ಕೊರೋನ ಟಾಸ್ಕ್ ಪೋರ್ಸ್ ಕಾರ್ಯಗಾರ ಸಭೆ..!!ಕೊರೋನ ಟಾಸ್ಕ್ ಪೋರ್ಸ್ ಕಾರ್ಯಗಾರ ಸಭೆ..!!

Listen to this article

ಕೊರೋನ ಟಾಸ್ಕ್ ಪೋರ್ಸ್ ಕಾರ್ಯಗಾರ ಸಭೆ..!!

ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ಗ್ರಾಮದಲ್ಲಿ ದಿನಾಂಕ 06/05/2021 ರಂದು ಕೊರೋನ ಟಾಸ್ಕ್ ಪೋರ್ಸ್ ಕಾರ್ಯಗಾರ ಸಭೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯಿತು. ಶ್ರೀ ರಾಮಾಂಜನೇಯಲು ನೋಡಲ್ ಅಧಿಕಾರಿಗಳು ಸಾಂಕ್ರಾಮಿಕ ರೋಗದ ಬಗ್ಗೆ ಕುರಿತು ಮಾತನಾಡಿದರು, ರೋಗರುಜಿನಗಳಿಂದ ದೂರವಿರಲು ಶುದ್ಧ ನೀರು ಕುಡಿಯುವುದು,. ಬಳಕೆ ಮಾಡಬೇಕು. ತಮ್ಮ ಮನೆ ಸುತ್ತಲಿನ ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಸೊಳ್ಳೆ, ಕ್ರಿಮಿಕೀಟಗಳ ಆವಾಸಸ್ಥಾನವನ್ನು ತಮ್ಮ ಪರಿಸರದಿಂದ ದೂರವಿಡಬೇಕು. ಪರಿಸರ ಸ್ವಚತ್ಛವಾಗಿಡುವ ಮೂಲಕ ರೋಗ ತಡೆಗಟ್ಟಬೇಕು ಎಂದು ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಜಿ ಎಂ ಬಸಣ್ಣ ಮಾತನಾಡಿ : ಕೋವಿಡ್ 2ನೇ ಅಲೆ ಹೆಚ್ಚಾಗುತ್ತಿರುವುದರಿಂದ ಎಲ್ಲರೂ ಕಡ್ಡಾಯವಾಗಿ ಮಾಸ್ಕನ್ನು ಧರಿಸಿ, ಅಂತರ ಕಾಪಾಡಿಕೊಳ್ಳಿ, 45 ವರ್ಷದ ಮೇಲ್ಪಟ್ಟವರು ಲಸಿಕೆಯನ್ನು ಹಾಕಿಸಿ. ಯಾರು ಮನೆಯಿಂದ ಹೊರಗೆ ಬರಬೇಡಿ ಎಂದು ಜಾಗೃತಿ ಮೂಡಿಸಿದರು. ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿಗಾಲದ ಅಶೋಕ್ ತೋಟದ್ ರವರು ಮಾತನಾಡಿ ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸಿದರು, ಈ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷರು ಶ್ರೀಮತಿ ಶಿಲ್ಪ ಬಸಪ್ಪ ಗ್ರಾ.ಪಂ ಕಾರ್ಯದರ್ಶಿಗಳಾದಕೆ ನಿಜಲಿಂಗಪ್ಪ ಗ್ರಾ.ಪಂ ಸದಸ್ಯರು, ಶಿಲ್ಪ ಪಾಲಾಕ್ಷಿ ,ಜಿ ನಾಗರಾಜ,ಬಸವರಾಜ,ಸಿದ್ದನಗೌಡ, ಸರ್ವ ಸದಸ್ಯರು, ಎಲ್ಲಾ ಶಾಲೆಯ ಶಿಕ್ಷಕರು, ಮತ್ತು ಗ್ರಾ.ಪಂ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆ ಸಹಾಯಕರು, ಸಾರ್ವಜನಿಕರು ಉಪಸ್ಥಿತರು.

ವರದಿ ಕೆ ಎಸ್ ವೀರೇಶ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend