ನಾಗರ ಪಂಚಮಿ ಹಬ್ಬ ನಾಡಿಗೆ ದೊಡ್ಡದು… “!!

Listen to this article

ನಾಗರ ಪಂಚಮಿ ಹಬ್ಬ ನಾಡಿಗೆ ದೊಡ್ಡದು

ನಮ್ಮಸನಾತನ ಹಬ್ಬಗಳು ತುಂಬಾ ವಿಶೇಷವಾದ ಸಂದೇಶಗಳನ್ನು ಒಳಗೊಂಡಿರುತ್ತವೆ.ಅಲ್ಲದೆ ಅದರಲ್ಲಿ ಗೂಡಾವಾದ ವೈಜ್ಞಾನಿಕ ವಾದ ತಳಹದಿಯನ್ನು ಹೊಂದಿರುತ್ತದೆ.
ಶ್ರಾವಣಮಾಸವೆಂಬುದು ಸಾಲು-ಸಾಲು ಹಬ್ಬಗಳನ್ನು ಒಳಗೊಂಡಿರುವಂತಹ ಹಬ್ಬವಾಗಿದೆ .ಈ ಹಬ್ಬಗಳಲ್ಲಿ ನಾಗರಪಂಚಮಿಯು ಪ್ರಮುಖವಾದದ್ದು “ನಾಗರಪಂಚಮಿ ನಾಡಿಗೆ” ದೊಡ್ಡದು ಎಂಬ ಉಕ್ತಿಯಿದೆ. ಭೂದೈವವೆಂದು ಪ್ರತ್ಯಕ್ಷದೈವವೆಂದು ನಾಗರಹಾವುಗಳನ್ನು ಕರೆಯುವರು.ಸಾಮಾನ್ಯವಾಗಿ ಹೊಲದಲ್ಲಿ ಗದ್ದೆಯಲ್ಲಿ ಕೆಲಸಮಾಡುವ ರೈತರು ಅವಗಳಿಂದ ರಕ್ಷಣೆ ಪಡೆಯಲು ಪೂಜೆಸುತ್ತಾರೆ ಎನ್ನಬಹುದು.ಅಲ್ಲದೆ ಬೆಳೆಗಳನ್ನು ನಾಶಮಾಡಬಹುದಾದ ಕೀಟ.ಇಲಿಗಳ ತೊಂದರೆಗಳನ್ನು ಹೊಡೆದೊಡಿಸುವ ಕೆಲಸ ಮಾಡುವ ಈ ನಾಗರ ಹಾವುಗಳನ್ನು ಸ್ಮರಿಸುವಂತಹ ಹಬ್ಬವು ಇದಾಗಿದೆ ಎನ್ನಬಹುದು.
ಹಾಗೂ ಆಧ್ಯಾತ್ಮಿಯ ದೃಷ್ಟಿಯಿಂದ ನೋಡುವುದಾದರೆ ನಾಗದೇವತೆ ಎಂಬುದು ದೇವಾನುದೇವತೆಗಳ ಅಲಂಕಾರಿಕ ಆಭರಣವಾಗಿರುತ್ತದೆ ಹರಿಗೆ ಹಾಸಿಗೆಯಾದ ಹಾವು ಹರನ ತೋಳು ಮತ್ತು ಕೊರಳಲ್ಲಿ ಇರುವಂತದ್ದು .ಅಲ್ಲದೆ ಧರಣಿಯನ್ನು ಹೊತ್ತಿರುವನೆ ಆದಿಶೇಷ ಎಂಬ ಪುರಾಣಗಳ ಉಲ್ಲೇಖವಿದೆ.ದೇವತೆಗಳಿಗೆಲ್ಲ ಪ್ರಭಾವಳಿಯಾಗಿ ನಾಗನನ್ನು ಚಿತ್ರಿಸುವುದುಂಟು..ನಾಗಶಕ್ತಿಎಂಬುದು ಯೋಗದಲ್ಲಿ ಹೇಳಿರುವಂತೆ ಕುಂಡಲಿನಿ ಶಕ್ತಿ ಗೆ ಹೋಲಿಕೆ ಮಾಡಲಾಗಿದೆ.ಮೂಲಧಾರದಲ್ಲಿ ಸ್ಥಿತವಾಗಿರುವ ಸರ್ಪವೂ ದೈವಸ್ಮರಣೆಯಿಂದ ಅಥವಾ ಮಂತ್ರದಿಂದ ಅಥವಾ ಯೋಗದಿಂದ ಭಕ್ತಿಯಿಂದ ಕುಂಡಲಿನಿಯನ್ನು ಜಾಗೃತಿಮಾಡಬಹುದಾಗಿದೆ .ಆಧಾರದಿಂದ ಊಧ್ರ೯ವಾಗಿ ಸರ್ಪ ಚಲಿಸಿ ಸಹಸ್ರಾರದಲ್ಲಿರುವ ಅಮೃತವನ್ನು ಸ್ಪರಿಸುವಂತಹ ಕ್ರಿಯೆಯಾಗಿದೆ. ಜ್ಯೋತಿಷ್ಯವಾಗಿ ಹೇಳಬೇಕೆಂದರೆ ಕುಜದೋಷ ನಿವಾರಣೆಗೆ, ಶ್ರೀಘ್ರವಿವಾಹ ಪ್ರಾಪ್ತಿಗಾಗಿ ರಾಹು ಕೇತು ಕಾಡಾಟಗಳ ನಿವಾರಣೆಗಾಗಿ .ಸಂತಾನ ಪ್ರಾಪ್ತಿಗಾಗಿ ಈ ಒಂದು ಹಬ್ಬದ ಆಚರಣೆ ಚರ್ಮದ ದೋಷ ಇರುವಂತವರು ಹುತ್ತದ ಮಣ್ಣಿನಿಂದ ಸ್ನಾನ ಮಾಡುವರು ..ನಾಗರಕಲ್ಲುಗಳಿಗೆ ಇಲ್ಲವೆ ಹುತ್ತದ ಮಣ್ಣು (ಗೆದ್ದಲುಹುಳಗಳು ನಿಮಿ೯ಸಿದ )ನಲ್ಲಿತಯಾರಿಸಿದ ನಾಗಮೂತಿ೯ಗಳಿಗೆ ಹಾಲುಎರಿಯುವಂತಹ ವಿಶೇಷವಾದ ಹಬ್ಬ ಇದಾಗಿದೆ.
ಮನೆಯಲ್ಲಿ ತಾಯಂದಿರು ತಯಾರಿಸಿದ ಸಿಹಿ ಖಾದ್ಯ ಪದಾರ್ಥಗಳು ಉಂಡೆ ಗಾರ್ಗಿಚಕ್ಕುಲಿ ಮೊದಲಾದ ತಯಾರಿಸಿದ ವೈವಿಧ್ಯಮಯ ನೈವೇದ್ಯ ಗಳನ್ನು ನಾಗದೇವತಿಗೆ ಅರ್ಪಿಸಿ .ಹೊಸಬಟ್ಟೆ ಉಡುವುದು ಜೋಕಾಲಿ ಹಾಡುವುದು ತರುಣರು ಪಂದ್ಯಾವಳಿಯಗಳನ್ನು ಆಡುವುದು ಇತ್ಯಾದಿಗಳು.
ಒಟ್ಟಾರೆ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವ ಹಬ್ಬ ಅಣ್ಣಾ ತಂಗಿಯರುದ್ಯೋತಕ ಹಾಗೂ ಗರತಿ ತವರ ಮನೆಯ ನೆನೆಯುತ್ತಾ “ಪಂಚಮಿ ಹಬ್ಬ ಬಂದಿತವ್ವ ಅಣ್ಣಾ ಬರಲಿಲ್ಲ ಕರಿಯಾಕ”ಎಂಬ ಜಾನಪದ ಗೀತೆಯನ್ನು ನೆನಪಿಸುತ್ತದೆ ಜಿ.ಬಿ.ವಿನಯರಾಜ್ ಆಚಾರ್ಯ ಇಟ್ಟಿಗಿ ಉಪನ್ಯಾಸಕರು ‌‌ ಹೆಚ್.ಬಿ.ಹಳ್ಳಿ.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend