ರಾಜ್ಯದ ಗ್ರಾಮಾಂತರ ಪತ್ರಕರ್ತರ ಕಾನೂನು ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ, ಬಂಗ್ಲೆ ಮಲ್ಲಿಕಾರ್ಜುನರವರು…!!!

Listen to this article

ರಾಜ್ಯದ ಗ್ರಾಮಾಂತರ ಪತ್ರಕರ್ತರ ಕಾನೂನು ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ:- ಇಂದು ವಿಜಯನಗರ ಜಿಲ್ಲಾ ಕೂಡ್ಲಿಗಿ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ರಾಜ್ಯದ ಗ್ರಾಮಾಂತರ ಪತ್ರಕರ್ತರ ಸ್ಥಿತಿಗತಿಗಳ ಕುರಿತು ಹಾಗೂ ಈ ಹಿಂದೆ ಸಂತೋಷ ಲಾಡ್ ರವರು ಕಾರ್ಮಿಕ ಮಂತ್ರಿ ಆದಂತ ಸಂದರ್ಭದಲ್ಲಿನೂ ಮನವರಿಕೆ ಮಾಡಿದ್ದೆ, ಸರ್ಕಾರದಿಂದ ಅಕ್ರಿಡೇಷನ್ ಹೊಂದಿರುವ ಪತ್ರಕರ್ತರಿಗೆ ಮಾತ್ರ ಸರ್ಕಾರದ ಸೌಲಭ್ಯ ದೊರೆಯುತ್ತಿದೆ ಹೊರೆತು ಯಾವೊಬ್ಬ ಗ್ರಾಮಾಂತರ ಪತ್ರಕರ್ತರುಗಳಗೆ ಸರ್ಕಾರದ ಸೌಲಭ್ಯ ಮರೀಚಿಕೆಯ ಜೊತೆಗೆ ಕಾರ್ಯನಿರತ ಪತ್ರಕರ್ತರ ಸಂಘಟನೆ 90 ವರ್ಷಗಳ ಹಿಂದೆನೇ ಕಾರ್ಮಿಕ ಅಡಿಯಲ್ಲಿ ನೊಂದಾವಣೆಯಾಗಿದ್ದರೂ ಇಂದಿಗೂ ಒಬ್ಬೇ ಒಬ್ಬ ಪತ್ರಕರ್ತರು ಕಾರ್ಮಿಕ ಇಲಾಖೆಯಿಂದ ಯಾವೊಂದು ಸರ್ಕಾರದ ಸೌಲಭ್ಯ ಪಡೆದಿಲ್ಲದಿರುವುದು ದುರದೃಷ್ಟಕರ.ಇತ್ತೀಚೆಗೆ ಮಾನ್ಯ ಮುಖ್ಯಮಂತ್ರಿಗಳು 1,750 ಕೋಟಿ ರೂ ಗಳ ಕೋವಿಡ್ ಆರ್ಥಿಕ ಪ್ಯಾಕೇಜ್ ನಲ್ಲೂ ಒಂದೇ ಒಂದು ರೂ ಗಳು ದೊರೆಯದಿದ್ದದ್ದೂ ನೋವಿನ ಸಂಗತಿ. ವೇತನ ಪಡೆಯುತ್ತಿದ್ದ ಕೆಲ ವಲಯದವರಿಗೂ ಆರ್ಥಿಕ ಪ್ಯಾಕೇಜ್ ದೊರೆಯಿತು ಸಂತೋಷ,ವಕೀಲರ ಸಂಘಕ್ಕೂ 5 ಕೋಟಿ ರೂ ಪ್ಯಾಕೇಜ್ ನಿಂದ ಅನುಕೂಲವಾಯಿತು, ಆದರೆ ತಮ್ಮ ಮಾಲಿಕರಿಂದ ಸರಿಯಾದ ಸಂಬಳವನ್ನೇ ಪಡೆಯದ ಜೊತೆಗೆ ಸರ್ಕಾರದ ಸೌಲಭ್ಯಗಳಾದ ಮಾಶಾಸನ,ಆರೋಗ್ಯ ಸ್ಮಾರ್ಟ್ ಕಾರ್ಡ್ ಹಾಗೂ ಉಚಿತ ಬಸ್ ಪಾಸ್ ಗೆ ಸಂಬಂಧಿಸಿದಂತೆ ರಾಜ್ಯದ ನಿಜವಾದ ಶ್ರಮ ಜೀವಿಗಳಾದ ಗ್ರಾಮಾಂತರ ಪತ್ರಕರ್ತರ ಸ್ಥಿತಿಗತಿಗಳ ನೋವಿನ ಕುರಿತು ಮಾಜಿ ಸಚಿವರ ಗಮನಕ್ಕೆ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಬಂಗ್ಲೆ ಮಲ್ಲಿಕಾರ್ಜುನ ರವರು ಗಮನಕ್ಕೆ ತಂದಾಗ ಕೂಡಲೇ ಸ್ಪಂಧಿಸಿದಂತ ಸಂತೋಷ ಲಾಡ್ ರವರು, ತಾವು ಮಾಡುವಂತ ನ್ಯಾಯಯುತ ಹೋರಾಟಕ್ಕೆ ತಮ್ಮಿಂದೆ ನಾನು ಇರುತ್ತೇನೆ ಜೊತೆಗೆ ಸರ್ಕಾರದ ಕಾರ್ಯದರ್ಶಿಯವರನ್ನೂ ಭೇಟಿ ಮಾಡಿ ಏನೆಲ್ಲಾ ಸಾಧ್ಯತೆಯಿದೆಯೋ ಆ ಪ್ರಯತ್ನವನ್ನೆಲ್ಲಾ ಮಾಡಿ ರಾಜ್ಯದ ಗ್ರಾಮಾಂತರ ಪತ್ರಕರ್ತರ ಸಮಸ್ಯಗೆ ಪ್ರಮಾಣಿಕ ಪ್ರಯತ್ನ ನಾವು ನೀವೆಲ್ಲಾ ಸೇರಿ ನಡೆಸಿ ಪತ್ರಕರ್ತರ ಮೊಗದಲ್ಲಿ ಸಂತೋಷದ ನಗೆಯನ್ನು ಮೂಡಿಸೋಣವೆಂದರು,ಈ ಸಂದರ್ಭದಲ್ಲಿ ಕೂಡ್ಲಿಗಿ ಕನ್ನಡ ಪ್ರಭದ ವರದಿಗಾರರು ಹಾಗೂ kuwj ಯ ಜಿಲ್ಲಾ ಕಾರ್ಯದರ್ಶಿಗಳಾದ ಭೀಮಣ್ಣ ಗಜಾಪುರ,ಸಂಜೆವಾಣಿ ವರದಿಗಾರರಾದ ನಾಗರಾಜ್,ಪ್ರಜಾವಾಣಿ ವರದಿಗಾರರಾದ ಸೋಮಶೇಖರ್ ಆರಾಧ್ಯ ಹಾಗೂ ಕೂಡ್ಲಿಗಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಉದಯವಾಣಿ ಪತ್ರಿಕೆಯ ವರದಿಗಾರರಾದ ನಾಗರಾಜ್ ಉಪಸ್ಥಿತರಿದ್ದರು…

ವರದಿ. ಬಸಣ್ಣಿ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend