ಎಲಿಮೆಂಟ್ 14 ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಸಂಸ್ಥೆಯಡಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳ ಸಬಲೀಕರಣ ದತ್ತು ಯೋಜನೆ ಕಾರ್ಯಕ್ರಮ…!!!

Listen to this article

ಎಲಿಮೆಂಟ್ 14 ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಸಂಸ್ಥೆಯಡಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳ ಸಬಲೀಕರಣ ದತ್ತು ಯೋಜನೆ ಕಾರ್ಯಕ್ರಮ
ಕಾನಹೊಸಹಳ್ಳಿ :- ಸರಕಾರಿ ಶಾಲೆಗಳ ಅಭಿವೃದ್ಧಿಪಡಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಜೀ ಕೊಟ್ರೇಶ್ ಹೇಳಿದರು.
ಕಾನಹೊಸಹಳ್ಳಿ ಸಮೀಪದ ಕಾನಮಡುಗು ವಿನ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಎಲ್ಲಿ ಮೆಂಟ್ 14 ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇವರ ಸಂಸ್ಥೆಯ ಅಡಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳ ಸಬಲೀಕರಣ ಮಾಡುವ ನಿಟ್ಟಿನಲ್ಲಿ ದತ್ತಿ ಯೋಜನೆ ಉದ್ಘಾಟನೆ ಕಾರ್ಯಕ್ರಮ ಹಾಗೂ ಶಾಲೆಗಳ ದತ್ತಿ ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ತಂತ್ರಜ್ಞಾನ ಅಳವಡಿಕೆಯಿಂದ ಶಿಕ್ಷಣದ ಗುಣಮಟ್ಟ ಹೆಚ್ಚಳವಾಗಿದ್ದು ಅದಕ್ಕೆ ಪೂರಕವಾಗುವ ಸ್ಮಾರ್ಟ್ ಕ್ಲಾಸ್ ಸಹಕಾರಿಯಾಗಲಿದ್ದು ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದರು.
ಎಲಿಮೆಂಟ್ 14ಸಂಸ್ಥೆ ಯ ಮುಖ್ಯಸ್ಥ ಗೋಪಾಲಕೃಷ್ಣ ಮರಳಿ ಮಾತಾನಾ ಡಿ ಹಿಂದುಳಿದ ಪ್ರದೇಶಗಳ ಶಾಲೆಗಳ ಅಭಿವೃದ್ಧಿ ಹಾಗೂ
ಗ್ರಾಮೀಣ ಅಭಿವೃದ್ಧಿ ನಮ್ಮ ಸಂಸ್ಥೆಯ ಗುರಿಯಾಗಿದ್ದು ಈ ನಿಟ್ಟಿನಲ್ಲಿ ಈ ಭಾಗದ ನಾಲ್ಕು ಶಾಲೆಗಳನ್ನು ಚಿತ್ರದುರ್ಗದಲ್ಲಿ ಎರಡು ಶಾಲೆಗಳನ್ನು ದತ್ತು ಪಡೆದಿದ್ದೇವೆ. ಈಗಾಗಲೇ ಮೂರು ಲಕ್ಷಕ್ಕೂ ಅಧಿಕ ಬೆಲೆಬಾಳುವ ಪರಿಕರಗಳನ್ನು ಶಾಲೆಗಳಿಗೆ ನೀಡಿದ್ದೇವೆ ಎಂದರು. ಡಯಟ್ ಪ್ರಾಂಶುಪಾಲರಾದ ಹನುಮಕ್ಕ ನವರು ತಹಸೀಲ್ದಾರರಾದ ಟಿ.ಜಗದೀಶ್ ರವರು eo ರವಿ ಕುಮಾರ್ ರವರು, ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ್ ನಾಯ್ಕ್. ತಳವಾರ ಶರಣಪ್ಪ ಶಿಕ್ಷಕರು. ಈ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾನಾಮಡಗು ದಾಸೋಹ ಮಠದ ದಾಮ ಐಮುಡಿ ಶರಣಾರ್ಯರು ಸಾನ್ನಿಧ್ಯ ವಹಿಸಿದ್ದರು.ಈ ಸಂದರ್ಭದಲ್ಲಿ ಗ್ರಾ. ಪಂ ಅಧ್ಯಕ್ಷೆ ಮಹಾದೇವಮ್ಮ,bಡಯಟ್ ಪ್ರಾಚಾರ್ಯ ಹನುಮಕ್ಕ, ಮಾತೃಶ್ರೀ ಚಾರಿಟೇಬಲ್ ಟ್ರಸ್ಟ್ ಶಿಲ್ಪಾ ಶೆಟ್ಟಿ. ಬಿಇಓ ಯುವರಾಜನಾಯ್ಕ್. ನೋಡಲ್ ಅಧಿಕಾರಿ ರಾಮಸ್ವಾಮಿ, ಬಿಸಿಯೂಟ ಸಹಾಯಕ ನಿರ್ದೇಶಕ ಆಂಜನೇಯ,ಕರ್ನಾಟಕ ನೌಕರರ ಸಂಘದ ಅಧ್ಯಕ್ಷ ಶಿವರಾಜ್. ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ್.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೊಟ್ರಗೌಡ ಶಿವಾನಂದ. ಶಿಕ್ಷಕರಾದ ಸಿದ್ದೇಶ್ ಸಿದ್ದಾಪುರ. ಶ್ರೀ ಅಣ್ಣಪ್ಪಸ್ವಾಮಿ ಶಿಕ್ಷಣ ಸಂಯೋಜಕರು ಹೊಸಳ್ಳಿ ವಿಭಾಗ. ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಶಾಲಾ ಮಕ್ಕಳು. ಶಾಲಾ ಆಡಳಿತ ಮಂಡಳಿ. ಪತ್ರಕರ್ತ ಮಿತ್ರರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು….

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend