ಕೂಡ್ಲಿಗಿ:ಜ್ಞಾನವಿಕಾಸ ಕೇಂದ್ರ ಉದ್ಘಾಟನೆ…!!!

Listen to this article

ಕೂಡ್ಲಿಗಿ:ಜ್ಞಾನವಿಕಾಸ ಕೇಂದ್ರ ಉದ್ಘಾಟನೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಬಾಪೂಜಿನಗರದ ಕಾರ್ಯಕ್ಷೇತ್ರದಲ್ಲಿ,ಶ್ರೀಧರ್ಮಸ್ಥಳ ಗ್ರಾಮಿಣಾಭಿವೃದ್ಧಿ ಸಂಸ್ಥೆಯಿಂದ ಡಿ11ರಂದು ಶ್ರೀ ಹೇಮಾವತಿ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ ಮಾಡಲಾಯಿತು. ಕಲ್ಯಾಣ ಕರ್ನಾಟಕ ಪ್ರಾದೇಶಿಕ ಕಚೇರಿ ಜ್ಞಾನವಿಕಾಸ ಪ್ರಬಂಧಕರಾದ, ಶ್ರೀಮತಿ ಶ್ರೀದೇವಿ ಹಾಗೂ ಐಸಿಟಿಸಿ ಆಪ್ತ ಸಮಾಲೋಚಕ ಜಿಗೇನಳ್ಳಿ ಪ್ರಶಾಂತ್, ಆಪ್ತಸಮಾಲೋಚಕಿ ಶ್ರೀಮತಿ ನಾಗರತ್ನ, ವಲಯ ಮೇಲ್ವಿಚಾರಕ ಕರಿಯಪ್ಪ. ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಮಂಜುಳಾ, ಸೇವಾ ಪ್ರತಿನಿಧಿ ಶ್ರೀಮತಿ ಭುವನೇಶ್ವರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಕುರಿತು ಪ್ರಬಂಧಕರಾದ ಶ್ರೀಮತಿ ಶ್ರೀದೇವಿ ಮಾತನಾಡಿ,ಜ್ಞಾನವಿಕಾಸ ಕಾರ್ಯಕ್ರಮ ಸಂಸ್ಥೆಯ ಸಂಸ್ಥಾಪಕರ ಅಚ್ಚು-ಮೆಚ್ಚಿನ ಕಾರ್ಯಕ್ರಮವಾಗಿದ್ದು,ಸರ್ವರೂ ತೊಡಗಿಸಿಕೊಂಡು ಸದುಪಯೋಗಪಡಿಸಿಕೊಳ್ಳಬೇಕಿದೆ. ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರಲು ಮಾಹಿತಿಗಳು ಲಭ್ಯವಿದ್ದು, ಎಲ್ಲರೂ ಉತ್ತಮ ರೀತಿಯಿಂದ ಕೇಂದ್ರ ಸಭೆಯಲ್ಲಿ ಭಾಗವಹಿಸಬೇಕಿದೆ ಎಂದರು. ಸಂಪನ್ಮೂಲ ವ್ಯಕ್ತಿ ಪ್ರಶಾಂತ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಬಿಪಿ ಮತ್ತು ಶುಗರ್ ಹೆಚ್ಚಾಗಿ ಕಾಡುವ ಕಾಯಿಲೆಗಳಾಗಿದ್ದು, ಎಲ್ಲರೂ ಒತ್ತಡದ ಬದುಕನ್ನು ಸಾಗಿಸುವಂತಾಗಿದೆ. ಕಾಯಿಲೆಗಳಿಂದ ಮುಕ್ತವಾಗಲು ಜ್ಞಾನವಿಕಾಸ ಕಾರ್ಯಕ್ರಮದಲ್ಲಿ,ತೊಡಗಿಸಿಕೊಂಡು ಸದಾ ಚಟುವಟಿಕೆಯಾಗಿದ್ದು ಕೊಂಡು ಒತ್ತಡಗಳಿಂದ ಮುಕ್ತವಾಗಬಹುದೆಂದರು…

ವರದಿ. ಬಸಣ್ಣಿ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend