ಕೂಡ್ಲಿಗಿ:ಸಮರ್ಪಕವಾಗಿ ನೀರು ಪೂರೈಸಿ-ಹೋರಾಟಗಾರ ಸಿ.ವಿರುಪಾಕ್ಷಪ್ಪ ಒತ್ತಾಯ…!!!

Listen to this article

ಕೂಡ್ಲಿಗಿ:ಸಮರ್ಪಕವಾಗಿ ನೀರು ಪೂರೈಸಿ-ಹೋರಾಟಗಾರ ಸಿ.ವಿರುಪಾಕ್ಷಪ್ಪ ಒತ್ತಾಯ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದಲ್ಲಿ, ಕೆಲವೆಡೆಗಳಲ್ಲಿ ತಿಂಗಳಿಂದ ನೀರು ಪೂರೈಕೆಯಾಗುತ್ತಿಲ್ಲ. ವಿಚಾರಿಸಿದರೆ ಡ್ಯಾಂ ನಲ್ಲಿ ನೀರಿಲ್ಲ ಸಹಕರಿಸಿ ಎಂದು, ಮುಖ್ಯಾಧಿಕಾರಿ ಪ್ರಕಟಣೆ ಮೂಲಕ ತಿಳಿಸಿ ಕಟ್ಟಿಕೊಂಡಿದ್ದಾರೆ. ಬೇಸಿಗೆಯಲ್ಲಿ ನೀರು ಜೀವ ಜಲ ಮಾತ್ರವಲ್ಲ ಜೀವನ ಜಲವಾಗಿದೆ, ಕಾರಣ ಸಮರ್ಪಕವಾಗಿ ನೀರು ಪೂರೈಸುವ ನಿಟ್ಟಿನಲ್ಲಿ. ಪರ್ಯಾಯ ವ್ಯವಸ್ಥೆ ಮಾಡಿ ಅಗತ್ಯ ಇರುವೆಡೆಗಳಲ್ಲಿ, ನೀರನ್ನು ಸಮರ್ಪಕವಾಗಿ ಒದಗಿಸಬೇಕೆಂದು ಹೋರಾಟಗಾರರು ಹಾಗೂ ವಕೀಲರಾದ ಸಿ.ವಿರುಪಾಕ್ಷಪ್ಪ ಪಪಂ ಗೆ ಒತ್ತಾಯಿಸಿದ್ದಾರೆ. ಪಟ್ಟಣದ ಹಲೆವೆಡೆಗಳಲ್ಲಿ ಪಪಂ ಪಂಪಸೆಟ್ ಗಳ ನೀರನ್ನು, ಕೆಲವರು ಅನಧಿಕೃತವಾಗಿ ಬಳಸಿಕೊಂಡು ಹಾಡುಹಗಲೇ ಕದಿಯುತ್ತಿರುವ ಬಗ್ಗೆ ದೂರು ಕೇಳಿಬಂದಿವೆ. ಹಲವೆಡೆಗಳಲ್ಲಿ ಮಿನಿ ಟ್ಯಾಂಕ್ ಗಳಲ್ಲಿ ನೀರು ಪೋಲಾಗುತ್ತಿದ್ದರೂ, ಕೂಡ, ಪಪಂ ಅಧಿಕಾರಿ ಹಾಗೂ ಸಿಬ್ಬಂದಿ ಮತ್ತು ಪಪಂ ಜನಪ್ರತಿನಿಧಿಗಳು ತಡೆದಿಲ್ಲ. ಇನ್ನು ಪಪಂ ವತಿಯಿಂದ ಟ್ಯಾಂಕರ್ ಗಳ ಮೂಲಕ ನೀರನ್ನು ಪೂರೈಸಲ‍ಾಗುತ್ತಿದೆಯ‍ದರೂ, ಅದು ಯಾತಕ್ಕೂ ಆಗದು ನೀರು ಪೂರೈಕೆಯಲ್ಲಿಯೂ ತಾರತಮ್ಯ ಜರುಗುತ್ತಿದೆ ಎಂಬ ಆರೋಪಗಳಿವೆ. ಮೊದಲು ಸಕ್ರೀಯವಾಗಿರುವ ಪಪಂ ಬೋರ್ ವೆಲ್, ಹಾಗೂ ಎಲ್ಲಾ ಮಿನಿ ಟ್ಯಾಂಕಗಳಿಂದ ನೀರು ಜನರಿಗೆ ವದಗಿಸುವಂತಾಗಬೇಕಿದೆ. ಬೇಸಿಗೆ ಮುಗಿಯುವ ವರೆಗೂ ಅಗತ್ಯ ಇರೋಕಡೆಗಳಲ್ಲಿ, ಪ್ರತಿನಿತ್ಯ ಟ್ಯಾಂಕ್ ಗಳ ಮೂಲಕ ನೀರು ಪೂರೈಸುವಂತೆ ಕ್ರಮ ಕೈಗೊಳ್ಳಬೇಕಿದೆ. ನಿಂತಿರುವ ಮಿನಿ ಟ್ಯಾಂಕ್ ಗಳ ಬೋರ್ ಗಳನ್ನು ದುರಸ್ಥಿಗೊಳಿಸಿ, ಎಲ್ಲಾ ಮಿನಿ ಟ್ಯಾಂಕ್ ಗಳಲ್ಲಿ ಸದಾ ನೀರು ಲಭ್ಯ ಇರುವಂತೆ ವ್ಯವಸ್ಥೆ ಮಾಡಬೇಕು. ಪಟ್ಟಣದ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿಗೊಳಿಸಿ, ಪ್ರತಿ ವಾರ್ಡ್ ಗಳಲ್ಲಿ ಶುದ್ಧ ನೀರು ದೊರಕುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಸಂಬಳ ಪಡೆಯೋ ಅಧಿಕಾರಿಗಳು ಹಾಗೂ ಸಿಬ್ಬಂದಿ, ಕರ್ಥವ್ಯ ನಿಷ್ಠೆ ತೋರಬೇಕಿದೆ. ಪಪಂ ಸದಸ್ಯರು ಹಾಗೂ ಪ್ರಭಾವಿ ಜಬಪ್ರತಿನಿಧಿಗಳು, ಜನಪರ ಕಾಳಜಿ ಹೊಂದಬೇಕು ಹಾಗೂ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ ಎಂದು ಸೂಚಿಸಿದ್ದಾರೆ. *ನಿರ್ಲಕ್ಷ್ಯ ತೋರಿದರೆ-ಹೋರಾಟ ಖಚಿತ*- ಪಪಂ ಅಧಿಕಾರಿ ಸಮರ್ಪಕವಾಗಿ ನೀರು ಪೂರೈಸುವಲ್ಲಿ ನಿರ್ಲಕ್ಷ್ಯ ತೋರಿದ್ದಲ್ಲಿ,ಅಥವಾ ಪ್ರಕಟಣೆ ನೀಡಿ ಜನರಿಗೆ ಸ್ಪಂದಿಸದಿದ್ದಲ್ಲಿ. ಪಪಂ ಮುಖ್ಯಾಧಿಕಾರಿ ವಿರುದ್ಧ ಸಾರ್ವಜನಿಕರ ಹಿತಕ್ಕಾಗಿ, ಅಗತ್ಯ ಕಾನೂನು ಹೋರಾಟ ಹಮ್ಮಿಕೊಳ್ಳಲಾಗುವುದು. ಪಟ್ಟಣದ ಕಾರ್ಮಿಕರ ರೈತರ ಮಹಿಳೆಯರ ಕನ್ನಡಪರ ಸಂಘಟನೆಗಳ, ಸಹಯೋಗದೊಂದಿಗೆ ನಿರ್ಲಕ್ಷ್ಯ ಧೋರಣೆ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಅವರು ಎಚ್ಚರಿಸಿದ್ದಾರೆ. ಕಾರ್ಮಿಕ ಮುಖಂಡ ಗುನ್ನಳ್ಳಿ ರಾಘವೇಂದ್ರ ಸೇರಿದಂತೆ, ವಿವಿದ ಕಾರ್ಮಿಕ ಹೋರಾಟಗಾರರು ಇದ್ದರು…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend