ಮೂರರ ಪೋರನ ನೂರಾರು ನುಡಿಗಳು,ಅಪ್ರತಿಮ ಬಾಲಕ ನಿಖಿಲ್*

Listen to this article

*ಮೂರರ ಪೋರನ ನೂರಾರು ನುಡಿಗಳು,ಅಪ್ರತಿಮ ಬಾಲಕ ನಿಖಿಲ್*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಶ್ರೀಪೇಟೆಬಸವೇಶ್ವರ ನಗರವಾಸಿ ಶ್ರಿಮತಿ ತರಕಾರಿ ಕರಿಯಮ್ಮಳ ಮೊಮ್ಮಗ,ಮೂರು ವರ್ಷದ ಪೋರ ನಿಖಲ್ ನೂರಾರು ನುಡಿ ಮುತ್ತುಗಳನ್ನು ಪಟ ಪಟನೆ ನುಡಿಯುತ್ತಾನೆ.ಹತ್ತಾರು ಸ್ರೋತ್ರಗಳನ್ನು ಸುಲಲಿತವಾಗಿ ಪಠಿಸುತ್ತಾನೆ.ಈತನ ಮಸ್ಥಕದಲ್ಲಿ ಹತ್ತಾರು ದೇವರ ಸ್ತೋತ್ರಗಳನ್ನು ಹೊಂದಿಸಿಟ್ಟುಕೊಂಡಿದ್ದಾನೆ.ಅನೆಕ ಊರುಗಳ ಸ್ಥಳ ಮಹಿಮೆ ಹಾಗೂ ವಿಷೇಶ ಸ್ಥಳಗಳ ಕಿರು ಪರಿಚಯ ನೀಡುತ್ತಾನೆ.ಗಣ್ಯಮಾನ್ಯರ ಲಘು ವಿವರ ಕೊಡುತ್ತ‍ನೆ.ಶಿವ ಶರಣರಾದ ಬಸವಣ್ಣ ಸೇರಿದಂತೆ ಅನೇಕ ಶರಣ ಶರಣೆಯರ ಕುರಿತು ಕಿರು ಪರಿಚಯ ನೀಡುತ್ತಾನೆ.ಅವರ ವಚನಗಳನ್ನು ಸುಮಧುರವಾಗಿ ಲಯಬದ್ಧವಾಗಿ ನುಡಿಯುತ್ತಾನೆ,ಪ್ರತಿ ದಿನದ ಆಯಾ ದಿನದಲ್ಲಿ ಪಠಿಸಬೇಕಾದ ದೇವರ ಸ್ತೋತ್ರಗಳನ್ನು ತನ್ನ ತೊದಲು ನುಡಿಯಲ್ಲಿ ಪಟ ಪಟನೆ ನುಡಿಯುತ್ತಾನೆ.ಸ್ಥಳೀಯ ತಾಲೂಕು,ಜಿಲ್ಲೆ,ರಾಜ್ಯದ ಕುರಿತು ಸಂಕ್ಷಿಪ್ತ ಮಾಹಿತಿ ನೀಡುತ್ತಾನೆ.ನಿತ್ಯ ಕರ್ಮಗಳಲ್ಲಿ ಸಂದರ್ಭಾನುಸಾರ ಪಠಿಸಬೇಕಾದ ದೇವರ ಸ್ತೋತ್ರಗಳನ್ನು ಪಠಿಸುತ್ತಾನೆ. ವಯಸ್ಸಿಗೆ ಮೀರಿದ ಆದ್ಯಾತ್ಮ ಜ್ಞನ‍ದಾಹ ಹೊಂದಿದ್ದಾನೆ ಈ ಮೂರರ ಪೋರ.ಇದೆಲ್ಲಾ ತಾಯಿ ಗೀತಾ ಹಾಗೂ ತಂದೆ ಶಿವಶಂಕರರು ನೀಡಿದ ಸಂಸ್ಕಾರದ ಫಲವಾಗಿದೆ.

ಆದರೂ ಈ ಬಾಲಕ ವಯಸ್ಸಿಗೆ ಮೀರಿದ ಜ್ಞಾನ ಹೊಂದಿದ್ದಾನೆ ಈ ಮೂರು ವರ್ಷದ ಪೋರ,ವಯಸ್ಸಿಗೆ ಮೀರಿದ ಸಂಗೀತ ಹಾಗೂ ಸಾಹಿತ್ಯಾಸಕ್ತಿ ಜ್ಞ‍ಾನಾಸಕ್ತಿ ಹಾಗೂ ಸಾಸ್ಕೃತಿಕ ಸಂಸ್ಕಾರ ಪಾಲನೆ ಎಂಥಹವರನ್ನೂ ಸೋಜಿಗರನ್ನಾಗಿಸುತ್ತದೆ. ಅಪ್ರತಿಮ ನೆನಪಿನ ಶಕ್ತಿಯೊಂದಿಗೆ ತನ್ನ ಪ್ರತಿಭೆಯನ್ನ ಅನಾವರಣ ಮಾಡೋ ಮೂಲಕ,ಎಂತಹವರನ್ನೂ ಚಖಿತರನ್ನಾಗಿಸುತ್ತಿದ್ದಾನೆ ಮೂರರ ಪೋರ ನಿಖಿಲ್(mo-97393 35866).
ಈನು ಇನ್ನೂ ಉನ್ನತವಾದ ಜ್ಞಾನ ಸಂಪತ್ತನ್ನ ಹೊಂದಲಿ ಅಪ್ರತಿಮ ಪ್ರತಿಭಾವಂತ ಎಂದು ಖ್ಯಾತನಾಗಲಿ, ಭವಿಷ್ಯದಲ್ಲಿ ತಾಲೂಕಿನ ಜಿಲ್ಲೆಯ ರಾಜ್ಯದ ಅಪರೂಪದ ಪ್ರತಿಭೆಯಾಗಿ ಹೊರ ಹೊಮ್ಮಲಿ ಎಂದು ಹಾರೈಸೋಣ.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend