ಅಂಡರ್ ಪಾಸ್ ನಿರ್ಮಿಸಿಕೊಡಲು ರಾಷ್ಟ್ರೀಯ ಹೆದ್ದಾರಿ ತಡೆ ಮಾಡಿ ಪ್ರತಿಭಟನೆ ಮಾಡಲಾಯಿತು…!!!

Listen to this article

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಇಂದು ಬೆಳಿಗ್ಗೆ ಬಳ್ಳಾರಿ ಜಿಲ್ಲೆಯ, ಕೂಡ್ಲಿಗಿ ತಾಲೂಕಿನ, ಎಂ, ಬಿ, ಅಯ್ಯನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 50 ನ್ನು ಗ್ರಾಮದ ಗ್ರಾಮಸ್ಥರು, ಹಾಗೂ ಶಾಲಾ ಮಕ್ಕಳು ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳ ಸಮ್ಮುಖದಲ್ಲಿ ರಸ್ತೆ ತಡೆಯನ್ನು ಮಾಡಲಾಯಿತು.

ಕಾರಣ,ಎಂ. ಬಿ. ಅಯ್ಯನಹಳ್ಳಿ ಗ್ರಾಮದ ಮಧ್ಯಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 50 ಹೋಗಿರುವುದರಿಂದ ಗ್ರಾಮದಿಂದ ಈ ರಸ್ತೆಯನ್ನು ದಾಟಿಕೊಂಡು ಶಾಲಾ ಮಕ್ಕಳು, ಹಾಗೂ ಗ್ರಾಮದ ರೈತರು ಮತ್ತು ವಸತಿನಿಲಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ, ಅಂಡರ್ ಪಾಸ್, ಅಥವಾ ಫ್ಲೈಓವರ್ ನಿರ್ಮಿಸಿಕೊಡುವಂತೆ ತಾಲೋಕು ದಂಡಾಧಿಕಾರಿಗಳಿಗೆ ಮನವಿಯನ್ನು ಕೊಟ್ಟು ಅದನ್ನು ನಿರ್ಮಿಸಿಕೊಡಲು ರಸ್ತೆ ತಡೆಯನ್ನು ಮಾಡುವ ಮೂಲಕ ಸರ್ಕಾರದ ಗಮನಕ್ಕೆ ತರಲಾಯಿತು ಈ ಒಂದು ರಸ್ತೆತಡೆಯನ್ನು ಮಾನ್ಯ ತಾಲೋಕು ದಂಡಾಧಿಕಾರಿಗಳಾದ ಮಹಾಬಲೇಶ್ ರವರು ಖುದ್ದು ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ನಿಮ್ಮ ಸಮಸ್ಯೆಯನ್ನು ಪರಿಹರಿಕೊಡುವುದಾಗಿ ಆಶ್ವಾಸನೆಯನ್ನು ನೀಡಿದರು.

ಆದರೆ ಗ್ರಾಮದ ಗ್ರಾಮಸ್ಥರು ಶಾಶ್ವತ ಪರಿಹಾರಕ್ಕಾಗಿ ಅಂಡರ್ ಪಾಸ್ ನಿರ್ಮಿಸಿಕೊಡುವಂತೆ ಕೇಳಿದರಾದರು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ರವರು, ಸ್ಟೀಲ್ ಅಂಡರ್ ಪಾಸ್ ತರಹದ ಒಂದು ದಾರಿಯನ್ನು ತಮಗೆ ಮಾಡಿಕೊಡುವುದಾಗಿ ಹೇಳಿದರು, ಆದರೆ ಮುಂದೆ ಇ ಒಂದು ಸ್ಟೀಲ್ ಅಂಡರ್ ಪಾಸ್ ವೆ ಶಾಶ್ವತ ಪರಿಹಾರವಲ್ಲ ಎಂಬುದು ಅಲ್ಲಿನ ಗ್ರಾಮದ ಗ್ರಾಮಸ್ಥರ ಒಂದು ಕೂಗು, ಮತ್ತು ಈ ಒಂದು ರಸ್ತೆ ತಡೆಯನ್ನು ಕಾನಾಹೊಸಹಳ್ಳಿ ಪೊಲೀಸ್ ಠಾಣೆಯ PSI ಆದ ನಾಗರಾಜರವರು ಮತ್ತು ಠಾಣಾ ಸಿಬ್ಬಂದಿಗಳು ಸ್ಥಳಕ್ಕೆ ಬಂದು ವಾತಾವರಣವನ್ನು ತಿಳಿಗೊಳಿಸಿದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend