ಇಟ್ಟಿಗಿ ಗ್ರಾಮ ಪಂಚಾಯತಿವತಿಯಿಂದ ಗೋಕಟ್ಟೆಯಲ್ಲಿ ಹೂಳೆತ್ತುವ ಕಾಮಗಾರಿ….!!!

Listen to this article

ಇಟ್ಟಿಗಿ ಗ್ರಾಮ ಪಂಚಾಯತಿವತಿಯಿಂದ ಗೋಕಟ್ಟೆಯಲ್ಲಿ ಹೂಳೆತ್ತುವ ಕಾಮಗಾರಿ.

ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮ ಪಂಚಾಯತಿವತಿಯಿಂದ ದಿನಾಂಕ- 26/06/2022ರಂದು ಇಟ್ಟಿಗಿ ಗ್ರಾಮದ ಬತ್ತಿಹಳ್ಳದ ಗೋಕಟ್ಟೆಯಲ್ಲಿ ಹೂಳೆತ್ತುವ ಕಾಮಗಾರಿ & ಇಟ್ಟಿಗಿ ಗ್ರಾಮದ ಅಂಗಡಿ ಶಿವಪ್ಪ ಮಾಸ್ತರನ ಚೆಕ್ ಡ್ಯಾಮ್ ಉತ್ತರ, ಪಶ್ಚಿಮ &ದಕ್ಷಿಣ ಭಾಗದಲ್ಲಿ ಹೂಳೆತ್ತುವ ಕಾಮಗಾರಿಗಳ 7ದಿನದ ಅಳತೆ ಮತ್ತು ಹಾಜರಾತಿ ಹಾಗೂ ರೋಜಗಾರ್ ದಿವಸ್ ಆಚರಣೆ ಮಾಡಲಾಯಿತು…. ಸ್ಥಳದಲ್ಲಿ ಇಟ್ಟಿಗಿ ಗ್ರಾಮ ಪಂಚಾಯತಿ ಕ್ಲಕ್೯ ಕಂ ಡಾಟಾ ಎಂಟ್ರ ಆಪರೇಟರ್ ಆದ ಪ್ರಕಾಶ್ ಅವರು ಕೂಲಿ ಕಾರ್ಮಿಕರಿಗೆ ಕಾಮಗಾರಿ ಮತ್ತು NMMS ಹಾಜರಾತಿ ಬಗ್ಗೆ ಮಾಹಿತಿಯೊಂದಿಗೆ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ, ಉದ್ಯೋಗ ಅವಕಾಶಗಳ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿಸುವ, ದೈಹಿಕವಾಗಿ ದುರ್ಬಲರಾದವರ ಅಗತ್ಯತೆಗಳಿಗೆ ಸ್ಪಂದಿಸುವ, ಹೊಸ ಕುಟುಂಬಗಳ ವಯಸ್ಕ ಸದಸ್ಯರ ಉದ್ಯೋಗ ಚೀಟಿಗಾಗಿ ಹೆಸರು ನೋಂದಾಯಿಸಿಕೊಳ್ಳಲು ಅನುವು ಮಾಡಿಕೊಡುವ, ಕೆಲಸಕ್ಕಾಗಿ ಅರ್ಜಿ ಸ್ವೀಕರಿಸುವ ಮತ್ತು ಸ್ವೀಕೃತಿ ನೀಡುವ, ಕುಂದು ಕೊರತೆ ದೂರು ದಾಖಲಿಸಿಕೊಂಡು ಸಂಬಂಧಿಸಿದ ಪ್ರಾಧಿಕಾರಿಗಳಿಗೆ ನೀಡುವ, ಕೂಲಿ ಹಣ ಸಂದಾಯ ಮಾಡುವ ಕುರಿತು ಚರ್ಚೆ, ನಿರ್ಧಾರ, ಹಣ ಸಂದಾಯ ಬಾಕಿ ಇತ್ಯರ್ಥಪಡಿಸುವ ಪ್ರಮುಖ ಉದ್ದೇಶ ರೋಜಗಾರ್‌ ದಿವಸ್‌ ಕಾರ್ಯಕ್ರಮ ಹೊಂದಿರುತ್ತದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಟಿ ಎ ಜ್ಯೋತಿ ಮೇಡಮ್ ಕಾಯಕಮಿತ್ರಾರಾದ ಶಾಂತಮ್ಮ ರಾಯಭಾರಿ ಟಿಪ್ಪುಸುಲ್ತಾನ್ ಬಿ ಎಫ್ ಟಿ ರೇಣುಕೇಶ್ ಹಾಗೂ ಇಟ್ಟಿಗಿ ಯ ಕೂಲಿ ಕಾರ್ಮಿಕರು ಇದ್ದರು. ಇಂತಹ ಯೋಜನೆಗಳಿಂದ ಗೋಕಟ್ಟೆಗಳಲ್ಲಿ ಮಳೆಕಾಲದ ನೀರು ಪೋಲಾಗದೆ ಸಂಗ್ರಹವಾಗಿ ದನ-ಕರು,ಕುರಿ-ಮೇಕೆ,ಪಕ್ಷಿಗಳಿಗೆ ಕುಡಿಯಲು ದೊರೆಯುವಂತಾಗಲು ವರುಣನ ಕೃಪೆಯಾಗಲೆಂದು ನಮ್ಮ ಪತ್ರಿಕೆಯ ಆಶಯ.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend