ಕಂಪ್ಲಿಯ ಜನಪ್ರಿಯ ಶಾಸಕರಿಂದ ಮಿನಿ ವಿಧಾನಸೌಧಕ್ಕೆ ಶಂಕು ಸ್ಥಾಪನೆ…!!!

Listen to this article

ಮಾನ್ಯ ಶ್ರೀ ಜೆ. ಎನ್ ಗಣೇಶ್ ಶಾಸಕರು ಕಂಪ್ಲಿ ವಿಧಾನಸಭಾ ಕ್ಷೇತ್ರ

ಕುರುಗೋಡುನಲ್ಲಿ ಶ್ರೀ ಶ್ರೀ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನ ಆಶೀರ್ವಾದ ಪಡೆದು ದೇವಸ್ಥಾನದಿಂದ ಮೆರವಣಿಗೆ ಮೂಲಕ ವಿಜೃಂಭಣೆಯಿಂದ ನಡೆದ ಶಾಸಕರ ಬಹುದಿನದ ಕನಸು ಐತಿಹಾಸಿಕ ಪ್ರಸಿದ್ದ ಕುರುಗೋಡುನಲ್ಲಿ “ಮಿನಿ ವಿಧಾನಸೌಧ ” ಶಂಕುಸ್ಥಾಪನೆ ಸಮಾರಂಭವನ್ನು ನೆರೆವೇರಿಸಿದ ಕ್ಷೇತ್ರದ ಜನಪ್ರಿಯ ಯುವ ನಾಯಕ ಅಭಿವೃದ್ಧಿ ಹರಿಕಾರ ರೈತರ ಮಗ ಸನ್ಮಾನ್ಯ ಶ್ರೀ ಜೆ.ಎನ್.ಗಣೇಶ್ ಶಾಸಕರು.

*ಕುರುಗೋಡುನಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಒಂದೇ ಸೂರಿನಡಿಯಲ್ಲಿ ವಿವಿಧ ಇಲಾಖೆಗಳ ಕಚೇರಿಗಳು ತೆರೆಯಬೇಕು ಎಂಬ ಕನಸಿನಿಂದ ಮಿನಿ ವಿಧಾನಸೌಧ ಭೂಮಿ ಪೂಜೆ ಮಾಡಲಾಗಿದೆ 2021_22 ಸಾಲಿನ ಕಂದಾಯ ಇಲಾಖೆ ಅನುದಾನದ ಅಡಿಯಲ್ಲಿ ಸುಮಾರು 10 ಕೋಟಿ ರೂಪಾಯಿ ಹಾಗೂ ಜಿಲ್ಲಾ ಖನಿಜ ನಿಧಿ ಅಡಿ 5 ಕೋಟಿ ರೂಪಾಯಿ ಒಟ್ಟು 15 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧದ ಭೂಮಿ ಪೂಜೆ ನೆರೇವೇರಿಸಲಾಯಿತು ಕಂಪ್ಲಿ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷಬೇಧ ಮರೆತು ಎಲ್ಲರೂ ಸಹಕರಿಸಿ ಹಾಗೂ ಕುರುಗೋಡು ಕ್ಷೇತ್ರ ಅಭಿವೃದ್ಧಿ ಮಾಡುವುದೇ ನನ್ನ ಮುಖ್ಯ ಗುರಿ ಎಂದು ಹೇಳಿದರು ಕರ್ನಾಟಕ ಗೃಹ ಮಂಡಳಿ ಏಜೆನ್ಸಿ ಮೂಲಕ ನಿರ್ಮಾಣದ ಜವಾಬ್ದಾರಿ ನೀಡಲಾಗಿದೆ ಈ ಕಾರ್ಯಕ್ರಮದಲ್ಲಿ ಕುರುಗೋಡು ತಾಲೂಕು ತಹಸೀಲ್ದಾರ ಮಾನ್ಯ ಶ್ರೀ ರಾಘವೇಂದ್ರ ಸಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾನ್ಯ ಶ್ರೀ ಬಸಪ್ಪ ಸರ್ ಅವರು ತಾಲೂಕು ಹೋರಾಟ ಸಮಿತಿ ಅಧ್ಯಕ್ಷರು ಸದಸ್ಯರು ಪುರಸಭೆ ಅಧಿಕಾರಿಗಳು ಪರಶುರಾಮ್ ಪುರಸಭೆ ಮಾಜಿ ಸದಸ್ಯರು, ಗೃಹಮಂಡಳಿ ಇ. ಇ ಎಇಇ ರವರು, ತಾಲೂಕು ವ್ಯಾಪ್ತಿಯ ಕುರುಗೊಡು ಬ್ಲಾಕ್ ಅಧ್ಯಕ್ಷರು ಕಂಪ್ಲಿ ಬ್ಲಾಕ್ ಅಧ್ಯಕ್ಷರು ಕಂಪ್ಲಿ ಮಹಿಳಾ ಬ್ಲಾಕ್ ಅಧ್ಯಕ್ಷರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು, ತಾಲೂಕು ಪಂಚಾಯತ್ ಮಾಜಿ ಸದಸ್ಯರು, ಗ್ರಾಮಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಮಾಜಿ ಸದಸ್ಯರು ಮಾಜಿ ಅಧ್ಯಕ್ಷರು ಮತ್ತು ಪುರಸಭೆ ಸದಸ್ಯರುಗಳು, ಕನ್ನಡ ಪರ ಸಂಘ ಸಂಸ್ಥೆಗಳು, ಎಲ್ಲಾ ಸಮುದಾಯದ ಮುಖಂಡರು ರೈತ ಸಂಘದ ಪ್ರತಿನಿಧಿಗಳು, ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು…

ವರದಿ. ಮಸ್ತಾನ್ ಕಂಪ್ಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend