ಕೂಡ್ಲಿಗಿ:ಚುನಾವಣೆಗೆ ಸರ್ವಸಿದ್ಧತೆ- ಸಹಾಯಕ ಚುನಾವಣಾಧಿಕಾರಿ ಹೆಚ್.ಎನ್. ರಘು…!!!

Listen to this article

ಕೂಡ್ಲಿಗಿ:ಚುನಾವಣೆಗೆ ಸರ್ವಸಿದ್ಧತೆ- ಸಹಾಯಕ ಚುನಾವಣಾಧಿಕಾರಿ ಹೆಚ್.ಎನ್. ರಘು-ವಿಜಯನಗರ ಜಿಲ್ಲೆ ಕೂಡ್ಲಿಗಿ: ಮೇ7ರಂದು ಜರುಗಲಿರುವ ಲೋಕಸಭಾ ಸಾರ್ವತ್ರಿಕ ಚುನ‍ವಣೆಗೆ, ತಾಲೂಕಾಡಳಿತ ಸರ್ವಸಿದ್ದತೆ ನಡೆಸಲ‍ಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಡಾ”ಹೆಚ್.ಎನ್.ರಘುರವರು ಸ್ಪಷ್ಟಪಡಿಸಿದ್ದಾರೆ. ಅವರು ಎ24ರಂದು ತಾಲೂಕು ಆಡಳಿತ ಸೌಧದಲ್ಲಿ, ಪತ್ರಕರ್ತರನ್ನುದ್ಧೇಶಿಸಿ ಮಾತನಾಡಿದರು. ನಾಲ್ಕು ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದ್ದು, ತಾಲೂಕಿನ ಆಲೂರು ಗೇಟ್, ಸಿದ್ದಾಪುರ, ಉಜ್ಜಿನಿ, ಕೊಂಬಳ್ಳಿ ಗ್ರಾಮಗಳಲ್ಲಿ ಚೆಕ್ ಪೋಸ್ಟ್ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ವಿವರಿಸಿದರು. 09 ಬಳ್ಳಾರಿ (ಪ.ಪಂ)ಲೋಕಸಭಾ ಸಾರ್ವತ್ರಿಕ ಚುನಾವಣೆ-2024, 96 ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾಹಿತಿಯನ್ನು ಅವರು ವಿವರಿಸಿದರು. 9-ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ, ಒಟ್ಟು 10ಜನ ಕಣದಲ್ಲಿದ್ದು ಸ್ಪರ್ಧೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು. ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 2,07,633, ಮತದಾರರಿದ್ದಾರೆ. 1.05,036ಪುರುಷ ಮತದಾರರಿದ್ದಾರೆ, 1,02,586 ಮಹಿಳಾ ಮತದಾರರಿದ್ದಾರೆ. ಕ್ಷೇತ್ರದಲ್ಲಿ 11ಇತರೆ ಮತದಾರರಿದ್ದಾರೆ. 188 ಸ್ಥಳಗಳಲ್ಲಿ ಮತಗಟ್ಟೆಗಳಲ್ಲಿ ಒಟ್ಟು 250 ಮತಗಟ್ಟೆಗಳನ್ನು ನಿರ್ಮಿಸಲಾಗಿರುತ್ತದೆ ಎಂದು ಅವರು ಮಾಹಿತಿ ನೀಡಿದರು. 49 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಮತಗಟ್ಟೆ ಸಂಖ್ಯೆ- 231 ಕಾಳಾಪುರ, ಮತಗಟ್ಟೆ ಸಂಖ್ಯೆ – 131 ಚಿಕ್ಕ ಜೋಗಿಹಳ್ಳಿ ತಾಂಡ. ಒಟ್ಟು 2 ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. 22 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿರುತ್ತದೆ, 85ವರ್ಷಗಳನ್ನು ದಾಟಿರುವ 104ಹಿರಿಯರಿಗಾಗಿ, ಮನೆಯಲ್ಲಿಯೇ ಮತದಾನ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. 102 ವಿಶೇಷ ಚೇತನರಿಗಾಗಿ, ಮತದಾನ ಮಾಡಲು ಸಕಲ ಸಿದ್ಧತೆ ನಡೆಸಲಾಗಿದೆ. ಕೂಡ್ಲಿಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ಮೇ06 ರಂದು ಮಸ್ಟರಿಂಗ್ ಮತ್ತು ಮೇ07ರಂದು ಡಿಮಸ್ಟರಿಂಗ್ ಜರುಗಲಿದೆ. ಒಟ್ಟು 05ಕಡೆಗಳಲ್ಲಿ ಸಖಿ ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು, ಕೂಡ್ಲಿಗಿ ಪಟ್ಟಣದ ರಾಮನಗರದಲ್ಲಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಮತಗಟ್ಟೆ ಸಂಖ್ಯೆ-52). ಪಟ್ಟಣದ ರಾಜೀವ ಗಾಂಧೀನಗರದಲ್ಲಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(ಮತಗಟ್ಟೆ ಸಂಖ್ಯೆ-53). ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಎಡಭಾಗ (ಮತಗಟ್ಟೆ ಸಂಖ್ಯೆ-74). ತಾಲೂಕಿನ ಎಕ್ಕೆಗುಂದಿ ಗ್ರಾಮದಲ್ಲಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ(ಮತಗಟ್ಟೆ ಸಂಖ್ಯೆ -109). ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ, SKDDV ಪ್ರೌಢಶಾಲೆ ಬಲಭಾಗದ (ಮತಗಟ್ಟೆ ಸಂಖ್ಯೆ-187 ರಲ್ಲಿ) ಕೋಣೆ ಸಂಖ್ಯೆ -1ರಲ್ಲಿ ಸಖಿ ಮತಗಟ್ಟೆ ನಿರ್ಮಿಸಲಾಗಿದೆ ಎಂದು ವಿವರಿಸಿದರು. ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಗೋವಿಂದಗಿರಿ ತಾಂಡದಲ್ಲಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರೂಂ ನಂ -1(ಮತಗಟ್ಟೆ ಸಂಖ್ಯೆ 58) ವಿಕಲ ಚೇತನರ ಮತಗಟ್ಟೆ ಎಂದು. ಮತ್ತು ರೂ ನಂ-2ರಲ್ಲಿರುವ (ಮತಗಟ್ಟೆ ಸಂಖ್ಯೆ-59)ಯನ್ನು Ethnic ಮತಗಟ್ಟೆ ಎಂದು ಗುರುತಿಸಲಾಗಿದೆ. ಪಟ್ಟಣ ಪಂಚಾಯ್ತಿ ವ್ಯಾಪ್ತಿಯ KK ಹಟ್ಟಿಯಲ್ಲಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಮತಗಟ್ಟೆ ಸಂಖ್ಯೆ-45) ಯುವ ಮತದಾರರ ಮತಗಟ್ಟೆ ಎಂದು ಗುರುತಿಸಲಾಗಿದೆ. ಕೂಡ್ಲಿಗಿ ಪಟ್ಟಣದ ಸ.ಸಂ.ಪ.ಪೂ.ಕಾಲೇಜ್ (ಜೂನಿಯರ್ ಕಾಲೇಜ್-ಮತಗಟ್ಟೆ ಸಂಖ್ಯೆ-34) ನ ರೂ ನಂ-1ನ್ನು ಮಾದರಿ ಮತಗಟ್ಟೆ. ಮತ್ತು ಇಲ್ಲಿಯೇ ಇರುವ ಇನ್ನೊಂದು (ಮತಗಟ್ಟೆ ಸಂಖ್ಯೆ-35)ಮತಗಟ್ಟೆ ಯನ್ನು Thematic ಮತಗಟ್ಟೆ ಎಂದು ಗುರುತಿಸಲಾಗಿದೆ. ಲೋಕಸಭಾ ಚುನಾವಣೆಯ ನಂತರದಲ್ಲಿ ಮತ ಎಣಿಕೆಯು, ಬಳ್ಳಾರಿ ನಗರದಲ್ಲಿರುವ, ರಾವ್ ಬಹದ್ದೂರು ಮಹಾಬಲೇಶ್ವರ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಜರುಗಲಿದೆ ಎಂದರು. ಚುನಾವಣೆ ಹಿನ್ನಲೆಯಲ್ಲಿ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರಕ್ಕೆ ಬೇಕಾಗಿರುವ EVM ಮಷಿನ್ ಗಳನ್ನು, ಕೂಡ್ಲಿಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ಎಪ್ರಿಲ್ 26-27 ರಂದು ದಾಸ್ತಾವೇಜು ಮಾಡಲಾಗುತ್ತದೆ. ಮನೆ ಮತದಾನ ಎಪ್ರಿಲ್ 28-29-30ರಂದು, ನಿಯಮಾನುಸಾರ ಜರುಗಿಸಲಾಗುತ್ತದೆ. ಕ್ಷೇತ್ರದ ಸಮಸ್ತ ಮತಗಟ್ಟೆಗಳ ಚುನಾವಣೆ ಸಿಬ್ಬಂದಿಗೆ, ಒಂದನೇ ಹಂತದ ತರಬೇತಿ ನಡೆದಿದ್ದು. ಎರೆಡನೇ ಹಂತದ ತರಬೇತಿಯನ್ನು ಮೇ1ರಂದು, ಕೂಡ್ಲಿಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ಬೆ10 ರಿಂದ ಸಂಜೆ5ಗಂಟೆವರೆಗೆ ನೀಡಲಾಗುವುದೆಂದು. ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ, ಡಾ”ಹೆಚ್.ಎನ್.ರಘು ರವರು ತಿಳಿಸಿದ್ದಾರೆ…

ವರದಿ.ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend