ಜೀವನಾಡಿ ಚಿನ್ನಹಗರಿ ನೀರು ಕಂಡ ಉಪನದಿಗೆ ಜೀವ ಕಳೆ…!!!

Listen to this article

ಜೀವನಾಡಿ ಚಿನ್ನಹಗರಿ ನೀರು ಕಂಡ ಉಪನದಿಗೆ ಜೀವ ಕಳೆ

ಕೂಡ್ಲಿಗಿ ತಾಲ್ಲೂಕಿನ ಹೂಡೇಂ ಗ್ರಾಮದ ಚಿನ್ನ ಹಗರಿ ನದಿಗೆ ಜೀವ ಕಳೆ ಬಂದಿದೆ. ಈ ನದಿಯು ಸುಮರು 300ಕ್ಕು ಹೆಚ್ಚು ಕೀ.ಮೀ. ದೂರ ಅರಿಯುವ ನದಿಯಾಗಿದೆ. ದಾವಣಗೆರೆ. ಚಿತ್ರದುರ್ಗ. ಜಗಳೂರು. ಕೂಡ್ಲಿಗಿ ತಾಲ್ಲೂಕಿನ ಜೀವನಾಡಿಯಾಗಿರುವ ಚಿನ್ನ ಹಗರಿ ಉಪನದಿ ಮಳೆಯಿಲದ ಬತ್ತಿ ಹೋಗಿತು ಕಳೆದ ದಿನಗಳಿಂದ ಸುರಿದ ಮಳೆಯಿಂದ. ಚಿನ್ನ ಹಗರಿ ನಂದಿ ತುಂಬಿದೇ. ಕಳದ ವಾರದಿಂದ ದಾವಣಗೆರೆ. ಚಿತ್ರದುರ್ಗ. ಕೂಡ್ಲಿಗಿ. ಜಗಳೂರು. ಜಿಲ್ಲೆಯ ವ್ಯಾಪ್ತಿಯ ಉತ್ತಮ ಮಳೆ ಆಗುವುದರಿಂದ ಚಿನ್ನ ಹಗರಿ ಉಪನದಿಗೆ ಜೀವ ಕಳೆ ಬಂದಿದೆ. ಹೂಡೇಂ ಗ್ರಾಮದ ಜಾನುವಾರುಗಳ ಪಾಲಿಗೆ ಜೀವ ಸಂಜೀವಿನಿಯಾಗಿರುವ ನದಿಯು ಪೂರ್ಣ ಬತ್ತಿ ಯಾಗಿದೆ. ಕಳೆದ ವರ್ಷದಿಂದ ಉತ್ತಮ ಮಳೆ ಇಲ್ಲದೆ ತತ್ತರಿಸಿದ ರೈತರ ಮುಖದಲ್ಲಿ ಈಗ ಆಶಾಭಾವ ಮೂಡಿದೆ. ಹೂಡೇಂ ಸುತ್ತ ಮುತ್ತಲಿನ. ಕಲ್ಲಹಳ್ಳಿ. ಮಾಳಹಳ್ಳಿ. ಕೆಂಚಮನಹಳ್ಳಿ. ಹೂಸೂರು ಪಿಚಾರರಹಟ್ಟಿ? ಸೇರಿದಂತೆ ಸುತ್ತಲಿನ ಜನರಲ್ಲಿ ನದಿ ಭರ್ತಿಯಾದ ಸಂತನ ಮೂಡಿದೆ. ಚಿತ್ರದುರ್ಗ ಹಾಗೂ ದಾವಣಗೆರೆ, ಜಗಲೂರು ತಾಲೂಕಿನ ಮೂಲಕ ಹರಿಯುವ ಜನಗಿಹಳ್ಳವು ಸಾಂಸ್ಕೃತಿಕವಾಗಿ ಮಹತ್ವ ಪಡೆದಿದೆ. ಇದನ್ನು ಚಿನ್ನಹಗರಿ, ಚಿಕ್ಕಹಗರಿ, ಸಣ್ಣ ಹಗರಿ ಎಂದು ಕರೆಯುವುದುಂಟು. ಅಲ್ಲದೆ ಜನಗಿಹಳ್ಳವೆಂದೂ ಕರೆಯುವುದುಂಟು. ಜನಗಿ ಎಂದರೆ ನೀರು ಬಸಿಯುವುದು, ಜಿನುಗು, ಜೋಗು ಎಂಬ ಅರ್ಥಗಳನ್ನು ನೀಡಲಾಗಿದೆ. ಈ ಜನಗಿಹಳ್ಳವು ಮೂಲತಃ ಚಿತ್ರದುರ್ಗದ ಪಶ್ಚಿಮ ಬೆಟ್ಟಗಳಲ್ಲಿ ಹುಟ್ಟಿ ಚಿತ್ರಳ್ಳಿಯಿಂದ ಹರಿದು ಕಾತ್ರಾಳು ಕೆರೆಯ ಮೂಲಕ ಹರಿದು ಸಂಗೇನಹಳ್ಳಿ ಕೆರೆಗೆ ತಲುಪುತ್ತದೆ. ತರುವಾಯ ಅಲ್ಲಿಂದ ಕಲ್ಲೇದೇವರಪುರ, ದೊಣ್ಣೆಹಳ್ಳಿ, ಚಿಕ್ಕಮಲ್ಲನಹೊಳೆಯ, ಕೊಲಮ್ಮನಹಳ್ಳಿ, ಟಿ ಕಲ್ಲೇಹಳ್ಳಿ, ಅಬ್ಬೇನಹಳ್ಳಿ, ತಿಪ್ಪೇಹಳ್ಳಿ, ಕಾತ್ರಿಕನಹಟ್ಟಿ, ಹೂಡೇಂ, ಕಾಯಕನಹಳ್ಳಿ, ಚಿಕ್ಕೋಬನಹಳ್ಳಿ, ಸಿದಯ್ಯನ ಕೋಟೆ ಮೊಳಕಾಲ್ಮೂರು ತಾಲೂಕಿನ ರಂಗಯ್ಯನ ದುರ್ಗಾ ಡ್ಯಾಮ್ ಗೆ ಸೇರುತ್ತೆ. ಈ ಮೂಲಕ ಹರಿದು ಬ್ರಹ್ಮಗಿರಿ ಮೊದಲಾದ ಪ್ರಾಚೀನ ಎಡೆಯನ್ನು ದಾಟಿ ಆಂಧ್ರಪ್ರದೇಶದ ಗಡಿಭಾಗದಲ್ಲಿ ಹಗರಿಯನ್ನು ಸೇರಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಬಳಿ ತುಂಗಭದ್ರಾ ನದಿಯನ್ನು ಸೇರುತ್ತದೆ. ಹೀಗೆ ಜನಗಿಹಳ್ಳ ಜಗಲೂರು ತಾಲೂಕಿನಲ್ಲಿ ಹರಿಯುವಾಗ ಅದಕ್ಕೆ ಅಡ್ಡಲಾಗಿ ಹಲವಾರು ಕೆರೆಕಟ್ಟೆಗಳನ್ನು ನಿರ್ಮಿಸಿರುವುದನ್ನು ಕಾಣಬಹುದು. ಅವುಗಳಲ್ಲಿ ಸಂಗೇನಹಳ್ಳಿ ಕೆರೆಯೂ ಒಂದು. ಜನಗಿಹಳ್ಳ ಹರಿಯುವಾಗ ಅದಕ್ಕೆ ಅಡ್ಡಲಾಗಿ ನಿರ್ಮಿಸಿರುವ ಕೆರೆಗಳಲ್ಲಿ ಅತ್ಯಂತ ಪ್ರಮುಖವಾದದ್ದು ಸಂಗೇನಹಳ್ಳಿ ಕೆರೆ. ಶಾತವಾಹನ ಕಾಲದಲ್ಲಿ ಮಾನವನು ಜಲ ಬಳಕೆಗಾಗಿ ಕೆರೆಕಟ್ಟೆಗಳನ್ನು ನಿರ್ಮಿಸಿಕೊಂಡು ನೀರಾವರಿ ಕಾರ್ಯಗಳನ್ನು ಮಾಡಿಕೊಂಡಿರುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ. ಈ ಕೆರೆಗೆ ಕಾತ್ರಾಳ ಕೆರೆಯಿಂದ ಕೋಡಿ ಬಿದ್ದು ಹೆಚ್ಚಾಗಿ ಹರಿಬರುವ ನೀರು ಹಾಗೂ ಸುತ್ತಮುತ್ತಲಿನ ಪ್ರಾಕೃತಿಕವಾದ ಹಳ್ಳ, ಕೊಳ್ಳ, ಕಣಿವೆಗಳಿಂದ ಬರುವ ನೀರು ಬಹುಮುಖ್ಯ ಮೂಲವಾಗಿದೆ. ಈ ನಡುವೆ ಹಲವು ಬಾರಿ ಹಬ್ಬದ ಸನ್ನಿವೇಶದಲ್ಲೂ ಇಲ್ಲಿನ ಜನ ಸಮಸ್ಯೆ ಅನುಭವಸಿದರು. ಗಂಗೆಪೂಜೆಗೆ ಹೋಗಿ ಬರುವುದಕ್ಕೆ ಸಮಸ್ಯೆಯಾಗಿತ್ತು. ಅದಕ್ಕೆಲ್ಲ ಪರಿಹಾರ ಎಂಬಂತೆ ಚಿನ್ನ ಹಗರಿ ಹರಿಯುತ್ತಿರುವುದು ತುಂಬಿ ಜನರಲ್ಲಿ ಹಬ್ಬದ ಸಂಭ್ರಮ ಕಾಣಿಸಿದೆ. ಕಳೆದ ಎರಡು ವರ್ಷಗಳ ಹಿಂದೆ 2020 ರಂದು ಈ ನದಿಗೆ ಜೀವ ಕಳೆ ಬಂದಿದ್ದು, ನಂತರ 2021 ರಂದು ಈ ನದಿ ಬತ್ತಿ ಹೋಗಿತ್ತು. ಈ ಹಳ್ಳಕ್ಕೆ ಮತ್ತೆ 2022ರಂದು ಸುರಿದ ಮಳೆಯಿಂದ ಚಿನ್ನ ಹಗರಿ ನದಿಗೆ ಜೀವ ಕಳೆ ಬಂದಿದೆ ಎಂದು ಇಲ್ಲಿನ ಸ್ಥಳೀಯ ರೈತರು ತಿಳಿಸಿದರು. ಕಳೆದ ವರ್ಷದಿಂದ ಉತ್ತಮ ಮಳೆ ಇಲ್ಲದೆ ತತ್ತರಿಸಿದ ರೈತರ ಮುಖದಲ್ಲಿ ಈಗ ಆಶಾಭಾವ ಮೂಡಿದೆ.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend