ಹೂಡೇಂ: ಕೊರೋನ ಟಾಸ್ಕ್ ಪೋರ್ಸ್ ಕಾರ್ಯಗಾರ ಸಭೆ..!!

Listen to this article

ವಿಜಯನಗರ: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದಲ್ಲಿ (ಏ-29) ರಂದು ಕೊರೋನ ಟಾಸ್ಕ್ ಪೋರ್ಸ್ ಕಾರ್ಯಗಾರ ಸಭೆ, ಶ್ರೀ ಕಂಪಳರಂಗ ಸ್ವಾಮಿ ಪ್ರೌಢಶಾಲೆ ಆವರಣದಲ್ಲಿ ನಡೆಯಿತು. ಶ್ರೀ ರಾಮಾಂಜನೇಯಲು ನೋಡಲ್ ಅಧಿಕಾರಿಗಳು ಸಾಂಕ್ರಾಮಿಕ ರೋಗದ ಬಗ್ಗೆ ಕುರಿತು ಮಾತನಾಡಿದರು, ರೋಗರುಜಿನಗಳಿಂದ ದೂರವಿರಲು ಶುದ್ಧ ನೀರು ಕುಡಿಯುವುದು, ಬಳಕೆ ಮಾಡಬೇಕು. ತಮ್ಮ ಮನೆ ಸುತ್ತಲಿನ ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಸೊಳ್ಳೆ, ಕ್ರಿಮಿಕೀಟಗಳ ಆವಾಸಸ್ಥಾನವನ್ನು ತಮ್ಮ ಪರಿಸರದಿಂದ ದೂರವಿಡಬೇಕು. ನೀರನ್ನು ಶೇಖರಿಸಿ ಇಡುವಾಗ ಇದಕ್ಕೆ ಮುಚ್ಚಳಗಳನ್ನು ಮುಚ್ಚಬೇಕು. ಪರಿಸರ ಸ್ವತ್ಛವಾಗಿಡುವ ಮೂಲಕ ರೋಗ ತಡೆಗಟ್ಟಬೇಕು ಎಂದು ಮಾಹಿತಿ ನೀಡಿದರು. ಕೋವಿಡ್ 2ನೇ ಅಲೆ ಹೆಚ್ಚಾಗುತ್ತಿರುವುದರಿಂದ ಎಲ್ಲರೂ ಕಡ್ಡಾಯವಾಗಿ ಮಾಸ್ಕನ್ನು ಧರಿಸಿ, ಅಂತರ ಕಾಪಾಡಿಕೊಳ್ಳಿ, 45 ವರ್ಷದ ಮೇಲ್ಪಟ್ಟವರು ಲಸಿಕೆಯನ್ನು ಹಾಕಿಸಿ. ಯಾರು ಮನೆಯಿಂದ ಹೊರಗೆ ಬರಬೇಡಿ ಎಂದು ಜಾಗೃತಿ ಮೂಡಿಸಿದರು. ಮರಳುಸಿದ್ದಪ್ಪ ಗ್ರಾಮಲೆಕ್ಕಾಧಿಕಾರಿಗಳು ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸಿದರು, ಧರ್ಮೇಂದ್ರ ನಾಯಕ್ ವೈದ್ಯಾಧಿಕಾರಿಗಳು ಹಾಗೂ ಸೋಮಶೇಖರಪ್ಪ ಮುಖ್ಯಗುರುಗಳು ಕೊರೋನ ನಿಯಂತ್ರಣದ ಬಗ್ಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷರು ಶ್ರೀಮತಿ ಕರಿಬಸಮ್ಮ ದುರ್ಗಪ್ಪ, ಹಾಗೂ ಕೆ ಎಂ ರಾಘವೇಂದ್ರ ಉಪಾಧ್ಯಕ್ಷರು, ಮರಳಸಿದ್ದಪ್ಪ ಗ್ರಾಮಲೆಕ್ಕಾಧಿಕಾರಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಹಂತೇಶ್ ಸ್ವಾಮಿ, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಧರ್ಮೇಂದ್ರ ನಾಯಕ್, ತುಡುಮ ಗುರುರಾಜ ಗ್ರಂಥಪಾಲಕರು ಸ್ವಾಗತ ಕೋರಿದರು, ಕಾರ್ಯದರ್ಶಿಗಳಾದ ಚಂದ್ರಪ್ಪ, ಗ್ರಾ.ಪಂ ಸದಸ್ಯರು ಅಜ್ಜಣ್ಣ, ಜಯಣ್ಣ ಶಶಿಕಲಾ, ಎಲ್ಲಪ್ಪ, ಸರ್ವ ಸದಸ್ಯರು, ಎಲ್ಲಾ ಶಾಲೆಯ ಶಿಕ್ಷಕರು, ಮತ್ತು ಗ್ರಾ.ಪಂ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆ ಸಹಾಯಕರು, ಗ್ರಾಂ.ಪಂ ಸಿಬ್ಬಂದಿ ವರ್ಗದವರು ಉಪಸ್ಥಿತರು.

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend