ಸಿಂಧನೂರು : ವಿಧಾನಪರಿಷತ ಚುನಾವಣೆ ನಂತರ ಕಾಂಗ್ರೆಸ್‌ ಎರಡು ಬಣ -ಕೆ. ಎಸ್. ಈಶ್ವರಪ್ಪ…!!!

Listen to this article

ಸಿಂಧನೂರು : ವಿಧಾನಪರಿಷತ ಚುನಾವಣೆ ನಂತರ ಕಾಂಗ್ರೆಸ್‌ ಎರಡು ಬಣ -ಕೆ. ಎಸ್. ಈಶ್ವರಪ್ಪ.

ನಗರದ ಜೈನ್ ಕಲ್ಯಾಣ ಮಂಟಪದಲ್ಲಿ ರಾಯಚೂರು ಬಳ್ಳಾರಿ ಹಾಗು ಕೊಪ್ಪಳ ಜಿಲ್ಲೆಯ ಹಿಂದುಳಿದ ವರ್ಗಗಳ ಮೋರ್ಚಾ ಪ್ರಮುಖರ ಚಿಂತನಾ ಸಭೆ ಹಮ್ಮಿಕೊಳ್ಳಲಾಗಿತ್ತು .

ಈ ಸಭೆಗೆ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ನೆ.ಲಾ. ನರೇಂದ್ರಬಾಬು ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ. ಎಸ್. ಈಶ್ವರಪ್ಪನವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ದೇಶದಲ್ಲಿ ಕಾಂಗ್ರೆಸ್ 70 ವರ್ಷಗಳ ಕಾಲ ಆಡಳಿತ ನಡೆಸಿದೆ. ದಲಿತ ಮತ್ತು ಹಿಂದುಳಿದ ವರ್ಗಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದೆ ಹೊರತು ಅವರನ್ನು ಮುಖ್ಯವಾಹನಿಗೆ ತಂದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವ ಕೆಎಸ್ ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ನಗರದ ಜೈನ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಮೋರ್ಚಾ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದ ಅವರು 70ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ 20ಕೋಟಿ ಮನೆಗಳ ಪೈಕಿ ೨ಕೋಟಿ ಮನೆಗಳಿಗೆ ನಲ್ಲಿಗಳ ಮೂಲಕ ಕುಡಿಯುವ ನೀರು ಒದಗಿಸಿದೆ. ಬಿಜೆಪಿ ಪಕ್ಷ ಪ್ರಧಾನಿ ನರೇಂದ್ರ ಮೋದಿ ಸರ್ಕಾರ 7ವರ್ಷಗಳಲ್ಲಿ 7 ಕೋಟಿ ಮನೆಗಳಿಗೆ ನಲ್ಲಿಗಳ ಮೂಲಕ ಶುದ್ಧ ಕುಡಿಯುವ ನೀರು ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಒದಗಿಸಿದೆ ಎಂದರು.
ಬಿಜೆಪಿ ಪಕ್ಷ ಮುಂದುವರೆದ ಜಾತಿಗಳ ಪಕ್ಷ ಹಿಂದುಳಿದ ವರ್ಗಗಳ ವಿರೋಧಿಯಾಗಿದೆ ಎಂದು ಕಾಂಗ್ರೆಸ್ ಪಕ್ಷ ಸುಳ್ಳು ಹೇಳಿ ಸಿದ್ದರಾಮಯ್ಯ ಅವರನ್ನು ಬಳಿಸಿಕೊಂಡು ಅಧಿಕಾರ ನಡೆಸಿದೆ ಹೊರತು ಹಿಂದುಳಿದ ವರ್ಗಗಳ ಜನರ ಯಾವುದೇ ಅಭಿವೃದ್ಧಿ ಮಾಡಿಲ್ಲ.

ಬಿಜೆಪಿ ಪಕ್ಷ ಹಿಂದುಳಿದ ವರ್ಗಗಳನ್ನು ಸಂಘಟನೆ ಮಾಡುವ ಮೂಲಕ ಅವರಿಗೆ ಸಾಮಾಜಿಕ, ಶೈಕ್ಷಣಿ, ಆರ್ಥಿಕ ರಾಜಕೀಯ, ಸ್ಥಾನಮಾನ ಗಳನ್ನು ಕೊಡಿಸುವ ನಿಟ್ಟಿನಲ್ಲಿ ರಾಜ್ಯಾಧ್ಯಂತ ಒಬಿಸಿ ಘಟಕಗಳ ಪದಾಧಿಕಾರಿಗಳ ಸಭೆ ನಡೆಸಿ ಡಿಸೆಂಬರ್ 12 ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಸ್ವತಂತ್ರ ಬಂದು 70 ವರ್ಷಗಳಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಕ್ಯಾಬಿನೆಟ್ ನಲ್ಲಿ ಯಾವುದೇ ಸ್ಥಾನಮಾನ ಸಿಕ್ಕಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ 77 ಸಚಿವರಲ್ಲಿ 27ಹಿಂದುಳಿದ ವರ್ಗಗಳ , 20ಜನ ದಲಿತರಿಗೆ ಸಚಿವ ಸ್ಥಾನ ನೀಡಿದ್ದಾರೆ. ಆದರೆ ಕಾಂಗ್ರೆಸ್ ಯಾಕೆ ಸಚಿವ ಸಂಪುಟದಲ್ಲಿ ಸೇರಿಸಿಕೊಂಡಿಲ್ಲ, ಕಾಂಗ್ರೆಸ್ ಕೇವಲ ಜಾತಿ ಹೆಸರಲ್ಲಿ ಮತ ಪಡೆದು ರಾಜಕೀಯ ಮಾಡಿಕೊಂಡು ಬಂದಿದೆ. ಆದರೆ ಬಿಜೆಪಿ ಪಕ್ಷ ಈ ಮಣ್ಣನ್ನು ಮಾತ್ರಭೂಮಿ ಎಂದು ಸ್ವೀಕಾರ ಮಾಡಿ ‘ಭಾರತ ಮಾತಾಕಿ ಜೈ’ ಎನ್ನುವವರಿಗೆ ಮತಕೊಡಿ ಎಂದು ಕೇಳುವುದಾಗಿ ಹೇಳಿದರು. ಕಾಂಗ್ರೆಸ್ ಪಕ್ಷ ವಿದಾನಪರಿಷತ್ ಚುನಾವಣೆ ನಂತರ ಸಿಂದ್ರಾಮಯ್ಯ ಬಣ, ಡಿ. ಕೆ. ಶಿವಕುಮಾರ ಬಣಗಳಾಗಲಿವೆ ಎಂದರು.

ಹಿಂದುಳಿದ ವರ್ಗಗಳ ಜನಾಂಗದವರು ಕಾಂಗ್ರೆಸ್‌ನ್ನು ತೀರಸ್ಕರಿಸಿ ಬಿಜೆಪಿಯನ್ನು ಬೆಂಬಲಿಸಿದರೆ ನಿಮಗೆ ಮತ್ತು ಮಕ್ಕಳಿಗೆ ಭವಿಷ್ಯವಿದೆ.ಸೂಕ್ತ ಸ್ಥಾನಮಾನಗಳು ದೊರಕಿ ಬೇರೆಯವರಂತೆ ಸಮಾಜದಲ್ಲಿ ಬದುಕಬಹುದು.ಹಿಂದೂಳಿದ ವರ್ಗಗಳಲ್ಲಿ 600 ಉಪಪಂಗಡಗಳಿವೆ, ನಾವೂ ಮಾನಸಿಕವಾಗಿ ತುಳಿತ್ತಕ್ಕೆ ಒಳಗಾಗಿದ್ದೇವೆ ‘ಹಿಡಿಯಾದರೆ ಗೆಲುವು, ಮುಡಿಯಾದರೆ ಸೋಲು’ ಅಂಬೇಡ್ಕರ್ ರವರು ಸಮಬಾಳು, ಸಮಪಾಲು ಎಂದು ಹೇಳಿದ್ದಾರೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಬೆಂಗಳೂರಿನಲ್ಲಿ ನಡೆಯುವ ಒಬಿಸಿ ಜಾಗೃತಿ ಸಮಾವೇಶದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸಿ ಒಬಿಸಿ ಮೋರ್ಚಾಗಳ ಮುಖಂಡರುಗಳ ಸಭೆ ನಡೆಸಿ ಬೆಂಗಳೂರಿಗೆ ಬರುವಂತೆ ಮನವಿ ಮಾಡಲಾಗುತ್ತಿದ್ದು, ಈ ಪೂರ್ವಭಾವಿ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕಿತ್ತು ಆದರೆ ಬಂದಿಲ್ಲ. ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ನಡೆಯುವ ಸಮಾವೇಶಕ್ಕೆ ವಿಧಾನಸಭೆ ಕ್ಷೇತ್ರದಿಂದ ಎಂಟು ಜನ ಪುರುಷ, ಎರಡು ಜನ ಮಹಿಳಾ ಕಾರ್ಯಕರ್ತರು ಬರುವಂತೆ ಬಿಜೆಪಿ ಒಬಿಸಿ ರಾಜ್ಯಾಧ್ಯಕ್ಷ, ಮಾಜಿ ಶಾಸಕ ನ.ಲಾ. ನರೇಂದ್ರ ಬಾಬು ಕೋರಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಕೊಲ್ಲಾ ಶೇಷಗಿರಿರಾವ್,ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ ಬಾಬು,ವಿವೇಕಾನಂದ ಡಬ್ಬಿ ರಾಜ್ಯ ಕಾರ್ಯದರ್ಶಿಗಳಾದ ಉಮೇಶ್ ಸಜ್ಜನ್,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಹಾದಿಮನಿ ವೀರಲಕ್ಷ್ಮಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ಅಮರೇಗೌಡ ವಿರುಪಾಪುರ, ಎನ್ ಶಿವನಗೌಡ ಗೊರೆಬಾಳ, ಎಂ.ದೊಡ್ಡ ಬಸವರಾಜ, ರಾಯಚೂರು ಜಿಲ್ಲೆಯ ಓಬಿಸಿ ಮೋರ್ಚಾ ಅಧ್ಯಕ್ಷರಾದ ಶಿವಪ್ರಕಾಶ, ಗ್ರಾಮೀಣ ಮಂಡಲ ಅಧ್ಯಕ್ಷರಾದ ಹನುಮೇಶ್ ಸಾಲಗುಂದ, ನಗರ ಮಂಡಲ ಅಧ್ಯಕ್ಷರಾದ ಪ್ರೇಮ ಸಿದ್ಧಾಂತಿಮಠ, ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ್ ಪಾಟೀಲ್ ಬಸಾಪುರ, ಮುಂತಾದವರು ಹಾಗೂ ರಾಯಚೂರು ಕೊಪ್ಪಳ ಬಳ್ಳಾರಿ ಜಿಲ್ಲೆಯ ಓಬಿಸಿ ಮೋರ್ಚಾ ಪ್ರಮುಖರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend