಸ್ಥಳದಲ್ಲಿಯೇ ಶೀಘ್ರವೇ ಶೌಚಾಲಯಗಳನ್ನು ನಿರ್ಮಿಸಬೇಕು ಮೂರು ವಾರ್ಡ್ ಗಳ ಹಲವು ಮಹಿಳೆಯರು ಹಾಗೂ ಸಿಐಟಿಯು ಮುಖಂಡ ಗುನ್ನಳ್ಳಿ ರಾಘವೇಂದ್ರ ಅವರ ನೇತೃತ್ವದಲ್ಲಿ ಸ್ಥಳೀಯ ಆಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು. ಶೌಚಾಲಯ ತರೆವುಗೊಳಿಸಿರುವ ಸ್ಥಳದಲ್ಲಿಯೇ ಪುನಃ ನಿರ್ಮಾಣ ಮಾಡುವವರೆಗೂ, ತಮ್ಮ ಹೋರಾಟ ಹಾಗೂ ಪ್ರತಿಭಟನೆ ನಿಲ್ಲದು ಎಂದು ಅವರು ಸ್ಪಷ್ಟಪಡಿಸಿದ್ದಾರು. ಸಂಬಂಧಿಸಿದಂತೆ ಮೂರು ವಾರ್ಡ್ ಗಳ ನೂರಾರು ಬಡ ಮಹಿಳೆಯರು, ಜನವಾದಿ ಮಹಿಳಾ ಸಂಘಟನೆ ಹಾಗೂ ಸಿಐಟಿಯು ಸಂಘಟನೆ ಸಹಯೋದೊಂದಿಗೆ, ಶೌಚಾಲಯ ಸೇವೆ ದೊರೆಯುವವರೆಗೂ ಹೋರಾಟ ಮಾಡುವುದು ಬೀಡುವುದಿಲ್ಲಾ ಎಂದು ತಿಳಿಸಿದರು. ಈ ವಿಷಯ ಶಾಸಕರ ಗಮನಕ್ಕೆ ಬಂದಿದ್ದು ಹೈಟೆಕ್ ಶೌಚಾಲಯವನ್ನು ಬೇರೆ ಕಡೆ ಹೊಸದಾಗಿ ನಿರ್ಮಿಸಿ ಕೊಡುತ್ತೇವೆ ಎಂದು ಅವರಿಗೆ ತಿಳಿಸಿದರು. ಪಟ್ಟಣದ ನಿವಾಸಿಗಳು ಶೌಚಾಲಯಕ್ಕೆ ಹೋಗಲು ದೂರವಾಗುತ್ತೆ ಅಲ್ಲದೆ ವಿಕಲಚೇತನರು, ವೃಂದರು, ಮಕ್ಕಳಿಗೆ, ಸಮಸ್ಯೆ ಯಾಗುತ್ತೆ ಆದಕಾರಣ ನಮಗೆ ಅದೇ ಸ್ಥಳದಲ್ಲಿ ಮಹಿಳಾ ಹೈಟ್ಯಾಕ್ ಶೌಚಾಲಯವನ್ನು ನಿರ್ಮಿಸಿ ಕೊಡಬೇಕೆಂದು ಮಹಿಳೆಯರು ಆಗ್ರಹಿಸಿದರು. ಶಾಸಕ ಎನ್ ವೈ ಗೋಪಾಲಕೃಷ್ಣ ಅವರು ಮಾತನಾಡಿ ಅಲ್ಲಿ ವಾಸ ಮಾಡುತ್ತಿರುವ ಸುತ್ತಮುತ್ತಲಿನ ಜನರನ್ನು ವಿಚಾರಿಸಿ ಅದೇ ಸ್ಥಳದಲ್ಲಿ ಹೈಟ್ಯಾಕ್ ಶೌಚಾಲಯವನ್ನು ನಿರ್ಮಿಸಿ ಕೊಡಬೇಕೆಂದು ಸಂಬಂಧಪಟ್ಟ ಪಟ್ಟಣ ಪಂಚಾಯತಿ ಇಂಜಿನಿಯರಿ ಅವರನ್ನು ಸ್ಥಳಕ್ಕೆ ಕರೆಸಿ ಮಾತನಾಡಿ ನಾಳೆಯಿಂದಲೇ ಸಂಬಂಧ ಪಟ್ಟ ಅಧಿಕಾರಿಗಳನ್ನು ಕರೆಸಿ ಮೀಟಿಂಗ್ ಮಾಡಿ ನಾಳೆನೇ ಸ್ಥಳ ಪರಿಶೀಲಿಸಿ ಶೌಚಾಲಯವನ್ನು ನಿರ್ಮಿಸಿಕೊಡಲು ಅನುಮತಿ ಮಾಡಿಕೊಡಿ ಎಂದು ಅವರಿಗೆ ತಿಳಿಸಿದರು. ಇದೇ ವೇಳೆ ಶಾಸಕರು ಮಾತನಾಡುತ್ತಾ ಖುಷಿಯಿಂದ ಉದ್ಘಾಟನೆ ಕಾರ್ಯಕ್ರಮವನ್ನು ಸಿಐಟಿಯು ಮುಖಂಡ ಗುನ್ನಳ್ಳಿ ರಾಘವೇಂದ್ರ ನೀವೇ ಉದ್ಘಾಟನೆ ಮಾಡಬೇಕೆಂದು ತಿಳಿಸಿದರು.

ವರದಿಗಾರರು : ಸಿ ಅರುಣ್ ಕುಮಾರ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend