ಸತತವಾಗಿ ಸುರಿದ ಬಾರಿ ಮಳೆಗೆ ಜನರ ಜೀವನ ಅಸ್ತವ್ಯಸ್ತ…!!!

Listen to this article

ಸತತವಾಗಿ ಸುರಿದ ಬಾರಿ ಮಳೆಗೆ ಜನರ ಜೀವನ ಅಸ್ತವ್ಯಸ್ತ

ಕಾನಹೊಸಹಳ್ಳಿ :- ಹೋಬಳಿಯಾದ್ಯಂತ ಬಿಟ್ಟು ಬಿಡದೆ ಸತತವಾಗಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ, ಬಣವಿಕಲ್ಲು ಚಿಕ್ಕಜೋಗಿಹಳ್ಳಿ ಸೇರಿದಂತೆ ಬಹುತೇಕ ಗ್ರಾಮಗಳ ರೈತರ ಹೊಲಗಳಲ್ಲಿ, ಮೆಕ್ಕೆಜೋಳ ಶೇಂಗಾ, ಹತ್ತಿ ಬೆಳೆಗಳು, ಸಂಪೂರ್ಣ ಜಲಾವೃತಗೊಂಡಿದ್ದು ಅಲ್ಲದೆ ಕಟಾವಿನ ಹಂತದಲ್ಲಿರುವ ಹೊಲಗಳಲ್ಲಿ ನೀರು ತುಂಬಿರುವುದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ, ಏನೋ ಕಷ್ಟಪಟ್ಟು ಕೂಡಿಟ್ಟ ಹಣದಲ್ಲಿ ಗೊಬ್ಬರ ಬೀಜ ವ್ಯವಸಾಯ ಎಂದು ಮಾಡಿಕೊಂಡು ಜೀವನ ನಡೆಸುತ್ತಿದ್ದ ರೈತರಿಗೆ ಜೀವನ ಮಾಡಲು ತುಂಬಾ ಸಂಕಷ್ಟ ಪರಿಸ್ಥಿತಿ ಒದಗಿ ಬಂದಿರುತ್ತದೆ, ಗ್ರಾಮಗಳಲ್ಲಿ ಬಹುತೇಕ ಮನೆಗಳು ಮಳೆಯಿಂದ ಬಿದ್ದು ಕೆಲವರಿಗೆ ವಾಸಮಾಡಲು ಮನೆಗಳು ಇಲ್ಲದೆ ಪರದಾಡುತ್ತಿದ್ದಾರೆ, ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿಗಳು ಮತ್ತು ಸಹಾಯಕರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇವರ ಜೊತೆಗೆ ತಾಲೂಕು ತಹಶೀಲ್ದಾರರು ಕೂಡ ರೈತರ ಜಮೀನುಗಳಿಗೆ ಹಾಗೂ ಗ್ರಾಮಗಳಲ್ಲಿ ಬಿದ್ದ ಮನೆಗಳನ್ನು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವಲ್ಲಿ ಮುಂದಾಗಬೇಕೆಂದು ಗ್ರಾಮದ ಮುಖಂಡರು ರೈತರು ಮನವಿ ಮಾಡಿಕೊಂಡಿರುತ್ತಾರೆ. ಬಣವಿಕಲ್ಲು ಗ್ರಾಮದ ಹೈವೇ ರಸ್ತೆ ಪಕ್ಕದಲ್ಲಿರುವ ವಾಸಿಸುವ ಕುಟುಂಬಸ್ಥರ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ ಏಕೆಂದರೆ ಮಳೆ ಬಂದರೆ ಸಾಕು ಹೈವೇ ಮೇಲೆ ಹೋಗುತ್ತಿರುವ ನೀರಲ್ಲ ಸರ್ವಿಸ್ ದಾರಿಯಲ್ಲಿ ಬಂದು ಮನೆಗೆ ನುಗ್ಗುತ್ತವೆ. ಪ್ರತಿ ವರ್ಷ ಇದೇ ಗೋಳಾಗಿದೆ ಎಂದು ಬಣವಿಕಲ್ಲು ಗ್ರಾಮಸ್ಥರು ಮಾತನಾಡುತ್ತಾರೆ, ಎಲ್ಲಾ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿ ಹೋದರು ಕೂಡ ಈ ಗೋಳು ನಮಗೆ ತಪ್ಪುತ್ತಿಲ್ಲ ಇಲ್ಲಿಯ ಪರಿಸ್ಥಿತಿ ಸುಧಾರಿಸುವುದು ಯಾವಾಗ ಎಂದು ಕೆಲವು ಗಣ್ಯರು, ಜನಪ್ರತಿನಿಧಿಗಳು ಸಂಘಟನೆಯ ಮುಖಂಡರ ಮಾತಾಗಿದೆ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿರುವುದು ಒಂದುಕಡೆ ಸಂತೋಷವಾದರೆ ಹೊಲಗಳಲ್ಲಿ ನೀರು ನಿಂತು ಬೆಳೆಗಳು ಹಾನಿಯಾಗಿರುವುದು ಇನ್ನೊಂದು ಕಡೆ ದುಃಖಕರವಾದವಿಷಯವಾಗಿರುತ್ತದೆ ಎಂದು ರೈತರು ಗ್ರಾಮಸ್ಥರು ಹೇಳುತ್ತಾರೆ
ಶೀಘ್ರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಗಳಿಗೆ ಮತ್ತು ರೈತರ ಜಮೀನುಗಳಿಗೆ ಭೇಟಿಕೊಟ್ಟು ಸರ್ಕಾರದಿಂದ ಸಿಗುವ ಪರಿಹಾರವನ್ನು ನೀಡಬೇಕೆಂದು ಸಾರ್ವಜನಿಕರು ರೈತರು ಗ್ರಾಮಸ್ಥರು ಮನವಿ ಮಾಡಿಕೊಂಡಿರುತ್ತಾರೆ.ಸತತವಾಗಿ ಸುರಿದ ಮಳೆಯಿಂದ ಕಡೆಕೊಳ ಗ್ರಾಮದಲ್ಲಿ ಗೌಡರ ಕೊಟ್ರೇಶ್ ರವರ ಮನೆ ಕುಸಿದಿರುವುದು.ಸತತವಾಗಿ ಸುರಿದ ಮಳೆಗೆ ರೈತನ ಶೇಂಗಾ ಬೆಳೆಯಲ್ಲಿ ನೀರು ನಿಂತಿರುವುದು

ವರದಿ *ಡಿ ಎಂ ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend