ರಸ್ತೆ ಗುಂಡಿಮಯ ಸಂಚಾರ ಅಯೋಮಯ…!!!

Listen to this article

ರಸ್ತೆ ಗುಂಡಿಮಯ ಸಂಚಾರ ಅಯೋಮಯ. ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿಯಿಂದ ಹರಪನಹಳ್ಳಿ ಗೆ ಹೋಗುವ ಮತ್ತು ಇಟ್ಟಿಗಿಯಿಂದ ಹೂವಿನ ಹಡಗಲಿ ತಾಲೂಕಿಗೆ ಸಂಪರ್ಕ ಕಲ್ಪಿಸುವ ಊರಿನ ಮಧ್ಯ ಭಾಗದಲ್ಲಿ ರಸ್ತೆಗಳಲ್ಲಿ ಗುಂಡಿಗಳು ಉದ್ಬವಿಸಿದ್ದು ಮಳೆಗಾಲದ ದಿನಗಳಲ್ಲಿ ನಿತ್ಯ ಪ್ರಯಾಣಿಕರು ಹೈರಾಣಾಗಿ ಹೋಗುವುದಲ್ಲದೆ ಅಧಿಕಾರಿಗಳಿಗೆ ಶಾಪ ಹಾಕುತ್ತ ಓಡಾಡುವುದು ಸಾಮಾನ್ಯವಾಗಿದೆ. ನಿತ್ಯವೂ ಮಳೆ ಸುರಿವುವತಂಹ ಪ್ರದೇಶಗಳಲ್ಲೆ ಹಾಳಾಗದ ರಸ್ತೆಗಳು ನಮ್ಮಂತಹ ಅತಿ ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಅದು ಹೇಗೆ ಅಷ್ಟು ಬೇಗ ಹಾಳಾಗುತ್ತವೆ?ಇದು ಎಂತಹ ಕಾಮಗಾರಿ ಎನ್ನುವುದು ಕೆಲವರ ಅಭಿಪ್ರಾಯ.

ಸದ್ಯ ವಾಯುಭಾರ ಕುಸಿತದಿಂದಾಗಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆಯಲ್ಲಿನ ಗುಂಡಿಗಳು ತುಂಬಿ ಅಪಾಯಕ್ಕೆ ಅಹ್ವಾನ ನೀಡುವಂತಿವೆ.ಇದರಿಂದ ಸಾರ್ವಜನಿಕರು ಮತ್ತು ಶಾಲಾ ವಿದ್ಯಾರ್ಥಿಗಳಿಗೆ ರಸ್ತೆ ಯಲ್ಲಿನ ನೀರು ರಭಸವಾಗಿ ದೊಡ್ಡ ಗಾತ್ರದ ವಾಹನಗಳು ಹರಿದಾಗ ನಮಗೆ ಎರಚುತ್ತವೆ ಎನ್ನುವ ಭಯದಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಇಷ್ಷೆಲ್ಲ ಸಮಸ್ಯೆ ಇರೋದೊ ಊರ ಹೊರಗಲ್ಲ ಊರಿನ ಸರ್ಕಲ್,ಹಡಗಲಿ ರಸ್ತೆಯ ಕೆನರಾ ಬ್ಯಾಂಕ್ ಶಾಖೆ(ಸಿಂಡಿಕೇಟ್ ಬ್ಯಾಂಕ್) ಹತ್ತಿರ ಹಾಗೂ ಪೋಲಿಸ್ ಠಾಣೆಯ ಹತ್ತಿರ ಹೊಸಪೇಟೆ ರಸ್ತೆಯಲ್ಲಿ.ಆದಷ್ಟು ಬೇಗ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ವಲೆಂದು ನಮ್ಮ ಪತ್ರಿಕೆಯ ಆಶಯ.

ವರದಿ -ಪ್ರಕಾಶ್ ಆಚಾರ್ ಇಟ್ಟಿಗಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend