ಶ್ರೀಗುರು ಕನಕ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭ…!!!

Listen to this article

ಶ್ರೀಗುರು ಕನಕ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭ.
ಸಂಸ್ಕೃತಿ ಉಳಿವಿಗೆ ಶಾಲ
ವಾರ್ಷಿಕೋತ್ಸವ ಪಾತ್ರ ಪ್ರಮುಖ

ಕಾನಹೊಸಹಳ್ಳಿ: -ನಾಡಿನ ಸಂಸ್ಕೃತಿ, ಕಲೆ, ಸಾಹಿತ್ಯವನ್ನು ಉಳಿಸಿ, ಬೆಳೆಸುವಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಡಾ. ರೇವಯ್ಯ ಒಡೆಯರ್ ಸಂಶೋಧನಾ ಮುಖ್ಯಸ್ಥರು, ಕಾನೂನು ಇಲಾಖೆ ವಿಧಾನಸೌಧ ಬೆಂಗಳೂರು ಇವರು ಹೇಳಿದರು. ತಾಲೂಕಿನ ತಾಯಕನಹಳ್ಳಿ ಗ್ರಾಮದ ಶ್ರೀ ಗುರು ಕನಕ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಗುರು ಕನಕ ವಿದ್ಯಾ ಕೇಂದ್ರದ 22ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು ನವೋದಯಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡಿ ಅವರನ್ನು ಉದ್ದೇಶಿಸಿ ಇಂಥ ಶಾಲೆಯಲ್ಲಿ ಸೇರಿ ವಿದ್ಯಾಭ್ಯಾಸ ಪಡೆದರೆ ಒಳ್ಳೆ ಶಿಕ್ಷಣ ಸಿಗುತ್ತದೆ ಎಂದರೆ ತಪ್ಪಾಗಲಾರದು ವಿದ್ಯ ಕೊಂಚ ಕಡಿಮೆ ಆದರು ಸಂಸ್ಕಾರ ಕಡಿಮೆ ಆಗಬಾರದು, ಸಮಾಜಕ್ಕೆ ಉತ್ತಮ ಶಿಕ್ಷಣ ನೀಡಲು ಕನಕ ವಿದ್ಯಾ ಕೇಂದ್ರ ಬದ್ಧವಾಗಿದೆ. ಮಕ್ಕಳಿಗೆ ಶಿಕ್ಷಣ ನೀಡುವುದು ಪೋಷಕರ ಪ್ರಥಮ ಕರ್ತವ್ಯ ಪೋಷಕರಿಗೂ ಹಾಗೂ ನೀವು ವಿದ್ಯಾಭ್ಯಾಸ ಮಾಡಿದ ವಿದ್ಯಾ ಸಂಸ್ಥೆಗಳಿಗೆ ಹೆಸರು ತರುವುದು ವಿದ್ಯಾರ್ಥಿಗಳ ಕರ್ತವ್ಯಎಂದು ಹೇಳಿ ಉನ್ನತ ವಿದ್ಯಾಭ್ಯಾಸ ಮಾಡಿ ಒಂದು ಉನ್ನತ ಹುದ್ದೆಯನ್ನು ಅಲಂಕರಿಸಿ ಸಮಾಜದಲ್ಲಿ ಒಳ್ಳೆಯ ಹೆಸರು ತರುವಂತ ಆದರ್ಶ ವ್ಯಕ್ತಿಗಳಾಗಿ ಬಾಳಿರಿ ಎಂದು ಹೇಳಿದರು.
ಇದೇ ವೇಳೆ ಐಮಾಸ್ಟರ್ ವಿಷ್ಣು ಅವರು ಮಾತನಾಡಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡುವುದು, ಅವರಲ್ಲಿ ಸಂಸ್ಕಾರ ಮೂಡಿಸುವುದು ಮತ್ತು ಪರಂಪರೆಯ ಬಗ್ಗೆ ತಿಳಿವಳಿಕೆ ಮೂಡಿಸುವುದು ಶಿಕ್ಷಕರ, ಪಾಲಕರ ಮತ್ತು ಸಮಾಜದ ಕರ್ತವ್ಯ. ಮಕ್ಕಳಿಗೆ ಟಿವಿ, ಮೊಬೈಲ್ ಗಳಿಂದ ದೂರ ಇರಬೇಕೆಂದು ತಿಳಿಸಿದರು.
ಜಿ ಕೊಟ್ರೇಶ್ ಉಪನಿರ್ದೇಶಕರು ಈ ಕಾರ್ಯಕ್ರಮದಲ್ಲಿ ಮಾತನಾಡಿದರು ಹಾಗೂ ಶಾಲೆಯ ಅಭಿವೃದ್ಧಿಗೆ ಅವರ ತಂದೆ ತಾಯಿ ಹೆಸರಿನಲ್ಲಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡುತ್ತೇನೆ ಎಂದು ಹೇಳಿದರು
ಸಾಹಿತಿ ಹಾಗೂ , ಕನ್ನಡ ಪ್ರಭ ವರದಿಗಾರ ಭೀಮಣ್ಣ ಗಜಾ ಪುರ್ ಶಿಕ್ಷಣ ಮತ್ತು ಸಂಸ್ಕಾರದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಇನ್ನು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಈ ಸಂದರ್ಭದದಲ್ಲಿ ಗ್ರಾ.ಪಂ ಅಧ್ಯಕ್ಷೆ ಕರಿಬಸಮ್ಮ ದುರುಗಪ್ಪ, ಉಪಾಧ್ಯಕ್ಷ ಕೆ.ಎನ್ ರಾಘವೇಂದ್ರ,‌ ತಾಯಕನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎ.ಬಿ ರಂಗಪ್ಪ, ಗ್ರಾಪಂ ಮಾಜಿ ಉಪಾಧ್ಯಕ್ಷ ಎಚ್ ಮಹಂತಪ್ಪ, ಸಿಆರ್.ಪಿ‌ ತಿಪ್ಪೇಸ್ವಾಮಿ ಎಸ್,‌ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕೆ.ಕೆಂಚಲಿಂಗಪ್ಪ, ಕಾರ್ಯದರ್ಶಿ ಬಿ.ಟಿ.ಮಂಜಣ್ಣ, ಶಾಲೆಯ ಮುಖ್ಯ ಶಿಕ್ಷಕರು ಸುನಿತಾ ಗುರುರಾಜ್, ಗ್ರಾಪಂ ಸದಸ್ಯರಾದ ಕುಮಾರ್‌, ಟಿ.ಆನು ಗದ್ದಿಗೇಶ್, ಸಾಕಮ್ಮ ಆಂಜಿನಪ್ಪ, ಪ್ಯಾರಿ ಮ್ಯಾಬಿ ಗನಿಸಾಬ್, ಬಿ.ಕಾಟಯ್ಯ, ಪಾರ್ವತಮ್ಮ ಕ್ಯಾತಯ್ಯ, ಸಹಿಪ್ರಾ ಶಾಲೆ ಮುಖ್ಯಶಿಕ್ಷಕ ಡಿ.ಪಾಲಯ್ಯ, ಶಾಲಾ ಭೂದಾನಿ ಗೂಳಜ್ಜನವರ ಹನುಮಪ್ಪ, ಮುಖಂಡರಾದ ಲಕ್ಕಜ್ಜಿ ಮಲ್ಲಿಕಾರ್ಜುನ, ಈಡಿಗರು ಮಲ್ಲಿಕಾರ್ಜುನಪ್ಪ, ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಸಾಲಿ ವೆಂಕಟೇಶ್, ಶಾಲಾ ಶಿಕ್ಷಕರು, ಪೋಷಕರು, ಮಕ್ಕಳು ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ವಿರೇಶ್. ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend