ಸರ್ಕಾರಿ ಪ್ರೌಢಶಾಲೆ ಪೂಜಾರಹಳ್ಳಿ ಶಾಲಾ ಮಕ್ಕಳಿಂದ ಮಾತಾಡ್ ಮಾತಾಡ್ ಕನ್ನಡ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ…!!!

Listen to this article

ಸರ್ಕಾರಿ ಪ್ರೌಢಶಾಲೆ ಪೂಜಾರಹಳ್ಳಿ ಶಾಲಾ ಮಕ್ಕಳಿಂದ ಮಾತಾಡ್ ಮಾತಾಡ್ ಕನ್ನಡ ಕರ್ನಾಟಕ ರಾಜ್ಯೋತ್ಸವ ಅಭಿಯಾನ ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಬಳ್ಳಾರಿ ಮತ್ತು ವಿಜಯನಗರ ಅವರ ಸೂಚನೆ ಮೇರೆಗೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನದ ಮೇರೆಗೆ 2021 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಶೇಷ ರೀತಿಯಲ್ಲಿ ಆಚರಿಸುವ ಸಂಬಂಧ ೨೮ ರಂದು ಬೆಳಿಗ್ಗೆ 11 ಗಂಟೆಗೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಶಿಕ್ಷಕರಿಂದ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾರ್ಯದರ್ಶಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಇವರ ನೇತೃತ್ವದಲ್ಲಿ 3ಕನ್ನಡ ಗೀತೆಗಳಾದ ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ ,ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಎನ್ನುವ ಗಾಯನವನ್ನು ಹಾಜರಿದ್ದ ೨೦೦ಜನರಿಂದ ಗಾಯನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕನ್ನಡ ನಾಡು-ನುಡಿಯ ಬಗ್ಗೆ ಭಾಷೆ ಜಲ ನೆಲ ಇವುಗಳ ಬಗ್ಗೆ ಕನ್ನಡ ಶಿಕ್ಷಕರಾದ ಸಿದ್ದಾರಾಧ್ಯ ಇವರು ಹಾಜರಿದ್ದ ಎಲ್ಲರಿಗೂ ಸಂಕಲ್ಪ ಮಾಡಿಸಲಾಯ್ತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿಲ್ಪ ಬಸಪ್ಪನವರು ಮಾತನಾಡಿ ಕನ್ನಡ ಭಾಷೆಯನ್ನು ಎಲ್ಲರೂ ಇಂದಿನ ಮಕ್ಕಳಿಗೆ ಕಲಿಸಿಕೊಟ್ಟಾಗ ಕನ್ನಡ ಭಾಷೆ ಬೆಳವಣಿಗೆಯಾಗುತ್ತದೆ, ಎಲ್ಲ ರೂ ಕನ್ನಡ ಭಾಷೆ ಯನ್ನು ಕಡ್ಡಾಯವಾಗಿ ಮಾತನಾಡಿಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರೌಢ ಶಾಲೆಯ ಮುಖ್ಯಗುರುಗಳಾದ ಬಸಯ್ಯ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾರ್ಯದರ್ಶಿಗಳು ಗ್ರಾಮದ ಹಿರಿಯರು ಹಾಜರಿದ್ದರು…

ವರದಿ.ಬಸಣ್ಣಿ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend