ಸಾಧನೆ ಸಾಧಕರ ಸೊತ್ತೆ ವಿನಹ ಸೋಮಾರಿಗಳ ಸೊತ್ತಲ್ಲ ಎಂದು ತೆಗ್ಗಿನ ಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯರು ಹೇಳಿದರು…!!!

Listen to this article

ಸಾಧನೆ ಸಾಧಕರ ಸೊತ್ತೆ ವಿನಹ ಸೋಮಾರಿಗಳ ಸೊತ್ತಲ್ಲ ಎಂದು ತೆಗ್ಗಿನ ಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯರು ಹೇಳಿದರು.

ಹರಪನಹಳ್ಳಿ :-ಪಟ್ಟಣದ ತೆಗ್ಗಿನ ಮಠದ ಚೆಂದ್ರಶೇಖರ ಸ್ವಾಮಿಸಭಾ ಭವನದಲ್ಲಿ ವೇದಮೂರ್ತಿ ಶ್ರೀ ಟಿ.ಎಂ. ಚಂದ್ರಶೇಖರಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಶ್ರೀ ಟಿ.ಎಂ. ಚಂದ್ರಶೇಖರಯ್ಯನವರಿಗೆ 75 ವರ್ಷಗಳಾಗಿದ್ದರೂ ಸದಾ ಕ್ರೀಯಾ ಶೀಲರಾಗಿದ್ದಾರೆ.

ಮನುಷ್ಯನಿಗೆ ಚಟುವಟಿಕೆ ಬಹುಮುಖ್ಯವಾಗಿದೆ.
ಶ್ರೀಮಠ ಅಕ್ಷರ ಜ್ಙಾನ ನೀಡವುದರಜೋತೆಗೆ ಅನ್ನದಾಸೋಹ ಸಮೂಹಿಕ ವಿವಾಹಗಳು ಸೇರಿದಂತೆ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೋಂಡು ಬರಲಾಗುತ್ತಿದ್ದು,ಇನ್ನು ಅನೇಕ ಸಮಾಜ ಮುಖಿ ಕಾರ್ಯಗಳು ಜರುಗುತ್ತವೆ ಎಂದರು.

ಕಳೆದ 73 ವರ್ಷಗಳಿಂದ ಚಂದ್ರಶೇಖರಯ್ಯನವರು ಸಂಸ್ಥೆಯ ಅಭಿವೃದ್ದಿಗಾಗಿ ವ್ಯವಸ್ಥಾಪಕರಾಗಿ ಕಾರ್ಯದರ್ಶಿಗಳಾಗಿ ಶೈಕ್ಷಣಿಕ. ಧಾರ್ಮಿಕ.ಸಾಮಾಜಿಕವಾಗಿ ಸಾಕಷ್ಟು ಶ್ರಮಿಸುತ್ತ ಬಂದಿದ್ದಾರೆ. ಸ್ವಾಮಿನಿಷ್ಟೆ ಮತ್ತು ಸಂಸ್ಥೆಯ ಮೇಲೆ ಇಟ್ಟ ಅಪಾರವಾದ ಅಭಿಮಾನದಿಂದ ಇಂದು ತೆಗ್ಗಿನ ಮಠ ಸಂಸ್ಥೆ ಬಹು ಎತ್ತರಕ್ಕೆ ಬೆಳದಿದೆ.

ಹರಪನಹಳ್ಳಿ ತಾಲ್ಲೂಕು ಶೈಕ್ಷಣಿಕವಾಗಿ ದೇಶದ ಭೂಪಟದಲ್ಲಿ ಗುರುತಿಸಿ ಕೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಮಾನಿಹಳ್ಳಿ ಪುರವರ್ಗ ಮಠದ ಶ್ರೀ ಮಳೆಯೋಗಿಶ್ವರ ಶಿವಚಾರ್ಯ ಸ್ವಾಮಿಜೀ ಮಾತನಾಡಿ ಶ್ರೀ ಟಿ.ಎಂ. ಚಂದ್ರಶೇಖರಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮ ಯಶಸ್ವಿ ಮಾಡುವ ಹೋಣೆಗಾರಿಕೆ ನಮ್ಮ ನಿಮ್ಮಲ್ಲರ ಮೇಲೆ ಇದೆ ತೆಗ್ಗಿನ ಮಠಕ್ಕೆ ಸುದಿರ್ಘ 53 ವರ್ಷಗಳ ಕಾಲ ಸೇವೆಮಾಡಿ ಮಠವನ್ನು ಕಟ್ಟಿ ಬೆಳೆಸಿದ ಯೋಗ್ಯ ವಕ್ತಿಗಳ ಕಾರ್ಯಕ್ರಮ ಮಾಡವುದು ನಮ್ಮಗಳ ಅಶಯವಾಗಿದೆ ಎಂದರು.

ಹರಪನಹಳ್ಳಿ ತೆಗ್ಗಿನ ಮಠದ ಕಾರ್ಯದರ್ಶಿ ಟಿ.ಎಂ. ಚೆಂದ್ರಶೇಖರಯ್ಯ ಅವರು ಮಾತನಾಡಿ ೧೯೬೯ರಿಂದ ಇಲ್ಲಿಯವರೆಗೆ ಸಂಸ್ಥೆಗಾಗಿ ಕೆಲಸಮಾಡಿದ್ದೆನೆ ಇಗಾಗಲೇ ೬೫ನೇ ವರ್ಷದ ಷಷ್ಠಬ್ದಿ ಕಾರ್ಯಕ್ರವನ್ನು ಯಶಸ್ವಿಯಾಗಿ ಮಾಡಿದ್ದಕ್ಕಾಗಿ ಧನ್ಯವಾದಗಳು ಮುಂದಿನ ೭೫ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡುತ್ತಿರಿ ಎಂಬ ಆಶಯ ನಮಗಿದೆ ಎಂದ ಅವರು ತೆಗ್ಗಿನ ಮಠದಲ್ಲಿ ಜಾತಿ ಮತ ಬೇದ ಮಾಡದೆ ಸರ್ವ ಧರ್ಮದವರನ್ನು ಕರೆದು ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತ ಬರುತ್ತಿದ್ದೆವೆ ಎಂದರು.

ಇದೆ ವೇಳೆ ಪುರಸಭೆ ಮಾಜಿ ಅಧ್ಯಕ್ಷ ಎಂ. ರಾಜಶೇಖರ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ. ಕೆ.ಉಚ್ಚೆಂಗೆಪ್ಪ, ನಿವೃತ್ತ ಇ.ಓ. ಎಚ್.ಎಂ. ಕೋಟ್ರಯ್ಯ, ನ್ಯಾಯವಾಧಿ ಗಂಗಾಧರ ಗುರುಮಠ, ಪ್ರಾಂಶುಪಾಲ ಕೆ.ಸಿ. ಕುಲಕರ್ಣಿ.ಬಿ.ಇ.ಡಿ ಕಾಲೇಜು ನಿವೃತ್ತ ಪ್ರಾಂಶಪಾಲರಾದ ಟಿ.ಎಮ. ಸುಮಂಗಲ ಮಾತನಾಡಿದರು.

ಕಾರ್ಯಕ್ರಮದಲ್ಲಿ ಟಿ.ಎಂ. ಶಿವಕುಮಾರಸ್ವಾಮಿ, ಆಡವಿಹಳ್ಳಿಯ ವೀರಗಂಗಾಧರ ಹಾಲಸ್ವಾಮಿಜೀ, ವೀರಯ್ಯ, ನಿವೃತ್ತ ತಹಶಿಲ್ದಾರ ಕೋಟ್ರಪ್ಪ, ಕಟ್ಟಿ ರಂಗನಾಥ, ಟಿ.ಎಂ. ಶಿವಶಂಕರ್, ನಿವೃತ್ತ ಮುಖ್ಯ ಶಿಕ್ಷಕ ಸಿ.ಎಂ. ಕೋಟ್ರಯ್ಯ ಸೇರಿದಂತೆ ಇತರರು ಇದ್ದರು..

ವರದಿ. ಪ್ರತಾಪ್. ಸಿ. ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend