ಹಿಟ್ ಅಂಡ್ ರನ್’ ಪ್ರಕರಣ, ಮಗು ಸಾವು. ಚಾಲಕನ್ನು ಪತ್ತೆಹಚ್ಚಿದ ಪೋಲಿಸರು…!!!!

Listen to this article

‘ಹಿಟ್ ಅಂಡ್ ರನ್’ ಪ್ರಕರಣ, ಮಗು ಸಾವು. ಚಾಲಕನ್ನು ಪತ್ತೆಹಚ್ಚಿದ ಪೋಲಿಸರು.

ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದ ಇಟ್ಟಿಗಿಯಿಂದ ಹರಪನಹಳ್ಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಹೋಂಡಾ ಕ್ರಿಯೇಟಾ KA17 MA1807 ನಂಬರ್ ನ ಕಾರ್ ಇಟ್ಟಿಗಿ ಪೋಲಿಸ್ ಠಾಣೆಯ ವ್ಯಾಪ್ತಿಯ ಹರಪನಹಳ್ಳಿ ರಸ್ತೆಯಲ್ಲಿ(ಊರ ಹೊರ ವಲಯ) ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಸವಾರ ಬಸಪ್ಪ ಹಕ್ಕಂಡಿ ನಿವಾಸಿ ಅವರ ಮಗನಿಗೆ ಅತೀ ವೇಗ& ಅಜಾಗರೂಕತೆಯಿಂದ ವಾಹನವನ್ನು ಚಲಿಸಿ ಡಿಕ್ಕಿ ಹೊಡೆದು ಹೊಗಿದ್ದು ,ಅಪಘಾತದ ರಭಸಕ್ಕೆ ತೀವ್ರವಾದ ರಕ್ತಸಾವದಿಂದ ಮಗು ಪ್ರಾಣ ಕಳೆದುಕೊಂಡಿರುತ್ತದೆ.ಸದರಿ ಪ್ರಕರಣವನ್ನು ದಾಖಲಿಸಿದಕೊಂಡು ವಾಹನ ಚಾಲಕನ ಬೆನ್ನತ್ತಿದ ಇಟ್ಟಿಗಿ ಪೋಲಿಸ್ ಠಾಣೆಯ PSI ಶ್ರೀಯುತ ವೀರೇಶ್ ಮಾಳಶೆಟ್ಟಿ ಸರ್ ಹಾಗೂ G ದುರ್ಗಪ್ಪ,ರಮೇಶ್ ಪತ್ರಿ ಪೋಲಿಸ್ ಪೇದೆ ಅವರ ತಂಡ ಸತತ ಇಪ್ಪತ್ತು ದಿನಗಳ ಕಾಲ ಕಾರ್ಯಾಚರಣೆ ಮಾಡಿ. ಅಪಘಾತ ಮಾಡಿದ ಕಾರ್ ಚಾಲಕನನ್ನು ದಾವಣಗೇರಿಯಲ್ಲಿ ಪತ್ತೆಹಚ್ಚಿ ಪೋಲೀಸರು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡ್ತಾ ಇದ್ದಾರೆ.ಇರುವ ಒಬ್ಬ ಕರುಳ ಕುಡಿಯನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲ ಮುಟ್ಟಿದೆ.

 

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend