ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸೆಟ್ರಟರ್ ವಿತರಣೆ…!!!ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸೆಟ್ರಟರ್ ವಿತರಣೆ.

Listen to this article

ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸೆಟ್ರಟರ್ ವಿತರಣೆ.
ಕೂಡ್ಲಿಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ಆಕ್ಸಿಜನ್ ಕಾನ್ಸೆಟ್ರಟರ್ ವಿತರಿಸಲಾಯಿತು. ಕುರುಣಾ ಸಂದರ್ಭದಲ್ಲಿ ಆಮ್ಲಜನಕದ ಕೊರತೆ ತೀವ್ರತರವಾಗಿ ಇರುವ ಹಿನ್ನೆಲೆಯಲ್ಲಿ ಪರಮಪೂಜ್ಯ ಡಾಕ್ಟರ್ ಡಿ ವೀರೇಂದ್ರ ಹೆಗ್ಗಡೆಯವರು ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಿಗೆ 100 ಟನ್ ಆಕ್ಸಿಜನ್ ಪೂರೈಕೆ ಮಾಡುವ ಗುರಿಯನ್ನು ಹೊಂದಿದ್ದು ಈ ಪೈಕಿ ತುರ್ತು ಸಂದರ್ಭದಲ್ಲಿ ಬಳಕೆಯಾಗುವ ಆಕ್ಸಿಜನ್ ಕಾನ್ಸಂಟ್ರೇಟ್ ಅನ್ನು ಕೂಡ ವಿತರಿಸಲಾಗಿದೆ. ಕೂಡ್ಲಿಗಿ ತಾಲೂಕು ಆಸ್ಪತ್ರೆಗೂ ಒಂದು ಕಾನ್ಸನ್ಟ್ರೇಟ್ ಅನ್ನು ಈ ದಿನ ವಿತರಿಸಲಾಯಿತು. ಕೂಡ್ಲಿಗಿ ತಾಲೂಕು ಯೋಜನಾಧಿಕಾರಿ ಮಂಜುನಾಥ್ ಬಿ ರವರು ತಾಲೂಕು ಆರೋಗ್ಯಾಧಿಕಾರಿ ಅವರಾದ ಮಾನ್ಯ ಶ್ರೀ ಷಣ್ಮುಖ ನಾಯಕ್ ರವರಿಗೆ ಆಕ್ಸಿಜನ್ ಕಾನ್ಸಂಟ್ರೇಟ್ ಉಪಕರಣವನ್ನು ವಿತರಿಸಿದರು. ಕೂಡ್ಲಿಗಿ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಸಿದ್ದೇಶ್, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾಕ್ಟರ್ ವಿನಯ್, ಧರ್ಮಸ್ಥಳ ಸಂಸ್ಥೆಯ ಕೂಡ್ಲಿಗಿ ತಾಲೂಕಿನ ಮೆನೇಜರ್ ನಿಂಗಯ್ಯ ಅಮೋಘ ಮಠ, ಆಸ್ಪತ್ರೆಯ ಪ್ರಮುಖ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕೊರೋನಾ ಸಂದರ್ಭದಲ್ಲಿ ಆಕ್ಸಿಜನ್ ನ ತೀವ್ರ ಕೊರತೆ ಉಂಟಾಗುತ್ತಿದ್ದು ಎಷ್ಟು ಆಕ್ಸಿಜನ್ ಇದ್ದರೂ ಸಾಲದಾಗಿದೆ. ಇಂತಹ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಕೊಡುಗೆ ಅತ್ಯಂತ ಸ್ಮರಣೀಯವಾದುದು ಎಂದು ತಾಲೂಕು ವೈದ್ಯಾಧಿಕಾರಿಗಳು ಅಭಿಪ್ರಾಯಪಟ್ಟರು.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend