ಕೂಡ್ಲಿಗಿ: ತಹಶೀಲ್ದಾರ್ ಕಚೇರಿಯಲ್ಲಿ ಭಗೀರಥ ಜಯಂತಿ ಆಚರಣೆ…!!!

Listen to this article

ಕೂಡ್ಲಿಗಿ: ತಹಶೀಲ್ದಾರ್ ಕಚೇರಿಯಲ್ಲಿ ಭಗೀರಥ ಜಯಂತಿ ಆಚರಣೆ

ಕೂಡ್ಲಿಗಿ ಪಟ್ಟಣದ ತಾಲೂಕು ಕಚೇರಿ ಸಂಭಾಂಗಣದಲ್ಲಿ ಇಂದು ನಡೆದ ಭಗೀರಥ ಜಯಂತ್ಯುತ್ಸವವನ್ನು ಭಗೀರಥ ಭಾವಚಿತ್ರಕ್ಕೆ ಪುಷ್ಪ ನಮನ, ಪೂಜೆ ಸಲ್ಲಿಸಿ ಜಯಂತಿಯನ್ನು ಆಚರಿಸಲಾಯಿತು. ಇನ್ನು ಇದೇ ವೇಳೆ ತಹಶೀಲ್ದಾರ್ ಹಾಗೂ ದಂಡಾಧಿಕಾರಿಗಳು ಜಗದೀಶ್ ಟಿ ಅವರು ಭಗೀರಥ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪ ನಮನ, ಪೂಜೆ ಸಲ್ಲಿಸಿ ಮಾತನಾಡಿ ಎಲ್ಲರೂ ತಮ್ಮ ಬದುಕಿನ ಗುರಿ ಮುಟ್ಟಬೇಕಾದರೆ ಅಲ್ಲಿ ಭಗೀರಥ ಪ್ರಯತ್ನ ಇರಬೇಕು ಭಗೀರಥರಿಗೆ ಅಂತಹ ಛಲವಿದ್ದುದರಿಂದ ಭೂಮಿಗೆ ಗಂಗೆಯನ್ನು ಕರೆಸಿದರು ಎಂದು ಹೇಳಿದರು. ಇದೇ ವೇಳೆ ಭಗೀರಥರ ಕುರಿತು ಸಮಾಜದ ಮುಖಂಡರು ಕೆ.ಟಿ ಬಸವರಾಜ್ ಸಂಘದ ಅಧ್ಯಕ್ಷರು ಮಾತನಾಡಿ ಭಗೀರಥರು ಸಾವಿರಾರು ವರ್ಷ ತಪಸ್ಸು ಮಾಡಿ ಆಹಾರ, ಗಾಳಿ ತ್ಯಜಿಸಿ ಭೂಮಿಯನ್ನು ಪವಿತ್ರಗೊಳಿಸುವ ಉದ್ದೇಶದಿಂದ ಯಾವುದೇ ಅಡೆತಡೆ ಎದುರಾದರೂ ಛಲ ಬಿಡದೆ ಗಂಗೆಯನ್ನು ಭೂಮಿಗೆ ಕರೆತಂದರು. ಅಂತಹ ಪ್ರಯತ್ನವನ್ನು ನಾವು ಕೂಡ ನಮ್ಮ ಪಾರದರ್ಶಕ ಕೆಲಸದಲ್ಲಿ ಅಳವಡಿಸಿಕೊಳ್ಳಬೇಕು ದಾರ್ಶನಿಕರ ಸಾಧನೆ ಅವರು ನಡೆದು ಬಂದ ಕಷ್ಟಗಳ ಹಾದಿಯನ್ನು ತಿಳಿಸುತ್ತದೆ. ಮಹಾರಾಜರಾಗಿದ್ದ ಭಗೀರಥರು ತ್ಯಾಗ, ಹಟ, ಛಲದಿಂದ ಸಾಧನೆ ಮಾಡಿದರು. ಪ್ರತಿಯೊಬ್ಬರೂ ತಮ್ಮ ಗುರಿ ಮುಟ್ಟಲು ಅಥವಾ ಸಾಧನೆ ಮಾಡಲು ಭಗೀರಥರ ಸತತ ಪರಿಶ್ರಮ, ತ್ಯಾಗ, ಛಲ, ಸದ್ಗುಣಗಳನ್ನು ಅನುಸರಿಸಬೇಕು. ಎಲ್ಲ ದಾರ್ಶನಿಕರ ಜೀವನ ಚರಿತ್ರೆ, ಜೀವನಗಾಥೆ, ಮೌಲ್ಯವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ಈ ಕಾರ್ಯಕ್ರಮದಲ್ಲಿ ಕೆ ಟಿ ಬಸವರಾಜ್ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ವಿ.ಜಿ ವೆಂಕಟೇಶ್, ಪಂಪಾಪತಿ, ರವಿ, ರಾಜುಮೂರ್ತಿ, ಎಸ್ ರಾಜು, ಕೃಷ್ಣ ಶಿವರಾಜ್, ಜಿ ಮಾರುತಿ, ಚಂದ್ರಶೇಖರ್, ಹೊನ್ನೂರಸ್ವಾಮಿ, ಮಂಜಣ್ಣ, ವೀರೇಶ್ ಸೇರಿದಂತೆ ತಾಲೂಕು ಕಚೇರಿ ಸಿಬ್ಬಂದಿಗಳು ಹಾಗೂ ಭಗಿರಥ ಸಮಾಜದ ಮುಖಂಡರು ಉಪಸ್ಥಿತರಿದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend