ರಾಮಸಾಗರ ಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಕ್ಷಯರೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು…!!!

Listen to this article

ವಿಜನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಮಸಾಗರ ಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಕ್ಷಯರೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು ಕ್ಷಯರೋಗವನ್ನು ಮಕ್ಕಳು ಪ್ರತಿಜ್ಞೆ ಮಾಡುವುದರ ಮುಖಾಂತರ ಜಾಗೃತ ಮೂಡಿಸಿದರು ಈ ಕಾರ್ಯಕ್ರಮದ ಕುರಿತು ಶಾಲೆಯ ವಿಜ್ಞಾನ ಶಿಕ್ಷಕರಾದ ಸುದರ್ಶನ್ ಮಾತನಾಡಿ ಕ್ಷಯರೋಗ ಸಾಂಕ್ರಾಮಿಕ ರೋಗವಾಗಿದ್ದು ಯಾವುದೇ ವ್ಯಕ್ತಿ ಕೆಮ್ಮುವಾಗ ಅಥವಾ ಸೀನುವಾಗ ಮುಖ ಬಾಯಿಗೆ ಕರ ವಸ್ತ್ರ ಅಥವಾ ಬಟ್ಟೆ ಅಡ್ಡ ಹಿಡಿದು ಇತರರಿಗೆ ರೋಗ ಹರಡುವದನ್ನು ತಡೆಯಬಹುದು. ಮಾಸ್ಕ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಕ್ಷಯರೋಗ ನಿಯಂತ್ರಣಕ್ಕೆ ಸಹಕಾರಿ. ಸಾಂಕ್ರಾಮಿಕ ರೋಗವಾಗಿರುವುದರಿಂದ ಕ್ಷಯರೋಗ ನಿರ್ಮೂಲನೆಯಲ್ಲಿ ಪ್ರತಿಯೊಬ್ಬರ ಸಹಕಾರವೂ ಅತ್ಯಗತ್ಯ. ಕ್ಷಯರೋಗದ ಕುರಿತು ಅಗತ್ಯ ಮಾಹಿತಿ

ಪ್ರತಿಯೊಬ್ಬರೂ ತಿಳಿದುಕೊಂಡು ಸಮುದಾಯದಲ್ಲಿ ಕ್ಷಯರೋಗದ ಜಾಗೃತಿಯನ್ನು ಹರಡುವಂತೆ ಮಾಡುವ ಮೂಲಕ ಕ್ಷಯರೋಗದ ನಿಯಂತ್ರಣ ಮಾಡಬಹುದು ಎಂದು ತಿಳಿಸಿದರು

ಆರೋಗ್ಯ ಇಲಾಖೆಯೊಂದಿಗೆ ಇತರೇ ಎಲ್ಲ ಇಲಾಖೆಗಳವರೂ ಸಹ ಕ್ಷಯರೋಗದ ಬಗ್ಗೆ ಮಾಹಿತಿ ನೀಡುವ ಕಾರ್ಯದಲ್ಲಿ ಸಹಕರಿಸಿ ದೇಶವನ್ನು ಕ್ಷಯಮುಕ್ತ ಮಾಡುವಲ್ಲಿ ಸಹಕಾರಿಯಾಗುತ್ತದೆ. ಕ್ಷಯ ರೋಗದ ಕುರಿತು ಎಕ್ಕೆಗೊಂದಿ ಆರೋಗ್ಯ ಉಪಕೇಂದ್ರದ ಅಧಿಕಾರಿಯಾದ ತಿಲಕ್ ಮಾತನಾಡಿ ಕ್ಷಯರೋಗಕ್ಕೆ ಹೆದರುವ ಅವಶ್ಯಕತೆ ಇಲ್ಲ ಸರಿಯಾಗಿ ಚಿಕಿತ್ಸೆಯನ್ನು ತೆಗೆದುಕೊಂಡರೆ ವಾಸಿಯಾಗುತ್ತದೆ ಕೇರಳಕ್ಕೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡುತ್ತಾರೆ ಕ್ಷಯ ರೋಗ ಬಂದಿರುವ ವ್ಯಕ್ತಿಯ ಸ್ಥಳವನ್ನು ಗುರುತಿಸಿ ಮನೆಗೆ ಹೋಗಿ ಚಿಕಿತ್ಸೆಗೂ ಸಹ ನೀಡಲಾಗುತ್ತದೆ ಕ್ಷಯರೋಗದ ವ್ಯಕ್ತಿಯ ಜತೆ ಸಮಾಲೋಚನೆ ನಡೆಸಿ ಮತ್ತು ಸರಿಯಾದ ರೀತಿಯಿಂದ ಮಾಹಿತಿ ನೀಡಿ ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ ಕ್ಷಯರೋಗಕ್ಕೆ ಹೆದರದೆ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಸುದರ್ಶನ್. ಭೈರವ ಶೆಟ್ಟಿ. ನಿಜಗುಣಪ್ಪ. ರುಕ್ಮಿಣಿಬಾಯಿ .ಪವಿತ್ರ. ಸಿದ್ದೇಶ್. ಬಸವರಾಜ್ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತರು ಶಾಲೆಯ ಸಿಬ್ಬಂದಿ ವರ್ಗದವರು ಮತ್ತು ಶಾಲೆಯ ಮಕ್ಕಳು ಉಪಸ್ಥಿತರಿದ್ದರು…

ವರದಿ. ಡಿ. ಎಂ.ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend