ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಕೃಷಿ ತರಬೇತಿ ಕಾರ್ಯಗಾರವನ್ನು ನಡೆಸಲಾಯಿತು…!!!

Listen to this article

ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ವಲಯದ ಸಾಣೆ ಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಖಾಂತರ ಕೃಷಿ ವಿಸ್ತಾರಣಾ ಕಾರ್ಯಕ್ರಮದಡಿಯಲ್ಲಿ ತೋಟಗಾರಿಕ ಬೆಳೆಗಳ ಬಗ್ಗೆ, ಕೃಷಿ ತರಬೇತಿ ಕಾರ್ಯಗಾರವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಆಸಕ್ತ 12 ಜನ ರೈತರಿಗೆ 1560 ಗೊಡಂಬಿ ಗಿಡಗಳನ್ನು ಯೋಜನೆಯಿಂದ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಮಾನ್ಯ ಜಿಲ್ಲಾನಿರ್ದೇಶಕರಾದ ಶ್ರೀ ಚಿದಾನಂದ ಕೆ ರವರು ಮಲೆನಾಡಲ್ಲಿ ಬೆಳೆಯುವಂತಹ ಗೊಡಂಬಿ ಬೆಳೆಯನ್ನು ಪ್ರಸ್ತುತ ನಮ್ಮ ಬಿಸಿಲು ನಾಡಿನಲ್ಲೂ ಪ್ರಯೋಗಿಕವಾಗಿ ಮಾಡಲು ಅಸಕ್ತ ರೈತರಿಗೆ ಗಿಡಗಳನ್ನು ವಿತರಿಸಿದ್ದು, ಉತ್ತಮವಾಗಿ ನಾಟಿ ನಿರ್ವಹಣೆ ಮಾಡುವ ಬಗ್ಗೆ, ಮಾಹಿತಿ ನೀಡಿದರು ಶ್ರೀ ಎಂ ಬಸವರಾಜು ಜಿಲ್ಲಾ ರೈತ ಸಂಘದ ಕಾರ್ಯದ್ಯಾಕ್ಷರು ಇವರು ಸಾವಯವ ಕೃಷಿ, ಮತ್ತು ಸಿರಿಧಾನ್ಯ ಬೆಳೆಯುವ ಬಗ್ಗೆ ಮತ್ತು ಬಳಕೆ ಮಾಡುವ ಬಗ್ಗೆ, ರೈತರಿಗೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ತೋಟಗಾರಿಕ ಇಲಾಖೆಯ ಅಧಿಕಾರಿಯಾದ ಶ್ರೀಮತಿ ಅ‍ಶ್ವಿನಿಯವರು ತೋಟಗಾರಿಕಾ ಬೆಳೆಗಳ ಕ್ಷೇತ್ರವನ್ನು ಹೆಚ್ಚುವರಿ ಮಾಡುವ ಬಗ್ಗೆ ಮತ್ತು ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಎಲ್ಲಾ ರೈತರು ಇಲಾಖೆಗೆ ಭೇಟಿ ನೀಡಿ ಮಾಹಿತಿ ಪಡೆದು ಸೌಲಭ್ಯ ಪಡೆದುಕೊಳ್ಳುವ ಬಗ್ಗೆ ಸಲಹೆ ಸೂಚನೆ ನೀಡಿದರು.ಈ ಕಾರ್ಯಕ್ರಮದಲ್ಲಿ ಶ್ರೀ ಡಿ ಮಹೇಶ್‌ ಜಿಲ್ಲಾ ರೈತ ಸಂಘದ ಮುಖಂಡರು ಮತ್ತು ಶ್ರೀ ಕೆ ಗೊವಿಂದಪ್ಪ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿಯಾದ ಸಂತೋಷ, ಗ್ರಾ ಪಂ ಸದಸ್ಯರಾದ ವಿರೇಶ್‌ ಕೃಷಿ ಮೇಲ್ವಿಚಾರಕರಾದ ಮಹಾಲಿಂಗಯ್ಯ ಸವಣೂರು ವಲಯ ಮೇಲ್ವಿಚರಕರಾದ ಅನಿಲ್‌ ಸ್ಥಳೀಯ ಸೇವಾಪ್ರತಿನಿಧಿ ಕೊಟ್ರೇಶ್‌ ಲಕ್ಷ್ಮಿ ಯಮುನಾ ಮತ್ತು ರೈತರು ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend