ಕಾನಹೊಸಹಳ್ಳಿಸೋಫಿಯಾ ಶಾಲಾ ಮಕ್ಕಳಿಂದ ಕನ್ನಡ ಕಲರವ ಮತ್ತು ಡಾ,ಪುನೀತ್ ರಾಜಕುಮಾರ್ ಅವರ ನುಡಿನಮನ…!!!

Listen to this article

ಕಾನಹೊಸಹಳ್ಳಿಸೋಫಿಯಾ ಶಾಲಾ ಮಕ್ಕಳಿಂದ ಕನ್ನಡ ಕಲರವ ಮತ್ತು ಡಾ,ಪುನೀತ್ ರಾಜಕುಮಾರ್ ಅವರ ನುಡಿನಮನ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಾ ಹೊಸಹಳ್ಳಿ ಹೋಬಳಿಯಕಾನಹೊಸಹಳ್ಳಿ ಸೋಫಿಯಾ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಮಕ್ಕಳ
ದಿನಾಚರಣೆ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜಕುಮಾರ್ ರವರ ನಮನ ಕಾರ್ಯಕ್ರಮ ಜರಗಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಹಾಗೂ ಸಂಸ್ಥೆಯ ಕಾರ್ಯದರ್ಶಿ. ಕೆ ಎಂ. ವೀರೇಶ್ ಉದ್ಘಾಟನೆ ಮಾಡಿ ಮಾತನಾಡಿ ಮೊದಲನೆಯದಾಗಿ ಪುನೀತ್ ರಾಜಕುಮಾರ್ ಅವರ ಬಗ್ಗೆ ಮಾತನಾಡಿ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಚಿತ್ರರಂಗ ಹಾಗೂ ಕರ್ನಾಟಕದ ಜನತೆಗೆ ತುಂಬಲಾರದ ನಷ್ಟ. ಸಮಾಜದಲ್ಲಿ ಯಾರಿಗೂ ಗೊತ್ತಾಗದಂತೆ, ತೆರೆಯ ಮರೆಯಲ್ಲಿ ಅವರು ಮಾಡಿದ್ದ ಸೇವೆಗಳು, ಸಾರ್ವಜನಿಕರೊಂದಿಗೆ ಅವರ ನಡೆದುಕೊಳ್ಳುತ್ತಿದ್ದ ಸರಳತೆ ಹಿರಿಯರಿಗೆ ಕೊಡುತ್ತಿದ್ದ ಗೌರವವನ್ನು ನೆನೆಸಿಕೊಂಡರೆ ಇಂತಹ ಒಬ್ಬ ಮಗನನ್ನು ಪಡೆದ ಅವರ ತಂದೆ-ತಾಯಿಗಳು ಭಾಗ್ಯವಂತರು,ಪುನೀತ್ ರಾಜಕುಮಾರ್ ರವರಂತ ಮಗ ಈ ಕರ್ನಾಟಕದಲ್ಲಿ ಮತ್ತೊಮ್ಮೆ ಹುಟ್ಟಿ ಬರಲಿ, ಅವರ ತತ್ವ ಆದರ್ಶ ಸಿದ್ದಾಂತಗಳನ್ನು ಪ್ರತಿಯೊಬ್ಬ ನಾಗರಿಕರು ಪಾಲಿಸಿರಿ ಅವರ ಗುಣಗಳನ್ನು ಅಳವಡಿಸಿಕೊಳ್ಳರಿ ಎಂದು ಹೇಳಿದರು.
ಶಾಲಾ ಮಕ್ಕಳಿಂದ ಹೊಸಹಳ್ಳಿ ಪ್ರಮುಖ ಬೀದಿಗಳಲ್ಲಿ ದೇಸಿ ಸಂಸ್ಕೃತಿಯ ಸೊಗಡು ಹಾಗೂ ಹಳ್ಳಿಯ ಸಂಸ್ಕೃತಿಯನ್ನು ಬೀರುವಂತಹ ವೇಷಭೂಷಣ, ಕುವೆಂಪು ಬೇಂದ್ರೆ,ಅಕ್ಕಮಹಾದೇವಿ. ಕಿತ್ತೂರು ರಾಣಿ ಚೆನ್ನಮ್ಮ. ಸುಭಾಷ್ ಚಂದ್ರ ಬೋಸ್.ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಮಹಾನ್ ವ್ಯಕ್ತಿಗಳ ವೇಷಭೂಷಣಗಳನ್ನು ಧರಿಸಿದ್ದರು, ಕನ್ನಡ ಹಾಡಿಗೆ ಶಾಲಾ ಮಕ್ಕಳು ಹಾಗೂ ಕೆಲವು ಶಿಕ್ಷಕರು ಹೆಜ್ಜೆ ಹಾಕಿದರು,
ಇದೇ ಸಂದರ್ಭದಲ್ಲಿ ಮುಖ್ಯಶಿಕ್ಷಕ ವಿಶ್ವನಾಥ,ಸೋಫಿಯಾ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಕೆ ಆರ್ ಚಂದ್ರಶೇಖರ್, ಸಹ ಶಿಕ್ಷಕರಾದ ಜಲಜಾಕ್ಷಿ ಸೀತಾರಾಮ ರೆಡ್ಡಿ, ಸಿದ್ದಪ್ಪ ನಾಗರಾಜ,, ಮಾಧವಿ, ಸವಿತ,, ಚನ್ನಬಸವಣ್ಣ.ನಿರ್ಮಲ,ಸುಧಾರಾಣಿ, ರಶೀದಾ ಬೇಗಮ್,ಅಕ್ಕಮಹಾದೇವಿ,, ಕಾಟ ಲಿಂಗಪ್ಪ, ಸಿದ್ದಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶಿವಣ್ಣ ಹಾಗೂ ಮಲ್ಲಿಕಾರ್ಜುನ ಸಿಬ್ಬಂದಿ ವರ್ಗ, ಕಾನಹೊಸಹಳ್ಳಿ ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಎಳೆನೀರು ಮಂಜುನಾಥಸ್ವಾಮಿ,ಹುಲಿಕೆರೆ ರಮೇಶ್ ಗೌಡ, ಶಾಲೆಯ ಅಡುಗೆ ಸಿಬ್ಬಂದಿ ವರ್ಗ ಮತ್ತು ವಾಹನ ಚಾಲಕರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು..

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend