ಕೂಡ್ಲಿಗಿ ಶಾಸಕರೇ ಇತ್ತ ಗಮನಿಸಿ:ಚರಂಡಿನೀರಲ್ಲೇ ನಿತ್ಯ ಜೀವನ,ಹೊಣೆಗೇಡಿ ಪಪಂಗೆ ನಾಗರೀಕರ ಛೀಮಾರಿ.!?

Listen to this article

*ಕೂಡ್ಲಿಗಿ ಶಾಸಕರೇ ಇತ್ತ ಗಮನಿಸಿ:ಚರಂಡಿನೀರಲ್ಲೇ ನಿತ್ಯ ಜೀವನ,ಹೊಣೆಗೇಡಿ ಪಪಂಗೆ ನಾಗರೀಕರ ಛೀಮಾರಿ.!?*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 15ನೇ ವಾರ್ಡ್ ನ ಕೆಲ ಮನೆಗಳ ಅಂಗಳದಲ್ಲಿ ಚರಂಡಿ ನೀರು ಆಕ್ರಮಿಸಿದೆ,ಇಲ್ಲಿಯ ಜನ ನಿತ್ಯ ಚರಂಡಿ ನೀರಲ್ಲಿಯೇ ಜೀವನ ನಡೆಸುವಂತಾಗಿದೆ.
ಇದು ಪಟ್ಟಣ ಪಂಚಾಯ್ತಿ ಹೊಣೆಗೇಡಿತನಕ್ಕೆ ಸಾಕ್ಷಿಯಾಗಿದೆ ನಾಚಿಗೆ ಬಿಟ್ಟ ಮುಖ್ಯಾಧಿಕಾರಿಯ ನಿರ್ಲಕ್ಷ್ಯ ಧೋರಣೆಗೆ ನಿದರ್ಶನವಾಗಿದೆ ಎಂದು ನಾಗರೀಕರು ಛೀಮಾರಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚರಂಡಿ ಹೂಳು ತುಂಬಿ ತ್ಯಾಜ್ಯ ಕೊಳೆತು ಗಬ್ಬು ನಾರುತ್ತಿದೆ ನೀರು ನಿಂತು ಸೊಳ್ಳೆಗಳ ಕಾರ್ಖಾನೆಯಾಗಿದೆ,
ಇದರಿಂದಾಗಿ ಕೆಲವರು ಡೆಂಗ್ಯೂ ಜ್ವರದಿಂದ ಬಳಲಿ ಕಾಲನ ಕರೆ ಬಂದು ಅದೃಷ್ಠ ವಶಾತ್ ಬದುಕಿದ್ದಾರೆ.ಕೆಳೆದ ಮೂರು ನಾಲ್ಕು ವರ್ಷದಿಂದ ಚರಂಡಿ ಸ್ವಚ್ಛಗೊಳಿಸಿಲ್ಲ ಇದರಿಂದಾಗಿ ಚರಂಡಿ ನೀರು ಮನೆಯನ್ನ ನುಗ್ಗುತ್ತಿದೆ,ಮೂಗನ್ನ ನುಚ್ಚಿಕೊಂಡು ಹುಸಿರು ಗಟ್ಟಿ ನಿತ್ಯ ಜೀವನ ಮಾಡುತಿದ್ದೇವೆ ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಿಲ್ಲ.ಪಪಂ ಅಧಿಕಾರಿಗಳು ಮನುಷ್ಯತ್ವ ಮರೆತಿದ್ದಾರೆ ಸರ್ಕಾರಿ ಸಂಬಳತಿನ್ನೋ ಅವರು, ಸಾರ್ವಜನಿಕರ ಕೆಲ ಮಾಡದೇ ರಾಜಕಾರಣಿಗಳ ಜೀತದಾಳಾಗಿದ್ದಾರೆ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಪಂ ಮುಖ್ಯಾಧಿಕಾರಿ ಪಕೃದ್ಧೀನ್ ರವರು ಕೇವಲ ಶಾಸಕರ ಮಾತನ್ನ ಮಾತ್ರ ಆಲಿಸುತ್ತಾರಂತೆ,ಅದಕ್ಕಾಗಿ ತಾವು ಶಾಸಕರಲ್ಲಿಯೇ ತಮ್ಮ ಆಳಲನ್ನು ತೋಡಿಕೊಳ್ಳುತ್ತಿರುವುದಾಗಿ.
ಶಾಸಕರಲ್ಲಿ ಈ ಮೂಲಕ ನಾಗರೀಕರು ಸೂಕ್ತ ಕ್ರಮಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.


*ಶಾಸಕರೇ ಇತ್ತ ಗಮನಿಸಿ:-* ಪಟ್ಟಣದ 15ನೇ ವಾರ್ಡಿನ ವಾಸಿಗಳಾದ ನಾವು ಮನುಷ್ಯರಾಗಿದ್ದು,ನಿತ್ಯ ಪ್ರಾಣಿಗಳ ತರ ಚರಂಡಿ ನೀರಲ್ಲೇ ಕಾಲ ಕಳೆಯುವಂತಾಗಿದೆ.ನಿತ್ಯನರಕ ಅನುಭವಿಸುತಿದ್ದೇವೆ ಸಾಕಷ್ಟು ಬಾರಿ ಪಪಂ ಅಧಿಕಾರಿಗಳಿಗೆ ತಿಳಿಸಿದ್ದು,ಅವರು ನಿಮ್ಮ ಮಾತನ್ನು ಮಾತ್ರ ಆಲಿಸುತ್ತಾರಂತೆ ಹಾಗೆಂದು ಅವರು ಹೇಳಿಕೊಂಡಿದ್ದಾರೆ. ಕಾರಣ ತಾವು ದಯಮಾಡಿ ಒಮ್ಮೆ ನಾವಿರುವ ಸ್ಥಳಕ್ಕೆ ಭೆಟ್ಟಿಕೊಡಿ ಸ್ವಾಮಿ ಪುಣ್ಯ ಕಟ್ಟಿಕೊಳ್ಳಿ ಎಂದು ನಾಗರೀಕರು ಶಾಸಕರಲ್ಲಿ ಮನವಿ ಮಾಡಿದ್ದಾರೆ.
ಬೇಸಿಗೆಯಲ್ಲಿಯೇ ಹೀಗೆ ಇನ್ನು ಮಳೆಗಾಲದಲ್ಲಿ ಮನೆ ಬಿಟ್ಟು ಬೀದಿಯಲ್ಲಿರಬೇಕಿದೆ,
ನಿತ್ಯ ಚರಂಡಿಯ ನೀರಲ್ಲೆ ವಾಸಮಾಡುತ್ತಿದ್ದು,ಡೆಂಗ್ಯೂ ಜ್ವರ ಟೈಪಾಡ್ ಜ್ವರಗಳಿಂದ ಆಸ್ಪತ್ರೆಗೆ ನಿತ್ಯ ಅತಿಥಿಗಳಾಗುತ್ತಿದ್ದಾರೆ ಇಲ್ಲಿಯ ನಿವಾಸಿಗಳು.
ಸೊಳ್ಳೆಗಳ ಕಡಿತ ದುರ್ನಾಥ ಬೀರೋ ವಾತಾವರಣದಲ್ಲಿ ನಿತ್ಯ ನರಕ ಅನುಭವಿಸುತ್ತಿರುವಂತಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ಹಾಗಾಗಿ ತಮಗೆ
ಸೊಳ್ಳೆ ಗಳ ಸಹೋದರರು ಸಹೋದರಿಯರು ನೆಂಟರಾಗಿದ್ದಾರೆ,
ರೋಗ ಋಜನಿಗಳೇ ಅತ್ಮೀಯರಾಗಿದ್ದಾತೆ ಆದ್ದರಿಂದಾಗಿ ಆಸ್ಪತ್ರೆಗಳು ಆಶ್ರಯ ತಾಣಗಳಾಗಿವೆ.ತಾವು ಮನೆಯಲ್ಲಿರುವುದಕ್ಕಿಂತ ಹೆಚ್ಚು ಕಾಲ ಆಸ್ಪತ್ರೆಗಳಲ್ಲಿಯೇ ಬಹು ದಿನ ಕಳೆಯುವಂತಾಗಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಕಚರಂಡಿಗಳು ಕಾಣದಾಗಿವೆ
ಪಟ್ಟಣದಲ್ಲಿಯೇ ಇಂತಹ ದುರ್ಗತಿನಾ!?
ನಾಚಿಕೆ ಆಗಬೇಕು ಪಪಂ ಅಧಿಕಾರಿಗಳಿಗೆ ಹಾಗೂ ಜವಾಬ್ದಾರಿ ಹೊತ್ತ ಸಿಬ್ಬಂದಿಗೆ ಮತ್ತು ಜನಪ್ರತಿನಿಧಿಗಳಿಗೆ.
ಪಪಂ ಅಧಿಕಾರಿ ಕೇವಲ ಶಾಸಕರ ಮಾತನ್ನ ಮಾತ್ರ ಪರಿಗಣಿಸುತ್ತಾರೆಂತೆ ಮತ್ತ್ಯಾರ ಮಾತನ್ನ ಆಲಿಸುವುದಿಲ್ಲವಂತೆ..!?
ಕಾರಣ ಶಾಸಕರಾದ ಎನ್.ವೈ.ಗೋಪಾಲಕೃಷ್ಣ ರವರು ದೊಡ್ಡ ಮನಸ್ಸು ಮಾಡಿ ನಮ್ಮ ವಾಸಸ್ಥೊಳಕ್ಕೆ,ತಾವು ಶೀಘ್ರವೇ ಭೆಟ್ಟಿ ನೀಡಿ ಪರಿಶೀಲಿಸಬೇಕಿದೆ.ನಮ್ಮ ದುಸ್ಥಿತಿಯನ್ನ ಅರಿತಾದರೂ ನಿಮ್ಮ (ಪಪಂ)ಸೇವಕರಾದ ಮುಖ್ಯಾಧಿಕಾರಿ ಗಳಿಗೆ ಅರ್ಥೈಸಬೇಕಿದೆ,ನಮ್ಮನ್ನು ಆರೋಗ್ಯ ಹಾಗೂ ನೆಮ್ಮದಿಯಿಂದ ಜೀವನ ಮಾಡುವಂತೆ ಅಗತ್ಯ ಕ್ರಮ ಜರುಗಿಸಿ ಎಂದು 15ನೇ ವಾರ್ಡ್ ನ ವಾಸಿಗಳು ಶಾಸಕರಲ್ಲಿ ಈ ಮೂಲಕ ಕೋರಿದ್ದಾರೆ.
ನಿರ್ಲಕ್ಷ್ಯ ತೋರಿದ್ದಲ್ಲಿ ಆಗಬಹುದಾದಂತಹ ಅನಾರೋಗ್ಯದ ಅವಘಡಗಳಿಗೆ,
ಅನಾರೋಗ್ಯದ ಅನಾಹುತಗಳಿಗೆ
ತಾವು ಹಾಗೂ ಪಪಂ ಅಧಿಕಾರಿಗಳು ನೇರ ಹೊಣೆಗಾರರನ್ನಾಗಿಸಲಾಗುವುದೆಂದು ನಾಗರೀಕರು ಎಚ್ಚರಿಸಿದ್ದಾರೆ..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend