ಅಂಗಳದಲ್ಲಿ ನಿಲ್ಲುವ ನಾಯಿ, ಹೃದಯದಲ್ಲೇಕೆ ನೆಲೆಸುತ್ತದೆ..?

Listen to this article

ಅಂಗಳದಲ್ಲಿ ನಿಲ್ಲುವ ನಾಯಿ, ಹೃದಯದಲ್ಲೇಕೆ ನೆಲೆಸುತ್ತದೆ..?

ಇದು ಅಂತಿಂಥ ಪ್ರೀತಿಯಲ್ಲ. ಈ ಪ್ರೀತಿಯಲ್ಲಿ ಸರ್ವಸ್ವವನ್ನೂ ಕಾಣುವವರಿದ್ದಾರೆ. ಪ್ರೀತಿಯನ್ನು ನಿತ್ಯ ಪರಿಪಾಲಿಸುವವರು, ಈ ಪ್ರೀತಿಗೆ ಸದಾ ಪರಿತಪಿಸುವವರಿದ್ದಾರೆ. ಇದಕ್ಕಾಗಿ ಸಕಲವನ್ನೂ ತ್ಯಜಿಸಿ ಹುಚ್ಚರಾದವರಿದ್ದಾರೆ. ಒಂದು ರೀತಿಯಲ್ಲಿ ಇದು ಮಾನವ ಪ್ರೇಮವನ್ನೂ ಮೀರಿದ್ದು. ಮನುಷ್ಯನ ಕಕ್ಕುಲಾತಿ, ಕಿಲಕಿಲತೆಯ ಸಾಕಾರರೂಪ. ಇದು ಒಂಥರಾ ಹುಚ್ಚುಕೋಡಿ ಪ್ರೇಮ.
ಇದನ್ನು ಶ್ವಾನ ಪ್ರೇಮ ಅಂತಿಟ್ಕೊಳೋಣ !

ಮನೆಯ ಅಂಗಳದಲ್ಲಿ, ಹೃದಯದ ಪಡಸಾಲೆಯಲ್ಲಿ ಬಿಟ್ಟುಕೊಳ್ಳುವ ನಾಯಿ ಇದೆಯಲ್ಲ ಅದು ನಿಧಾನವಾಗಿ ನಮ್ಮ ಮೈ ಮನಗಳನ್ನು ಆವರಿಸಿ, ಒಬ್ಬ ಗೆಳೆಯನಂತೆ, ಗೆಳತಿಯಂತೆ, ಕೊರಳ ಸಂಗಾತಿಯಂತೆ ಮನೆಯ ಪ್ರೀತಿ ಪಾತ್ರ ವ್ಯಕ್ತಿಯಂತೆ ನಮ್ಮೊಳಗೆ ಪಸರಿಸಿ, ನಮ್ಮ ಜೀವ, ಜೀವನದ ಒಂದು ಭಾಗದಂತೆ ಆಕ್ರಮಿಸಿ ಕೊನೆಗೊಂದು ದಿನ ಹೇಳದೇ ಕೇಳದೇ ಈ ಜಗತ್ತಿನಿಂದ ಹೊರಟು ನಮ್ಮೊಳಗೊಂದು ಶೂನ್ಯ ವಿರಹ, ವೇದನೆ, ಅಗಲಿಕೆಯನ್ನು ಸೃಷ್ಟಿಸುವ ಪರಿ ಇದೆಯಲ್ಲ ಅದು ಬಟಾ ಭಯಂಕರ. ಅದಕ್ಕಾಗಿ ಹತ್ತಾರು ವರ್ಷಗಳಿಂದ ಸಾಕಿದ ನಾಯಿಯಾಂದು ಸತ್ತು ಹೋದರೆ ಮನೆ ಮಂದಿಯೆಲ್ಲ ಊಟ ತಿಂಡಿ ಬಿಟ್ಟು ಮಂಕು ಹಿಡಿದವರಂತೆ ಕುಳಿತಿರುತ್ತಾರೆ. ದಿನವಿಡೀ, ತಿಂಗಳುಗಟ್ಟಲೆ ರೋದಿಸುತ್ತಾ ಈ ಜೀವನವೇ ಮುಗಿದು ಹೋಯಿತು ಎಂಬಂತೆ ತಲೆ ಮೇಲೆ ಕೈ ಹೊತ್ತು ಕುಳಿತಿರುತ್ತಾರೆ. ಮಗ, ಮಗಳ ಸಾವನ್ನು ಅನುಭವಿಸಿದಂತೆ ಸಾಕು ನಾಯಿಯಾಂದು ಸತ್ತರೆ ಕರುಳು ಕಿತ್ತು ಬರುವ ದುಃಖ ಮುಂದಿಟ್ಟುಕೊಂಡು ಸಂಕಟಪಡುತ್ತಿರುತ್ತಾರೆ. ಮನೆ ನಾಯಿಯ ಸಾವಿನ ಶೋಕ ಬಾಧೆ ತಾಳಲಾರದೆ ಹುಚ್ಚರಾದವರಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರಿದ್ದಾರೆ, ಮನೆ ಮಠ ಕಳೆದುಕೊಂಡವರಿದ್ದಾರೆ.

ಮನುಷ್ಯನಿಗೆ ಅತಿ ಪ್ರೀತಿ ಪಾತ್ರ ಪ್ರಾಣಿಗಳಲ್ಲಿ ನಾಯಿಯೂ ಒಂದು.
ಹೀಗೆ ಕೂಡ್ಲಿಗಿ ಪಟ್ಟಣ ದ 10 ನೇ ವಾರ್ಡ್ ನಿವಾಸಿ ಅದ ಮಂಜು ಮಯೂರ, ಎಂಬುವರು ಸಾಕಿದ್ದ ಜಾನಿ ಎಂಬ ನಾಯಿ ಮಂಜು ಮಯೂರ ಮನೆಯಲ್ಲಿ ವಯೋವೃದ್ಧ ಸಹಜ ಸಾವಿನಿಂದ ಮೃತಪಟ್ಟಿತು .. ನಾಯಿ ಸತ್ತಾಗ ಅದನ್ನ ಎಲ್ಲರಂತೆ ಬಿಸಾಡದೆ ಮಂಜು ಮಯೂರ ಟಿ. ಮಲೇಶ್, ಆಗೂ ಪ್ರಶಾಂತ್. ಜಾನಿಗೆ ಮನುಷ್ಯರು ಸತ್ತಆಗ ಮಣ್ಣು ಮಾಡುವಂತೆಯೇ ತಮ್ಮ ತೋಟದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ರು. ಸುಮಾರು 15 ವರ್ಷದ ದಿಂದ ಗೌಡ್ರು ಓಣಿಯ ಎಲ್ಲರ ಪ್ರೀತಿಯ ನಾಯಿ ಜಾನಿ ಅಂತ್ಯಸಂಸ್ಕಾರದ ಕಾರ್ಯದಲ್ಲಿ ಮಲ್ಲಾಪುರದ ಕುಟುಂಬಸ್ಥರು ಭಾಗಿಯಾಗಿದ್ರು.. ಹತ್ತಾರು ವರ್ಷಗಳಿಂದ ಜಾನಿ, ಮಂಜು ಮಯೂರ ನ ಕುಟುಂಬದ ಸದಸ್ಯನಂತೆ ಇತ್ತು.. ಸದಾ ಸಹೋದರ ಕೊಟ್ರೇಶ ನ ಜೊತೆ ಸುತ್ತಾಡ್ತಿದ್ದ ಜಾನಿ ಹೊಲ, ಗದ್ದೆ ಎಲ್ಲಾ ಕಡೆಯೂ ಓಡಾಡ್ತಿತ್ತು.. ಇಂದು ವಿಧಿಗೆ ಕರೆಗೆ ಹೋಗಟ್ಟು ನಮ್ಮನ್ನೆಲ್ಲಾ ಅಗಲಿ ಬಾರದ ಲೋಕಕ್ಕೆ ಪಯಣಿಸಿದೆ …

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend