ಕೂಡ್ಲಿಗಿ: ಗುಂಡಿ ತುಂಬಿರುವ ರಸ್ತೆಗಳು,ನಿದ್ರೆಯಲ್ಲಿರುವ ಅಧಿಕಾರಿಗಳು ಹಾಗೂ ಜನಪ್ರನಿಧಿಗಳು…!!!

Listen to this article

ಕೂಡ್ಲಿಗಿ: ಗುಂಡಿ ತುಂಬಿರುವ ರಸ್ತೆಗಳು,ನಿದ್ರೆಯಲ್ಲಿ ಅಧಿಕಾರಿಗಳು ಜನಪ್ರನಿಧಿಗಳು.
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಬೆಂಗಳೂರು ಮಾರ್ಗವಾಗಿ ಸಂಚರಿಸುವ ರಸ್ತೆ,ಅಬ್ದುಲ್ ಕಲಾಂ ವೃತ್ತದವರೆಗೂ ಬಾರಿ ಗುಂಡಿಗಳಿಂದ ಹಾಗೂ ಧೂಳಿನಿಂದ ತುಂಬಿ ಹೋಗಿದೆ.ದಿನ ನಿತ್ಯ ಹಳ್ಳಿಗಳಿಂದ ಜನರು ಇದೆ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು,ಧೂಳಿನಿಂದ ಸಾರ್ವಜನಿಕರು ಕಂಗೆಟ್ಟು ನಿತ್ಯ ನರಕ ಯಾತೆನೆ ಅನುಭವಿಸುವಂತಾಗಿದೆ. ರಸ್ತೆಯಲ್ಲಿ ದಿನ ನಿತ್ಯ ಸಂಚರಿಸುವ ಮೈನ್ಸ್ ಲಾರಿಗಳ ಹಾವಳಿಯಿಂದ ಶಾಲಾ, ಕಾಲೇಜ್ ವಿದ್ಯಾರ್ಥಿಗಳು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ದುಸ್ಥಿತಿ ಎದುರಾಗಿದೆ.ರಸ್ತೆಯ ಅಕ್ಕ ಪಕ್ಕದ ಮನೆಯವರ ಗೋಳು ಹೇಳತೀರದು,ಪಟ್ಟಣ ಪಂಚಾಯಿತಿ ಸದಸ್ಯರು ಅಧಿಕಾರಿಗಳು ಹಾಗೂ ಅರ್ವಜನಿಕರು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.. ದಿನ ನಿತ್ಯ ತಹಶೀಲ್ದಾರ್ ಮತ್ತು ಉಪ ನೊಂದಣಿ ಕಚೇರಿಗೆ ಇದೇ ರಸ್ತೆಯಲ್ಲಿ ನಿತ್ಯ ಸಂಚರಿಸುತ್ತಿದ್ದು, ಯಾರೊಬ್ಬರೂ ಈ ರಸ್ತೆಯ ಬಗ್ಗೆ ತುಟಿ ಬಿಚ್ಚುತ್ತಿಲ್ಲಾ ತಾಲೂಕು ಕೇಂದ್ರ ಕೂಡ್ಲಿಗಿಯಲ್ಲೇ ರಸ್ತೆಗಳು ಈ ದುಸ್ಥಿತಿಯಲ್ಲಿದ್ದರೆ..ಹೇಗೆ. ಇನ್ನೂ ಕೆಲವು ಹಳ್ಳಿಗಳ ರಸ್ತೆಗಳ ದುಸ್ಥಿತಿ ಹೇಗಿತೀರದಾಗಿದೆ.
ತಾಲ್ಲೂಕಿನ ಶಾಸಕರು ಇತ್ತ ಕಡೆ ಗಮನಹರಿಸಿ ಅಪಘಾತಕ್ಕೆ ಬಾಯಿತೆರೆದು ಕಾಯುತ್ತಿರುವ ಗುಂಡಿಗಳಿಂದ ಕೂಡಿದ ಈ ರಸ್ತೆಯಗಳನ್ನು ದುರಸ್ಥೆಗೊಳಿಸಲು ಕ್ರಮ ಜರುಗಿಸಬೇಕಿದೆ,ಹೊಸಪೇಟೆ ಹಾಗೂ ಬೆಂಗಳೂರು ರಸ್ತೆಗಳನ್ನ ಅತೀ ಶೀಘ್ರದಲ್ಲಿಯೇ ಅಭಿವೃದ್ಧಿಪಡಿಸಿ ಬೇಕೆಂದು,ವಂದೇ ಮಾತರಂ ಜಾಗೃತಿ ವೇದಿಕೆ ಸೇರಿದಂತೆ ವಿವಿದ ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಸಾಮಾಜಿಕ ಹೋರಾಟಗಾರರು ಹಾಗೂ ಸಾರ್ವಜನಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಮೂಲಕ ಒತ್ತಾಯಿಸಿದ್ದಾರೆ. *ನಿರ್ಲಕ್ಷ್ಯ ತೋರಿದ್ದಲ್ಲಿ ಪ್ರತಿಭಟನೆ- ವಕೀಲರ ಎಚ್ಚರಿಕೆ*-ಪಟ್ಟಣದ ಹೊಸಪೇಟೆ ರಸ್ತೆ ಹಾಗೂ ಬೆಂಗಳೂರು ರಸ್ತೆಗಳು ಮೊಳದಗಲ ತೆಗ್ಗುಬಿದ್ದಿದ್ದು,ಎರೆಡೂ ಪ್ರಮುಖ ರಸ್ಥೆಗಳು ಒಂದು ಕೀಲೋಮೀಟರ್ ನಷ್ಟು ನೂರಾರು ತೆಗ್ಗುಗಳಿವೆ. ಪಾದಾಚಾರಿಗಳು ವಾಲಾಡತ್ತ ನಡೆದಾಡಬೇಕಿದೆ ಬೈಕ್ ಸವಾರರು ಸರ್ಕಸ್ ಮಾಡಬೇಕಿದೆ, ಆರೇಳು ತಿಂಗಳು ಗಳಿಂದ ತೆಗ್ಗು ಬಿದ್ದಿದ್ದು ನಿತ್ಯವೂ ಬೈಕ್ ಬಿದ್ದು ನೋವು ಅನುಭವಿಸುತ್ತಿದ್ದಾರೆ. ಬೆಂಗಳೂರು ಹಾಗೂ ಹೊಸಪೇಟೆ ರಸ್ಥೆಗಳು ಅತಿಹೆಚ್ಚು ಸಾರ್ವಜನಿಕರು ವಾಹನ ಸವಾನರರು ಸಂಚರಿಸುತ್ತಿದ್ದು, ತಹಶಿಲ್ದಾರರುಹಾಗೂ ಅಧಿಕಾರಿಗಳು ಹಾಗೂ ತಾಲೂಕಿನ ಬಹುತೇಕ ಅತಿಹೆಚ್ಚು ಸಂಚರಿಸುತ್ತಾರೆ. ತಾಲೂಕು ಕೇಂದ್ರವಾಗಿದ್ದರೂ ಆರೇಳು ತಿಂಗಳಿಂದಲೂ ರಸ್ಥೆ ದುರಸ್ತಿ ಮಾಡುತ್ತಿಲ್ಲ,ಇದು ತಹಶಿಲ್ದಾರರ ಹಾಗೂ ಅಧಿಕಾರಿಗಳ ಜನಪ್ರತಿನಿಧಿಗಳ ಹೊಣೆಗೇಡಿತನಕ್ಕೆ ಸಾಕ್ಷಿಯಾಗಿದೆ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೂಡ್ಲಿಗಿ ತಾಲೂಕು ವಕೀಲರ ಸಂಘ ಸಂಬಂಧಿಸಿದ ಇಲಖಾಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದ್ದಾರೆ,ವಾರದೊಳಗಾಗಿ ಪಟ್ಟಣದ ಎರೆಡೂ ರಸ್ಥೆಗಳನ್ನು ದುರಸ್ಥೊಗೊಳಿಸಬೇಕಿದೆ.ಮಣ್ಣಾಕಿಗುಂಡಿ ತುಂಬುವ ಬದಲು ಸಂಪೂರ್ಣ ಕಿತ್ತು ಹೊಸದಾಗಿ ರಸ್ಥೆ ಮಾಡಬೇಕು, ನಿರ್ಲಕ್ಷ್ಯ ತೋರಿದ್ದಲ್ಲಿ ಸಾರ್ವಜನಿಕ ಹಿತಸಕ್ತಿಯ ಮೇರೆಗೆ ಕಾನೂನು ಸಮರ ಮಾಡಲಾಗುವುದೆಂದು ಎಚ್ಚರಿಸಿದ್ದಾರೆ. ತಾಲೂಕಾಡಳಿತದ ವೈಫಲ್ಯ ಖಂಡಿಸಿ ವಿವಿದ ಸಂಘಟನೆಗಳ ಸಹಯೋಗದಲ್ಲಿ, ಪ್ರತಿಭಟನೆ ಮಾಡಲಾಗುವುದೆಂದು ವಕೀಲರ ಸಂಘದ ಪದಾಧಿಕಾರಿಗಳು ಅಧ್ಯಕ್ಷ ಜಿ.ಹೊನ್ನೂರಪ್ಪ ನೇತೃತ್ವದಲ್ಲಿ ಹೇಳಿಕೆ ನೀಡಿ ಎಚ್ಚರಿಸಿದ್ದಾರೆ. ವಕೀಲರಾದ ಕೊಟ್ರಗೌಡ್ರು, ಮಲ್ಲಿಕಾರ್ಜುನಸ್ವಾಮಿ,ಸಾಸಲವಾಡ ನಾಗರಾಜ,ವಿರುಪಾಪುರ ವೆಂಕಟೇಶ,ಹಾಲೂರು ಬಸವರಾಜ ಸೇರಿದಂತೆ ಮತ್ತಿತರ ವಕೀಲರು ಉಪಸ್ಥಿತರಿದ್ದರು…

ವರದಿ. ಬಸಣ್ಣಿ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend