ಗಣಿತ ಮಾದರಿಯಾದ ಶ್ರೀ ಬಿ.ಕೆ.ವಿ ಸರ್ಕಾರಿ ಶಾಲೆಯ ನಿಂಬಳಗರೆ: ಬಿ.ಐ.ಓ ​​ಯುವರಾಜ ನಾಯ್ಕ…!!!

Listen to this article

ಗಣಿತ ಮಾದರಿಯಾದ ಶ್ರೀ ಬಿ.ಕೆ.ವಿ ಸರ್ಕಾರಿ ಪ್ರೌಢಶಾಲೆ ನಿಂಬಳಗರೆ: ಬಿ.ಇ.ಒ ಯುವರಾಜ ನಾಯ್ಕ

ವಿಜಯನಗರ: ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕೊಟ್ಟೂರು ವ್ಯಾಪ್ತಿಯ ನಿಂಬಳಗೆರೆ ಗ್ರಾಮದ ಶ್ರೀ ಬಿ.ಕೆ.ವಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಇಂದು ರಾಷ್ಟ್ರೀಯ ಗಣಿತ ದಿನಾಚರಣೆ ಪ್ರಯುಕ್ತ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗಂಗಮ್ಮ ಮಹಾಂತೇಶ, ಪಾಲಾಕ್ಷ ಉಪಾಧ್ಯಕ್ಷ ಮತ್ತು ಸರ್ವ ಸದಸ್ಯರು ಉದ್ಘಾಟಿಸಿದರು. ಶ್ರೀನಿವಾಸನ್ ರಾಮಾನುಜನ್ ಭಾವಚಿತ್ರಕ್ಕೆ ಶಾಲಾ ಮೇಲುಸ್ತುವಾರಿ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಎಮ್.ಜಿ ಪ್ರಕಾಶ ಮತ್ತು ಸರ್ವ ಸದಸ್ಯರು ಪುಷ್ಪ ನಮನ ಸಲ್ಲಿಸಿದರು. ವಸ್ತು ಪ್ರದರ್ಶನವನವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಯುವರಾಜ ನಾಯ್ಕ.ಬಿ.ಇ.ಒ ಕೂಡ್ಲಿಗಿ ಅವರು ಉದ್ಘಾಟಿಸಿ, ನಂತರ ಮಾತನಾಡಿ ಗಣಿತ ವಿಷಯವು ಕಬ್ಬಿಣದ ಕಡಲೆಯಲ್ಲ, ಸುಲಭ ಎಂಬುದಕ್ಕೆ ಗಣಿತ ದಿನಾಚರಣೆ ತುಂಬಾ ಅರ್ಥಪೂರ್ಣವಾಗಿ ವಿದ್ಯಾರ್ಥಿಗಳು ಮಾಡಿ ತೋರಿಸಿದ್ದಾರೆ. ಗಣಿತ ಶಿಕ್ಷಕರು ಹಾಗೂ ಎಲ್ಲಾ
ಶಿಕ್ಷಕರ ಸಹಕಾರದಿಂದ ಪಠ್ಯಕ್ರಮ ಉತ್ತಮವಾಗಿ ನಡೆಯಿತೆ ಎಂದರು.

ಈ ಸರ್ಕಾರಿ ಪ್ರೌಢಶಾಲೆ ನಮ್ಮ ತಾಲೂಕಿನ ಹೆಮ್ಮೆ ಎಂದು ಬಣ್ಣಿಸಿದರು. ಹಿರಿಯ ಗಣಿತ ಶಿಕ್ಷಕರಾದ ಶ್ರೀ ಮನೋಹರಸ್ವಾಮಿಯವರು ದಿನ ನಿತ್ಯ ಜೀವನದಲ್ಲಿ ಗಣಿತ ಎಂಬ ವಿಷಯದ ಬಗ್ಗೆ ಭಾಷಣ ಮಾಡಿದರು. ಬಿಸಿಯೂಟ ಯೋಜನೆಯ ಆಧಿಕಾರಿಗಳಾದ ಶ್ರೀ ಲಕ್ಷ್ಮಣಸಿಂಗರವರು ಬಿ.ಎಸ್ ಮಾತನಾಡಿದರು. ಶ್ರೀ ಕೊಟ್ರೇಶಪ್ಪ ನವರು ಶುಭಕೋರಿದರು. ಅಧ್ಯಕ್ಷತೆಯನ್ನು ಶ್ರೀ ಪಕ್ಕೀರಪ್ಪ ಮುಖ್ಯಗುರುಗಳು ವಹಿಸಿದ್ದರು. ಸ್ವಾಗತವನ್ನು ಶ್ರೀ ಶರ್ಮತ್ ಕಣದಮನಿ ಮಾಡಿದರು. ಪ್ರಾಸ್ತಾವಿಕ ಮಾತುಗಳನ್ನು ಶ್ರೀ ಮಂಗಳಗೌರಮ್ಮ ನಿರ್ವಹಿಸಿದರು. ಶ್ರೀ ವೀರಭದ್ರಪ್ಪ ಕನ್ನಡ ಶಿಕ್ಷಕರು, ನಿರೂಪಿಸಿದರು. ಶ್ರೀ ಶಿವಪುತ್ರಗೌಡ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಮ್.ಬಿ
ನಾಗರಾಜ, ವಿದ್ಯಾರಣ್ಯ, ಹಾಲಪ್ಪ, ಅಂಜಿನಮ್ಮ, ಪತೇಶ್, ಸಿದ್ದೇಶ
ಪಾಟೀಲ್, ಕುಬೇಂದ್ರಪ್ಪ, ಭೂಷಣ್, ಮಲ್ಲಪ್ಪ, ಅಮೃತಮ್ಮ ಉಪಸ್ಥಿತರಿದ್ದರು. ನಿಂಬಳಗೆರೆ ಪ್ರೌಢಶಾಲೆಯು ಎಲ್ಲಾ ವಿಷಯದಲ್ಲಿ ಪ್ರಗತಿ ಸಾಧಿಸಿದ ಶಾಲೆ. ಇಲ್ಲಿನ ಕ್ರಿಯಾಶೀಲ ಶಿಕ್ಷಕರ ಶ್ರಮ ಇದಕ್ಕೆ ಕಾರಣ. ಇಲಾಖೆ ನಿರಂತರವಾದ ಮಾರ್ಗದರ್ಶನ ನೀಡುತ್ತಿದೆ. ಗಣಿತ ದಿನಾಚರಣೆ ಮಾದರಿಯಾಗಿ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ಶ್ರೀ ಪಕ್ಕೀರಪ್ಪ ಮುಖ್ಯಗುರುಗಳು ಗಣಿತದ ಪರಿಕಲ್ಪನೆಗಳನ್ನ ಸುಲಭವಾಗಿ ಕಲಿಯಲು ಸರಳವಾದ ಚಟುವಟಿಕೆಗಳು ತುಂಬಾ ಸಹಾಯಕವಾಗಿವೆ. ನಮ್ಮ ವಿದ್ಯಾರ್ಥಿಗಳು ತುಂಬಾ ಆಸಕ್ತಿಯಿಂದ ಭಾಗವಹಿಸಿದರು. ಶ್ರೀ ಮಂಗಳಗೌರಮ್ಮ, ಗಣಿತ ಶಿಕ್ಷಕಿ ಈ ಕಾಠ್ಯಕ್ರಮ ಅರ್ಥಪೂಣವಾಗಲು ವಿದ್ಯಾರ್ಥಿಗಳು, ಶಿಕ್ಷಕರು, ನಮ್ಮ ಗ್ರಾ.ಪಂ, ಎಸ್,ಡಿ.ಎಮ್.ಸಿ ಯವರು ಹಾಗೂ ದಾನಿಗಳ ಸಹಕಾರದಿಂದ ಯಶಸ್ವಿಯಾಗಿ ನಡೆಯಿತು. ಹಾಗೂ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತರು, ಗ್ರಾ.ಪಂ ಸರ್ವ ಸದಸ್ಯರುಗಳು, ಶಾಲೆಯ ಸಿಬ್ಬಂದಿ ವರ್ಗದವರು, ಊರಿನ ಪ್ರಮುಖರು ಉಪಸ್ಥಿತರಿದ್ದರು…

ವರದಿ.ಡಿ.ಎಂ. ಈಶ್ವಪ್ಪ. ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend