ಕೂಡ್ಲಿಗಿ ತಾಲೂಕಿನ, ಎಂ.ಬಿ.ಅಯ್ಯನಹಳ್ಳಿ ಪರೀಕ್ಷಾ ಕೇಂದ್ರಕ್ಕೆ ಇಂದು ನಮ್ಮ ಎಚ್ಚರಿಕೆ ಪತ್ರಿಕಾ ತಂಡ ಭೇಟಿ, ಪರಿಶೀಲನೆ…!!!

Listen to this article

ವಿಜಯನಗರ ಜಿಲ್ಲೆಯ, ಕೂಡ್ಲಿಗಿ ತಾಲೂಕಿನ, ಎಂ.ಬಿ.ಅಯ್ಯನಹಳ್ಳಿ ಗ್ರಾಮದಲ್ಲಿ ಶ್ರೀಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಇಂದು SSLC ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರವಾಗಿದ್ದು,ವಿದ್ಯಾರ್ಥಿಗಳ ಕೋವಿಡ್ ಆರೋಗ್ಯ ದೃಷ್ಟಿಯಿಂದ ಪರೀಕ್ಷಾ ಕೇಂದ್ರವನ್ನು ಸ್ಯಾನಿಟೇಸರ್ ಮಾಡಿ, ಹಾಗೂ ಆರೋಗ್ಯ ಸಿಬ್ಬಂದಿಗಳ ಒಂದು ಸಮ್ಮುಖದಲ್ಲಿ ಅಂದರೆ ಗ್ರಾಮಮಟ್ಟದಲ್ಲಿನ ಆಶಾಕಾರ್ಯಕರ್ತೆಯರನ್ನು ಪರೀಕ್ಷಾ ಕೇಂದ್ರದಲ್ಲಿ ನಿಯೋಜನೆ ಮಾಡಿ ಪರೀಕ್ಷಿಸಿ, ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದ ಒಳಗಡೆಗೆ ಬಿಡಲಾಗುತ್ತಿತ್ತು, ಮತ್ತು ಸಾರಿಗೆ ವ್ಯವಸ್ಥೆಯು ಸಹ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಕಂಡು ನಮ್ಮ ಪತ್ರಿಕೆಯ ವರದಿಗಾರರಾದ “ಬಸಣ್ಣಿ ಬಣವಿಕಲ್ಲು “ರವರು ಅಲ್ಲಿರುವ ಆಡಳಿತ ಮಂಡಳಿಯನ್ನು ಪರೀಕ್ಷಾ ಕೇಂದ್ರದ ಹಾಗೂ ಮಕ್ಕಳ ಆರೋಗ್ಯ ದೃಷ್ಟಿಯಲ್ಲಿ ನಿಮ್ಮ ನಿರ್ವಹಣೆ ಏನೂ ಎನ್ನುವ, ಒಂದು ಪ್ರಶ್ನೆಯನ್ನು ಅಲ್ಲಿರುವ ಆಡಳಿತ ಮಂಡಳಿ ಸರ್ಕಾರದ ನಿಯಮದಂತೆ, ಶಾಲೆಯನ್ನು ಸಂಪೂರ್ಣ ಸ್ಯಾನಿಟೇಸರ್ ಮಾಡಿ ಪ್ರತಿಯೊಂದು ಕೋಣೆಗೆ, ಹತ್ತರಿಂದ, ಹನ್ನೆರಡು ವಿದ್ಯಾರ್ಥಿಗಳನ್ನು ಮಾತ್ರ ಕೂಡಲು ಅನುವುಮಾಡಿಕೊಟ್ಟಿದ್ದೇವೆ ಮತ್ತು ಆರೋಗ್ಯ ಸಿಬ್ಬಂದಿಗಳ ಸಹಯೋಗದಲ್ಲಿ ಪ್ರತಿಯೊಂದು ವಿದ್ಯಾರ್ಥಿಗಳ ಆರೋಗ್ಯ ಪರಿಶೀಲನೆಯನ್ನು ಮಾಡಿ ಪರೀಕ್ಷೆಯನ್ನು ನಡೆಸಲಾಗುವುದು. ಎನ್ನುವ ಒಂದು ಸಮಂಜಸವಾದ ಉತ್ತರವನ್ನು ನೀಡುವುದರ ಮುಖಂತಾರ, ತಮ್ಮ ಒಂದು ಅನಿಸಿಕೆಯನ್ನು ವ್ಯಕ್ತ ಪಡಿಸಿದರು ಹಾಗೂ ಎಲ್ಲಾ ಕೊಠಡಿಗೆ ನಮ್ಮ ವರದಿಗಾರರು ಭೇಟಿಯನ್ನು ನೀಡಿ ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಿದರು…

ವರದಿ. ಬಸಣ್ಣಿ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend