ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಜರ್ಮಲಿ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕೆಲಸ…!!!

Listen to this article

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಜರ್ಮಲಿ ಗ್ರಾಮ ಪಂಚಾಯಿತಿ.
ತಾಲೂಕಿನ ಜರ್ಮಲಿ ಗ್ರಾಮ ಪಂಚಾಯಿತಿಗೆ ಸೇರಿದ ಗೆದ್ದಲಗಟ್ಟೆ ಗ್ರಾಮದ ರೈತರ ಜಮೀನುಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ,ಬದು ನಿರ್ಮಾಣ ಕಾಮಗಾರಿಗಳ ಕೆಲಸಮಾಡುತ್ತಿರುವ ರೈತರ ಜಮೀನುಗಳಿಗೆ ತಾಲೂಕ ಪಂಚಾಯಿತಿ ಅಧಿಕಾರಿಗಳಾದ ಜಿಎಂ ಬಸಣ್ಣನವರು ಭೇಟಿಕೊಟ್ಟಿದ್ದರು. 21 ಜನ ಕೂಲಿಕಾರ್ಮಿಕರು ಹೊಲದಲ್ಲಿ ಬದು ನಿರ್ಮಾಣ ಕೂಲಿ ಕೆಲಸ ಮಾಡುತ್ತಿದ್ದರು. ರೈತ ಹರವದಿ ಗ್ರಾಮದ ಪಂಪಣ್ಣ ನವರು ಮಾತನಾಡಿ ಈ ಕರೋನಾ ಸಂಕಷ್ಟದಲ್ಲಿ ರೈತರು ದುಡಿದು ಭೂಮಿಯನ್ನು ಅಚ್ಚುಕಟ್ಟು ಮಾಡಲಾಗುತ್ತಿರಲಿಲ್ಲ, ಉದ್ಯೋಗ ಖಾತ್ರಿ ಯೋಜನೆ ರೈತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಬಹಳ ಮಹತ್ವದ್ದಾಗಿದೆ ಯಾವುದೇ ತರಹದ ಕೂಲಿ ಕೆಲಸವನ್ನು ಮಾಡುವ ಬದಲು ನಮ್ಮ ನಮ್ಮ ಜಮೀನುಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಜಮೀನುಗಳಲ್ಲಿ ಕೂಲಿ ಕೆಲಸ ಮಾಡಿದರೆ ನಮ್ಮ ಜಮೀನುಗಳು ಅಚ್ಚುಕಟ್ಟಾಗಿ ಮತ್ತು ನಮ್ಮ ಜೀವನವೂ ಸಹ ಉತ್ತಮವಾಗಿ ಸಾಗುತ್ತದೆ ಎಂದು ಹೇಳಿದರು ಪ್ರತಿಯೊಬ್ಬ ಕೂಲಿಕಾರ್ಮಿಕರಿಗೆ ದಿನಕ್ಕೆ 289 ರೂಪಾಯಿ ಕೊಡುತ್ತಾರೆ ಎಂದು ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧಿಕಾರಿ ಜಿಎಂ ಬಸಣ್ಣನವರು, ಮಹೇಶ್tms ವಿಷ್ಣುವರ್ಧನ್ice.coddinetra. ಕಾರ್ಯದರ್ಶಿ ಹಾಲಸ್ವಾಮಿ ಬಿಲ್ ಕಲೆಕ್ಟರ್ ಜಾತಪ್ಪ ರೈತ ಹರವದಿ ಪಂಪಣ್ಣ ಸೇರಿದಂತೆ ಕೂಲಿಕಾರ್ಮಿಕರು ಉಪಸ್ಥಿತರಿದ್ದರು.

ವರದಿ. ಡಿ. ಎಂ. ಈಶ್ವರಪ್ಪ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend