ಜರ್ಮಲಿ:JCI ಗೋಲ್ಡಾನ್ & ಮೈದಾನ ಗೆಳೆಯರ ಬಳಗದಿಂದ ಶ್ರಮದಾನ…!!!

Listen to this article

ಜರ್ಮಲಿ:JCI ಗೋಲ್ಡಾನ್ & ಮೈದಾನ ಗೆಳೆಯರ ಬಳಗದಿಂದ ಶ್ರಮದಾನ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಾಳೇಗಾರರು ಆಳಿದ ನಾಡು, ಕೋಟೆ ಕೊತ್ತಲಬೀಡು ಐತಿಹಾಸಿಕ ಸ್ಥಳ. ತಾಲೂಕಿನ ಜರ್ಮಲಿ ಗ್ರಾಮದ, ಹೊರವಲಯದಲ್ಲಿರುವ ಗುಡ್ಡದಲ್ಲಿ. ಕೂಡ್ಲಿಗಿ JCI ಗೋಲ್ಡಾನ್, ಹಾಗೂ ಮೈದಾನ ಗೆಳೆಯರ ಬಳಗದವರಿಂದ. ಇತಿಹಾಸ ಪ್ರಸಿದ್ದ ಕೋಟೆಯ ಆವರಣಲ್ಲಿ, ಆಂಜನೇಯ ಮೂರ್ತಿಯ ಮುಂಭಾಗದಲ್ಲಿ. ಆ27ರಂದು ಸ್ವಯಂ ಪ್ರೇರಣೆಯಿಂದ ಶ್ರಮದಾನ ಮಾಡೋ ಮೂಲಕ, ಪಾರಂಪರಿಕ ತಾಣವನ್ನು ಸ್ವಚ್ಚಗೊಳಿಸಿದರು. ಇದೇ ರೀತಿಯಾಗಿ ಎರೆಡೂ ತಡಗಳ ಸಹಭಾಗಿತ್ವದಲ್ಲಿ, ಪ್ರತಿ ಭಾನುವಾರದಂದು ತಾಲೂಕಿನ ಐತಿಹಾಸಿ ತಾಣಗಳಲ್ಲಿ.
ಶ್ರಮದಾನ ಮಾಡೋ ಮೂಲಕ ಸ್ವಚ್ಚಗೊಳಿಸಿ, ಅವುಗಳನ್ನು ಸುಸ್ಥಿತಿಯಲ್ಲಿ ಉಳಿಸುವ ನಿಟ್ಟಿನಲ್ಲಿ ಸರಣಿ ಕಾರ್ಯಕ್ರಮ ಆಯೋಜಿಸಿದ್ದು. ಅಂತೆಯೇ ಆ27ರಂದು ಎರೆಡೂ ತಂಡದವರು, ಜರ್ಮಿಲಿ ಗುಡ್ಡದಲ್ಲಿನ ದಾರಿಯನ್ನು ಶ್ರಮದಾನದ ಮೂಲಕ ಸುಸ್ಥಿತಿಗೆ ತಂದಿದ್ದಾರೆ. ಇದೇ ರೀತಿ ಪ್ರತೀ ಭಾನುವಾರದ ಬೆಳಿಗ್ಗೆ 06-00 ಗಂಟೆಯಿಂದ, ಮಧ್ಯಾಹ್ನ 11-00 ಗಂಟೆಯವರೆಗೆ ಶ್ರಮದಾನ ಮಾಡಲು ಯೋಜಿಸಲಾಗಿದೆ. ಸಂಬಂಧಿಸಿದಂತೆ ಮೈದಾನ ಗೆಳೆಯರ ಬಳಗದ ನಾಗರಾಜ ಕೊಟ್ರಪ್ಪನವರು ಮಾತನಾಡಿದ್ದಾರೆ, ಅವರು ಸರಣಿ ಶ್ರಮದಾನದ ಕುರಿತು ಮಾಹಿತಿ ನೀಡಿದ್ದಾರೆ. ಸಾರ್ವಜನಿಕರು ಗ್ರಾಮಸ್ಥರು ಯಾರೇ ಆಗಲಿ ಶ್ರಮದಾನದ ಸೇವೆಯಲ್ಲಿ, ಸ್ವಯಂ ಆಸಕ್ತಿಬಯಿಂದ ಶ್ರಮದಾನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಇಂತಹ ಕಾರ್ಯದಿಂದ ಪಾರಂಪರಿಕ ತಾಣಗಳನ್ನು, ಸುಸ್ಥಿಯಲ್ಲಿರಿಸಿ ಉಳಿಸಬಹುದಾಗಿದೆ. ಇದು ಪ್ರತಿಯೊಬ್ಬ ಗ್ರಾಮಸ್ಥನ, ಹಾಗೂ ಪ್ರತಿ ನಾಗರೀಕರ, ಪ್ರಜ್ಞಾವಂತರ ಕರ್ತವ್ಯವಾಗಿದೆ ಎಂದಿದ್ದಾರೆ….

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend