ಕೂಡ್ಲಿಗಿ:SSLC ಕನ್ನಡ ಪರೀಕ್ಷೆ ಗೆ, ತಾಲೂಕಿನಲ್ಲಿ 4656 ವಿದ್ಯಾರ್ಥಿಗಳು ಹಾಜರು- ವಿಜಯನಗರ ಜಿಲ್ಲೆ ಕೂಡ್ಲಿಗಿ…!!!

Listen to this article

ಕೂಡ್ಲಿಗಿ:SSLC ಕನ್ನಡ ಪರೀಕ್ಷೆ ಗೆ, ತಾಲೂಕಿನಲ್ಲಿ 4656 ವಿದ್ಯಾರ್ಥಿಗಳು ಹಾಜರು- ವಿಜಯನಗರ ಜಿಲ್ಲೆ ಕೂಡ್ಲಿಗಿ: ಪ್ರಸಕ್ತ ಸಾಲಿನ SSLC ಪರೀಕ್ಷೆಗೆ ತಾಲೂಕಿನಲ್ಲಿ ಒಟ್ಟು 4656 ವಿದ್ಯಾರ್ಥಿಗಳು ಹಾಜರಾಗಿದ್ದಾರೆಂದು. ಕೂಡ್ಲಿಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ, ಪದ್ಮನಾಭ ಕರ್ಣಂ ರವರು ಮಾ25ರಂದು ಮಾಹಿತಿ ನೀಡಿದ್ದಾರೆ. ಶ್ರೀ ಕ್ಷೇತ್ರ ಉಜ್ಜಿನಿ ಸೇರಿದಂತೆ ತಾಲೂಕಿನ ಗುಡೇಕೋಟೆ, ಖಾನಾ ಹೊಸಹಳ್ಳಿ ಹೋಬಳಿಗಳು ಮತ್ತು ಕೂಡ್ಲಿಗಿ ಪಟ್ಟಣದಲ್ಲಿ. ಕೂಡ್ಲಿಗಿ ಕ್ಷೇತ್ರದದಲ್ಲಿ, ಒಟ್ಟು15 ಪರೀಕ್ಷಾ ಕೇಂದ್ರಗಳಲ್ಲಿ SSLC ಪರೀಕ್ಷೆಗಳು ಜರುಗುತ್ತಿವೆ. ತಾಲೂಕಿನಲ್ಲಿ ಗಂಡು 2432 ಹೆಣ್ಣು 2331 ಒಟ್ಟು 4753 ವಿದ್ಯಾರ್ಥಿಗಳು, ಪರೀಕ್ಷೆಗೆ ಪ್ರವೇಶಾತಿ ಪತ್ರ ಪಡೆದಿದ್ದಾರೆ. ಅದರಲ್ಲಿ ಪರೀಕ್ಷೆಯ ಪ್ರಾರಂಭದ ದಿನವಾದ ಮಾ25ರಂದು, ವಿಷಯ ಕನ್ನಡ ಭಾಷೆ ಪರೀಕ್ಷೆಗೆ ಗಂಡು 2383 ಹೆಣ್ಣು 2273 ಒಟ್ಟು 4656ವಿದ್ಯಾರ್ಥಿಗಳು ಹಾಜರಿದ್ದಾರೆಂದು ಅವರು ತಿಳಿಸಿದ್ದಾರೆ. ಉಳಿದಂತೆ ತಾಲೂಕಿನಲ್ಲಿ ಒಟ್ಟು 97 ಜನ ವಿದ್ಯಾರ್ಥಿಗಳು, ಪರೀಕ್ಷೆಗೆ ಗೈರು ಹಾಜರಿಯಾಗಿದ್ದಾರೆಂದು ಅವರು ತಿಳಿಸಿದ್ದಾರೆ. ತಾವು ಉಜ್ಜಿನಿ ಹಾಗೂ ಕೂಡ್ಲಿಗಿಯ ಸಂತ ಮೈಕೇಲ್ ಶಾಲೆ, ಹಾಗೂ ಸರ್ಕಾರಿ ಸಂಯುಕ್ತ ಪದವಿ ಪೂರ್ವಕಾಲೇಜ್ ಗೆ ತುರ್ತು ಭೇಟಿ ನೀಡಿ ಪರೀಶಿಲಿಸಿರುವುದಾಗಿ ತಿಳಿಸಿದ್ದಾರೆ. ಮೊಬೈಲ್ ಸ್ಕೊಡ್ ಸೇರಿದಂತೆ ಪ್ರತಿ ಪರೀಕ್ಷಾ ಕೇಂದ್ರಗಳ ಕೊಠಡಿಗಳ, CC ಕ್ಯಾಮೆರಾಗಳು ಕಾರ್ಯ ನಿರತವಾಗಿರುತ್ತವೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ, ತಾಲ‍ಾ ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಆರೋಗ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತಿ ಕೊಠಡಿಗಳಿಗೆ ರೂಮ್ ಸೂಪರ್‌ ವೈಜರ್, ಹಾಗೂ ಪ್ರತಿ ಪರೀಕ್ಷಾ ಕೇಂದ್ರಕ್ಕೆ ತಲಾ ಒಬ್ಬರಂತೆ ನೋಡಲ್ ಅಧಕಾರಿ ನೇಮಿಸಲಾಗಿದೆ. ಒಟ್ಟು 450 ಸಿಬ್ಬಂದಿ ಕರ್ಥವ್ಯ ನಿರ್ವಹಿಸಲಿದ್ದು, ಪರೀಕ್ಷಾ ಸಮಯರಲ್ಲಿ ಇಲಾಖೆಯ ಉನ್ನತಾಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲಿಸುತ್ತಾರೆ. ಪ್ರತಿ ಪರೀಕ್ಷ‍ಾ ಕೇಂದ್ರಗಳಲ್ಲಿ ಇಲಾಖೆಯ ನಿರ್ಧೇಶನದಂತೆ, ಮೂಲ ಭೂತ ಸೌಕರ್ಯಗಳು ಪರೀಕ್ಷೆಗೆ ಬೇಕ‍ಾದ ಅಗತ್ಯ ಸೌಕರ್ಯಗಳನ್ನು ಸಕಾಲಕ್ಕೆ ಒದಗಿಸಲು ಕ್ರಮ ಜರುಗಿಸಲಾಗಿದೆ. ಪ್ರತೀ ಪರೀಕ್ಷಾ ಕೇಂದ್ರಗಳ ಸುತ್ತ 200ಮೀಟರ್ ಅಂತರದವರೆಗೆ, ಪ್ರವೇಶ ನಿಷೇಧಿತ ಪ್ರದೇಶ ಎಂದು ಗರುತಿಸಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಪರೀಕ್ಷೆ ಸಮಯದ ನಂತರ ನಿಗದಿತ ಸಮಯದಲ್ಲಿ ಉತ್ತರ ಪತ್ರಿಕೆಗಳನ್ನು, ಪೊಲೀಸ್ ಬಿಗಿ ಭದ್ರತೆ ಯೊಂದಿಗೆ ಜಿಲ್ಲ‍ಾ ಕೇಂದ್ರದಲ್ಲಿರುವ ಶಿಕ್ಷಣ ಕೇಂದ್ರಕ್ಕೆ. ಸಕಾಲಕ್ಕೆ ಸುರಕ್ಷಿತವಾಗಿ ತಲುಪಿಸಲಾಗುವುದು ಎಂದು ಶಿಕ್ಷಣಾಧಿಕಾರಿ ಪದ್ಮನಾಭ ಕರ್ಣಂ ಮಾಹಿತಿ ನೀಡಿದ್ದಾರೆ…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend