ಕುಮತಿ:ವಿನಾಃ ಕಾರಣ ಮಾರಣಾಂತಿಕ ಹಲ್ಲೆ- ಆರೋಪ…!!!

Listen to this article

ಕುಮತಿ:ವಿನಾಃ ಕಾರಣ ಮಾರಣಾಂತಿಕ ಹಲ್ಲೆ- ಆರೋಪ-ವಿಜಯನಗರ ಜಿಲ್ಲೆ ಕೂಡ್ಲಿಗಿ: ತಾಲೂಕಿನ ಕುಮತಿ ಗ್ರಾಮದಲ್ಲಿ, ಮಾ25ರಂದು ಅದೇ ಗ್ರಾಮದ 10-15ಜನರಿದ್ದ ಗುಂಪೊಂದು. ವಿನಾಃಕಾರಣ ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ, ಅದೇ ಗ್ರಾಮದ ಗಂಭೀರವಾಗಿ ಗಾಯಗೊಂಡ ಗಾಯಾಳುಗಳು ಆರೋಪಿಸಿದ್ದಾರೆ. ಅವರು ಹಲ್ಲೆಗೊಳಗಾಗಿ ಹತ್ತಿರದ ಚಿಕ್ಕಜೋಗಿಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗೆ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ, ಗಾಯಾಳುಗಾಳಾದ ಚಂದ್ರಶೇಖರ ಗಂಗಮ್ಮ ಸಿದ್ದೇಶಪ್ಪ ಮೌಕಿಕ ದೂರು ನೀಡಿದ್ದಾರೆ.

ಸಂಬಂಧಿಸಿದಂತೆ ಹೊಸಹಳ್ಳಿ ಪೊಲೀಸ್ಬರನ್ನು ಸಂಪರ್ಕಿಸಿದ್ದು ಏನೂ ಪ್ರಯೋಜನವಾಗಿಲ್ಲ, ನಮ್ಮೂರಲ್ಲಿ ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪಿಗಳು ಭಾರೀ ಧರ್ಪತೋರುತ್ತಿದ್ದಾರೆ. ಅವರು ಸಿನಿಮೀಯ ರೀತಿಯಲ್ಲಿ ರೌಡಿಸಂ ಮಾಡಲಾಗುತ್ತಿದ್ದು, ನಮ್ಮನ್ನು ಕೊಲೆ ಮಾಡುವ ದುರುದ್ದೇಾಶದಿಂದ ಅವರು ನಮ್ಮ ಮೇಲೆ ಅವರು ಹಲ್ಲೆ ಮಾಡಿದ್ದಾರೆ. ನಮಗೆ ಪ್ರಾಣ ಬೆಧರಿಕೆ ಹಾಕಿದ್ದು ನಾವು ಏನೇ ಮಾಡಿದರೂ ಯಾರೇನು ಮಾಡಲಿಕ್ಕಾಗಲ್ಲ, ನಾವೇನೆ ಮಾಡಿದರೂ ಕೂಡ ಜೈಲು ಮೆಟ್ಟಿಲು ಹತ್ತಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ನಮಗೆ ಅವರು ಹೆಧರಿಸುತ್ತಿದ್ದಾರೆ.

ಮನಸ್ಸು ಮಾಡಿದರೆ ಯಾವ ಸಂದರ್ಭದಲ್ಲಿಯಾದರೂ, ನಾವು ಯಾರ ಪ್ರಾಣ ಬೇಕಾದರೂ ತೆಗೆಯುವುದು ಅರಗಿಸಿಕೊಳ್ಳುವೆವು ಎಂದು ದಬ್ಭಾಳಿಕೆಯಿಂದ ಬೆಧರಿಕೆ ಹಾಕಿದ್ದಾರೆಂದು ಚಿಕಿತ್ಸೆ ಪಡೆಯುತ್ತಿರುವ ಸಿದ್ದೇಶಪ್ಪ ಗಂಗಮ್ಮ ಚಂದ್ರಶೇಖರ ಹೇಳಿಕೆ ನೀಡಿ ಮೌಕಿಕವಾಗಿ ದೂರು ನೀಡಿದ್ದಾರೆ. ವಿಜಯನಗರ SP ರವರು ನಮಗೆ ಪ್ರಾಣ ರಕ್ಷಣೆ ನೀಡಬೇಕು, ಬಿನಾಃಕಾರಣ ನಮ್ಮನ್ನು ಕೊಲೆ ಮಾಡಲು ಯತ್ನಿಸಿ ದಬ್ಭಾಳಿಕೆ ಮೆರೆದಿರುವ. ತಪ್ಪಿತಸ್ಥ ಆರೋಪಗಳ ವಿರುದ್ಧ ಕಾನೂನು ರೀತ್ಯ ಶಿಕ್ಷೆ ಕೊಡಬೇಕೆಂದು, ಅವರು ಈ ಮೂಲಕ ವಿಜಯ ನಗರ SPರವರ ಬಳಿ ಕೋರಿದ್ದಾರೆ. ಪೊಲೀಸ್ ಇಲಾಖೆ ಮೇಲೆ ನಮಗೆ ಅಪಾರವಾದ ನಂಬಿಕೆ ವಿಶ್ವಾಸವಿದೆ,

ಹೊಸಹಳ್ಳಿ ಪೊಲೀಸರ ಮೃಧು ಧೊರಣೆ ಸಲ್ಲ..-ಆದ್ರೆ ಹೊಸಹಳ್ಳಿ ಪೊಲೀಸ್ ರು ನಮ್ಮ ಅಳಲನ್ನು ಆಲಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ದೂರು ನೀಡಲು ಸಂಪರ್ಕಿಸಿದರೂ ಕೂಡ ಸ್ಪಂಧಿಸಿಲ್ಲ ಎಂದು, ನೊಂದ ಗಾಯಾಳುಗಳು ಹೊಸಹಳ್ಳಿ ಪೊಲೀಸ್ ರವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಘಟನೆ ಜರುಗಿ ದಿನವಾದರೂ ತಮ್ಮನ್ನ ಸಂಪರ್ಕಿಸಿಲ್ಲ ಹಾಗೂ ಠಾಣೆಗೆ ತೆರಳಿ ದೂರು ನೀಡಲು ಪ್ರಯತ್ನಿಸಿದರೂ ಸ್ಪಂಧಿಸಿಲ್ಲ ಎಂದು ಅವರು ದೂರಿದ್ದಾರೆ. ಹೊಸಹಳ್ಳಿ ಪೊಲೀಸರು ಆರೋಪಿತರ ವಿರುದ್ಧ ಮೃಧು ಧೋರಣೆ ತೋರಿದ್ದಾರೆ, ನಮಗೆ ರಕ್ಷಣೆ ಸಿಗುವ ಹಾಗೂ ದೌರ್ಜನ್ಯ ಎಸಗಿದವರ ವಿರುದ್ಧ. ಕಾನೂನು ರೀತ್ಯ ಶಿಕ್ಷೆ ನೀಡಲಿದ್ದಾರೆಂಬ ನಮಗೆ ನಂಬಿಕೆ ಇಲ್ಲ, ಇಲಾಖೆಯ ಧಕ್ಷ ಉನ್ನತಾಧಿಕಾರಿ SPರವರೇ ನಮ್ಮನ್ನ ಕಾಪ‍ಾಡಬೇಕಿದೆ ಎಂದು ನೊಂದವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ…

ಮಾದ್ಯಮ ಗಳ ಮೊರೆ-ನ್ಯಾಯಾಂಗ ಹೋರಾಟ-ಇದೇ ರೀತಿ ಇಲಾಖೆಯ ಉನ್ನತಾಧಿಕಾರಿಗಳು ನಮ್ಮ ಅಳಲನ್ನು ಆಲಿಸದಿದ್ದಲ್ಲಿ, ನಮಗಾದ ಅನ್ಯಾಯದ ವಿರುದ್ಧ SPರವರ ಕಚೇರಿ ಬಳಿ ಪ್ರತಿಭಟಿಸಲಾಗುವುದು ಆಗೂ ಸ್ಪಂಧಿಸದಿದ್ದಲ್ಲಿ.

ನಮಗಾದ ‍ಅನ್ಯಾಯ ದೌರ್ಜನ್ಯಕ್ಕೆ ಕಾರಣ ಹಾಗೂ ಇಲಾಖೆಯ ನಿರ್ಲಕ್ಷ್ಯ ಧೊರಣೆ ಕುರಿತು, ಎಲ್ಲಾ ಮಾಧ್ಯಮಗಳ ಕಚೇರಿಗಳಿಗೆ ಸೂಕ್ತ ಸಾಕ್ಷ್ಯಾಧಾರಗಳ ಸಮೇತ ಮಾಹಿತಿ ದೂರು ನೀಡಲಾಗುವುದು. ಮಗಾದ ಅನ್ಯಾಯದ ವಿರುದ್ದ ಸಂಬಂಧಿಸಿದ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ, ಕೋರ್ಟ್ ಮೊರೆ ಹೋಗಿ ನ್ಯಾಯಾಂಗ ಹೋರಾಟ ಮಾಡಲಾಗುವುದೆಂದು ಅವರು ಹೇಳಿಕೆ ನೀಡಿದ್ದಾರೆ.

ವಿಜಯನಗರ SP ರವರೇ ನೊಂದವರನ್ನ ರಕ್ಷಿಸಿ- ಪ್ರಜ್ಞಾವಂತರ ಒತ್ತಾಯ- ವಿಜಯನ ನಗರ SP ರವರು ಧಕ್ಷತೆ ಹೆಸರಾಗಿದ್ದಾರೆ, ಈ ಪ್ರಕರಣವನ್ನು ಅವರು ಮುತುವರ್ಜಿಯಿಂದ ನೊಂದವರಿಗೆ ರಕ್ಷಣೆ ನೀಡಬೇಕಿದೆ. ಮತ್ತು ಪ್ರಕರಣದಲ್ಲಿ ಆರೋಪಿಸಿರುವ ಆರೋಪಿಗಳನ್ನು, ಕಾನೂನು ರೀತ್ಯ ವಿಚಾರಣೆಗೊಳಪಡಿಸಿ. ಅವರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿ ಶಿಕ್ಷೆವಿಧಿಸುವಂತೆ ಕ್ರಮ ಕೈಗೊಳ್ಳಬೇಕಿದೆ ಎಂದು, ಕಾನೂನು ಪಧವೀದರರು ಹಾಗೂ ಪ್ರಜ್ಞಾವಂತರು ಈ ಮೂಲಕ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend