🪔ನಿಧನ ವಾರ್ತೆ: ಬಿ.ಶಿವಕುಮಾರಿ,ರಂಗ ಕಲಾವಿದೆ ಕೂಡ್ಲಿಗಿ🪔…!!!

Listen to this article

🪔ನಿಧನ ವಾರ್ತೆ: ಬಿ.ಶಿವಕುಮಾರಿ,ರಂಗ ಕಲಾವಿದೆ ಕೂಡ್ಲಿಗಿ🪔- ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣದವಾಸಿಗಳು ರಾಜ್ಯೋತ್ಸವ ಪ್ರಶಸ್ತಿ ಕಲಾವಿದೆ, ವಾಲ್ಮೀಕಿ ಸಮುದಾಯದ ರಾಜ್ಯ ಮಟ್ಟದ ಹಿರಿಯ ರಂಗಕಲಾವಿದೆ. ಬಿ.ಶಿವಕುಮಾರಿ(55) ಆಗಸ್ಟ್ 12ರಂದು ಸಂಜೆ, ಹೃದಯ ಘಾತದಿಂದ ನಿಧನರಾಗಿದ್ದಾರೆ. ಅವರು ಓರ್ವ ಪುತ್ರನನ್ನು. ಸಹೋದರರು ಸಹೋದರಿಯರು, ಅಮ್ಮ, ಚಿಕ್ಕಮ್ಮಂದಿರು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟಗಲಿದ್ದಾರೆ. ಅವರು ತಮ್ಮ ಚಿಕ್ಕ ವಯಸ್ಸಿನಿಂದಲೇ ರಂಗಕಲಾ ಕ್ಷೇತ್ರಕ್ಕೆ, ಪಾದಾರ್ಪಣೆ ಮಾಡಿದವರು. ಅವರು ತಮ್ಮ ಸುಮಾರು ಮೂರ್ನಾಲ್ಕು ದಶಕಗಳ ಕಾಲ, ನಿರಂತರವಾಗಿ ರಂಗ ಕಲೆಯಲ್ಲಿ ತಮ್ಮನ್ನ ಅರ್ಪಿಸಿಕೊಂಡವರಾಗಿದ್ದಾರೆ. ರಾಜ್ಯದೆಲ್ಲೆಡೆ ತಮ್ಮ ಮನೋಜ್ಞವಾದ ಹಾಡುಗಾರಿಕೆ ಹಾಗೂ ಅಭಿನಯದ ಕಲೆಯಿಂದ ಹೆಸರು ಮಾಡಿ, ರಾಜ್ಯದೆಲ್ಲೆಡೆ ಅಭಿಜಾತ ರಂಗ ಕಲಾವಿದೆ ಎಂಬ ಕೀರ್ತಿ ಹೊಂದಿದ್ದರು. ಅವರ ಕಲಾ ಸೇವೆಗೆ ಕರ್ನಾಟಕ ರಾಜ್ಯೋತ್ಸವ , ರಾಜ್ಯ ರಂಗಕಲಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ. ಹತ್ತಾರು ರಾಜ್ಯ ಮಟ್ಟದ ಪ್ರಶಸ್ತಿಗಳು ಹಾಗೂ ಅಂಖ್ಯಾತ ವೇದಿಕೆಗಳಲ್ಲಿ, ಸನ್ಮಾನ ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಮುಡಿಗೆ ಹೊಂದಿದ್ದವರು. *ಮೃತರ ಅಂತ್ಯಕ್ರಿಯೆ*- ಮೃತ ಬಿ.ಶಿವಕುಮಾರಿ ರವರ ಅಂತ್ಯಕ್ರಿಯೆ, ಆಗಸ್ಟ್ 13ರಂದು ಪಟ್ಟಣದ ಅಂಚಿನಲ್ಲಿರುವ ಶಾಂತಿ ವನದಲ್ಲಿ ಜರುಗಲಿದೆ. *ಸಂತಾಪ*- ರಂಗಕಲಾಗಿದೆ ಬಿ.ಶಿವಕುಮಾರಿ ರವರ ಅಗಲಿಕೆಗೆ, ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಜಿಲ್ಲೆಯ ರಾಜ್ಯದ ಸಮಸ್ತ ವಾಲ್ಮೀಕಿ ಸಮುದಾಯವರು. ವಿವಿದ ಸಮುದಾಯದವರು.ಕ್ಷೇತ್ರದ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಉಪಾಧ್ಯಕ್ಷರು ಸರ್ವ ಸದಸ್ಯರು. ಜಿಲ್ಲಾ ಪಂಚಾಯ್ತಿ ಹಾಗೂ ವಿವಿದ ಜನ ಪ್ರತಿನಿಧಿಗಳು. ಶ್ರೀಪೇಟೆಬಸವೇಶ್ವರ ಭಜನೆ ಹಾಗೂ ರಂಗ ಕಲಾವಿದರ ಸಂಘ ಹಾಗೂ ಶ್ರಿರಾಮಲಿಂಗೇಶ್ವರ ರಂಗ ಕಲಾವಿದರ ಹಾಗೂ ಭಜನೆ ಮತ್ತು ಡೊಳ್ಳು ಕುಣಿತ ಕಲಾವಿದರ ಸಂಘ. ವಿವಿದ ಕಲಾವಿದರ ಸಂಘಟನೆಗಳು, ವಿವಿದ ಕನ್ನಡ ಪರ ಸಂಘಟನೆಗಳು, ವಿಬಿದ ಮಹಿಳಾ ಸಘಟನೆಗಳು. ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಮಿಕ, ದಲಿತ, ರೈತ ಸಂಘಟನೆಗಳು. ವಿವಿದ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು.ವಿವಿದ ಪಕ್ಷಗಳ ಮುಖಂಡರು ಹಾಗೂ ಕಾರ್ಯಕಕರ್ತರು. ಪತ್ರಕರ್ತರು, ಸಮಾಜ ಸೇವಕರು, ಗಣ್ಯಮಾನ್ಯರು, ಹಿರಿಯ ರಂಗಕಲಾವಿದರು. ಯುವ ಕಲಾವಿದರು. ಹೋರಾಟಗಾರರು. ಸಂಗೀತ ಕಲಾವಿದರು. ರಂಗ ನಿರ್ಧೇಶಕರು. ಸಾಹಿತಿಗಳು, ನಾಡಿನ ಗಣ್ಯರು ರಂಗ ಕಲಾವಿದೆ ಬಿ.ಶಿವಕುಮಾರಿಯವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ…

ವರದಿ.ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend