“ಜಾಗೃತಿಯ ಹಬ್ಬವೇ ಜಾಗರಣೆ”

Listen to this article

“ಜಾಗೃತಿಯ ಹಬ್ಬವೇ ಜಾಗರಣೆ”

ವೃಷಾರೂಢಾಯ ಭೀಮಾಯ
ವ್ಯಾಘ್ರಚಮಾ೯ಂಬರಾಯಚ|
ಪಶೂನಾಂ ಪತಯೇ ತುಭ್ಯಂ
ಗೌರೀಕಾಂತಯ ಮಂಗಲಂ||

ನಮ್ಮ ಸನಾತನ ಪರಂಪರೆಯಲ್ಲಿ ಅನೇಕ ಹಬ್ಬ ಆಚರಣೆಗಳನ್ನು ಮಾಡುತ್ತೇವೆ .ಅದರ ಹಿನ್ನೆಲೆಯನ್ನು ಅರಿತು ಮಾಡುವುದರಿಂದ ಆಚರಣೆಯ ಮಹತ್ವ ಹೆಚ್ಚುತ್ತದೆ ನಮ್ಮ ಪೂಜ್ಯರೆಲ್ಲರೂ ಆಧ್ಯಾತ್ಮಿಕ ಉನ್ನತಿಗಾಗಿ ಪಿಂಡದಿಂದ ಬ್ರಹ್ಮಾಂಡದೆಡಗೆ(ಯಥಾ ಬ್ರಹ್ಮಾಂಡ ತಥಾ ಪಿಂಡಾಂಡ) ಅರ್ಥಾರ್ಥ ಬ್ರಹ್ಮಾಂಡದಲ್ಲಿ ಅಂದರೆ ಶಿವನಲ್ಲಿ ಯಾವ ತತ್ವಗಳಿವಿಯೋ ಅವು ಪಿಂಡದಲ್ಲಿ ಅಂದರೆ ಜೀವದಲ್ಲಿ
(ನಮ್ಮಲ್ಲಿ)ಬಂದರೆ ಮಾತ್ರ ಆ ಜೀವವು ಶಿವನೊಂದಿಗೆ ಏಕರೂಪವಾಗಿ ಬಲ್ಲದು.
ಶಿವನು ನಮ್ಮಲ್ಲಿ ಜಾಗೃತನಾಗುವ ಆಚರಣೆಯನ್ನು ನಾವು ಜಾಗರಣೆಯಾಗಿ(ಜಾಗೃತಿಯಾಗಿರುವ ಹಬ್ಬವಾಗಿದೆ) ಮಾಹಾಶಿವರಾತ್ರಿಯೆಂದು ಆಚರಣೆಮಾಡುತ್ತೇವೆ.

|ರಾತ್ರಿಯೊಳ್ ಶಿವರಾತ್ರೀ ಜಾತ್ರೆಯೋಳ್ ಶ್ರೀಶೈಲ
ಕ್ಷೇತ್ರದೊಳ್ ಧಿಕ ಶ್ರೀ ಕಾಶಿ ಮಂತ್ರದೊಳ್ ಧಿಕ
ಶಿವಮಂತ್ರ ಸವ೯ಜ್ಞ||

ಕತ್ತಲರಾತ್ರಿ. ನವರಾತ್ರಿ. ಹಾಗೂ ಶಿವರಾತ್ರಿಯೂ ಎಲ್ಲಾ ರಾತ್ರಿಗಳಿಂತ ಭಿನ್ನವಾದ ಹಾಗೂದೇವರ ಸ್ಮರಣೆಗೆ ಸೂಕ್ತ ವೆನಿಸಿದ ರಾತ್ರಿಗಳಾಗಿವೆ.ಜಾತ್ರೆಯಲ್ಲಿ ಶ್ರೀಶೈಲಾದ ಜಾತ್ರೇ ಮಹತ್ವದ್ದು ಕಾಶಿಯ ಯಾತ್ರೆಯೂ ಅತ್ಯಂತ ಶ್ರೇಷ್ಠ ವಾದಂತೆ ಮಂತ್ರದಲ್ಲಿ ಶಿವಮಂತ್ರವೂ ಅಧಿಕವಾಗಿದ್ದು ಶಕ್ತಿಯುತವಾದದ್ದು ಹಾಗೂ ಸವ೯ರಿಗೂ ಸುಲಲಿತವಾದ್ದದು

ಜಪದಲ್ಲಿ ಇರುವ ಪ್ರತಿಯೊಂದು ಅಕ್ಷರದ ಆಧ್ಯಾತ್ಮಿಕ ಅಥ೯
ನ= ಸಮಸ್ತ ಜನರ ಅದಿ ದೇವರು
ಮ= ಪರಮ ಜ್ಞಾನವನ್ನು ನೀಡುವವನು ಮತ್ತು ಮಹಾ ಪಾತಕಿಗಳು ನಾವು ಮಾಡುವವನು
ಶಿ=ಕಲ್ಯಾಣಕಾರೀ.ಶಾಂತ
ವಾ=ವೃಷಭವಾಹನ
ಯು=ಪರಮಾನಂದ ರೂಪ
ಆದ್ದರಿಂದ ಈ ಐದು ಅಕ್ಷರಗಳಿಗೆ ನಮಸ್ಕಾರಗಳು

ಮಹಾಶಿವರಾತ್ರಿ ಆಚರಣೆಪದ್ದತಿ
ಉಪವಾಸ,ಪೂಜೆ,ಜಾಗರಣೆ,ಇವು ಈ ವ್ರತದ ಮೂರು ಅಂಗಗಳಾಗಿವೆ
ವಿಧಿ-ಮಾಘ ಕೃಷ್ಣ ತ್ರಯೋದಶಿ ತಂದು ಏಕಭಕ್ತಿಯಿಂದ ಕೂಡಿ ಒಂದು ಹೊತ್ತು ಊಟಮಾಡುವುದು ಅಂದರೆ ಚತುದ೯ಶಿಯಂದು ಬೆಳಿಗ್ಗೆ ವ್ರತದ ಸಂಕಲ್ಪವನ್ನು ಮಾಡಿ ಸಾಯಂಕಾಲ ಸ್ನಾನಮಾಡಿ ಭಸ್ಮಧರಿಸಿ ರುದ್ರಾಕ್ಷಿ ಧರಿಸಬೇಕು

ರುದ್ರಾಕ್ಷಿ ಭಸಿತವಪೊಂದಿರಲು
ದೇಹದೊಳಗಿದ್ದ ಪಾಪಗಳೆಲ್ಲ ಬಯಲಾಗಿ
ಶಿವತಾನಿದ್ದಲ್ಲಿಗೆ ಬರುವ ಸವ೯ಜ್ಞ|
ಎಂಬ ಸವ೯ಜ್ಞರ ವಚನದಂತೆ ಶಿವ ಕಳೆ ವಿಭೂತಿ ರುದ್ರಾಕ್ಷಿ ಬಿಲ್ವಪತ್ರಿ ತುಂಬಾ ಮುಖ್ಯವಾಗಿ ಬೇಕು ಅತಿ ಮುಖ್ಯವಾಗಿ ಭಕ್ತಿಯಿಂದ ಅಚಿ೯ಸಬೇಕು “ನಮ:ಶಿವಾಯ” ಅಥವಾ ಓಂ ನಮಃ ಶಿವಾಯ ಮಂತ್ರವನ್ನು ಕನಿಷ್ಠ ೧೦೮ಸಾರೀ ಪಠಿಸಬೇಕು ಪುಷ್ಪಾಂಜಲಿ ಅಪಿ೯ಸಿ ಕ್ಷಮಾಪಣೆ ಕೋರಿ ಸ್ತೋತ್ರ ಮಾಡಬೇಕು

“ಯಾಮಪೂಜೆ”
ಶಿವರಾತ್ರಿಯಂದು ರಾತ್ರಿಯ ನಾಲ್ಕು ಪ್ರಭೇದಗಳಲ್ಲಿ ನಾಲ್ಕು ಪೂಜಿಗಳನ್ನು ಮಾಡಬೇಕೆಂಬ ವಿಧಾನವಿದೆ ಅದಕ್ಕೆ “ಯಾಮಪೂಜೆ”ಎನ್ನುತ್ತಾರೆ
ಪ್ರತಿಯೊಂದು ಯಾಮಪೂಜೆ ಯಲ್ಲಿ ಲಿಂಗಸ್ವರೂಪಿ ಸಾಕಾರ ಮೂರ್ತಿಗೆ ಅಭಿಷೇಕ ಮಾಡುವುದು,ಇಲ್ಲದೆ ಹೋದರೆ ಮನಸ್ಸಿನಲ್ಲಿ ಲಿಂಗಸ್ವರೂಪದ ಜ್ಯೋತಿಯಕಲ್ಪನೆ ಮಾಡಿಕೊಂಡು ಉಪಾಸನೆ ಮಾಡುವುದು.ಒಟ್ಟಾರೆ ಈ ನಾಲ್ಕು ಪ್ರಹರದಲ್ಲಿ ಶಿವನ ಲೀಲೆಗಳನ್ನು ಕೇಳುತ್ತಾ ನಮ್ಮೋಳಗೆ ಶಿವನ ಸ್ವರೂಪವನ್ನು ಸಾಕ್ಷತಕರಿಸಿಕೊಳ್ಳವುದಾಗಿದೆ ,ಅಧೋಮುಖವಾದ ಶಕ್ತಿಯನ್ನು ಶಿವನೊಡನೆ ಸೇರಿಸುವಂತಹ ಪವಿತ್ರವಾದಂತ ಮಾಹಾರಾತ್ರಿ ಶಿವರಾತ್ರಿಯಾಗಿದೆ .
ಇದರಿಂದ ನಾವು ಹಿಂದಣ ಜನ್ಮದ ಕಮ೯ಗಳು ಅಲ್ಲದೆ ಈಗಿನ ಕಮ೯ಗಳೆಲ್ಲವೂ ಕೆಂಡದ ಮೇಲಿಟ್ಟು ಒಣ ಹುಲ್ಲಿನಂತೆ ಭಸ್ಮವಾಗಿ ಹೋಗುತ್ತವೆ ಎಂದು ಶಿವಪುರಾಣದಲ್ಲಿ ಉಲ್ಲೇಖವಿದೆ.

ಬಿಲ್ವಪತ್ರೆ ಮಹತ್ವ

ಬಿಲ್ವಪತ್ರೆಯಿಂದ ಅಚ೯ನೆ ಮಾಡಲು ಶ್ರೀಘ್ರ ಓಲುಮೆಗೆ ಕಾರಣ ಅದು ಔಷಧಿಯ ಗುಣವಿರುವ ಬಹುಉಪಯುಕ್ತ ಸುವರ್ಣ ಪತ್ರೆಗೂ ಬಿಲ್ವಪತ್ರೆ ಮಾಡಿದ ಅಚ೯ನಿಗೂ ಸಮನಾಗಲಾರದು

ತ್ರಿದಳಂ ತ್ರಿಗುಣಾಕಾರಂ ತ್ರಿಜನ್ಮಪಾಪ ಸಂಹಾರಂ ಏಕಬಿಲ್ವಂ ಶಿವಾರ್ಪಣಂ| ಎಂದು ಬಿಲ್ವದ ಗುಣವನ್ನು ಸಾದರ ಪಡಿಸಿದ್ದಾರೆ

ಮೂಲತೋ ಬ್ರಹ್ಮ ರೂಪಯಾ ಮಧ್ಯತೋ ವಿಷ್ಣುರೂಪಾಯ ಮಧ್ಯತೋ ಶಿವರೂಪಯಾ
ಏಕಬಿಲ್ವಂ ಶಿವಾರ್ಪಣಂ ತ್ರಿದಳಗಳು ತ್ರಿಮೂರ್ತಿಗಳ ಸಾಂಕೇತಿಕ ರೂಪವಾಗಿದೆ ತ್ರಿಗುಣಗಳರೂಪವಾಗಿದೆ .ಮಾಡಿರುವ ಅನೇಕ ಪಾಪಗಳನ್ನು ದೂರವಾಗಿಸಲು ಏಕೆ ಮನಸ್ಸಿನಿಂದ ತ್ರಿಕರಣ ಶುದ್ದಿಯಿಂದ ಶಿವನಿಗೆ ಈ ದಿನ ಅಪಿ೯ಸಿದರೆ ಪಾಪವೆಲ್ಲ ಲಯವಾಗುವವುವೆಂದು ಪುರಣಾಶಾಸ್ತ್ರಗಳ ಉಲ್ಲೇಖವಿದೆ ಒಟ್ಟಾರೆ ಶಿವನ ನೆನವು ಸವ೯ರೀತಿಯಲ್ಲೂ ಲೇಸನ್ನುಂಟು ಮಾಡಿ ಮನಸ್ಸನ್ನು ಶಾಂತವಾಗಿಸುತ್ತೆ ಸಂಕಲ್ಪ ನೆರವೆರತ್ತವೆ.
ಶಂ ಕರೋತಿ ಇತಿ ಶಂಕರ: ಯಾರು ಕಲ್ಯಾಣ ಮಾಡುತ್ತಾನೋ ಅವನೆ “ಶಿವ” ಅವನನ್ನು ಧ್ಯಾನಿಸುವುದೆ ಶಿವರಾತ್ರಿ ಉದ್ದೇಶ (ಶಕ್ತಿಯನ್ನು ಶಿವನೊಡನೆ ಸೇರಿಸುವ ಮಹಾನ್ ರಾತ್ರಿಯೇ ಶಿವರಾತ್ರಿಯಾಗಿದೆ

“ಉಪವಾಸ”

ಉಪವಾಸ ವೆಂದರೆ ಹತ್ತಿರವಾಸವಾಗಿರುವುದು ಎಂದು ಅಥ೯ವಾಗುತ್ತದೆ. ದೇವರ ಹತ್ತಿರವೇ ವಾಸವಿರುವಂತದ್ದೆ ನಿಜವಾದ ಅರ್ಥದಲ್ಲಿ ಉಪವಾಸವಾಗಿರುತ್ತದೆ.ಊಟ ಏಕೆ ಮಾಡುವುದಿಲ್ಲ ವೆಂದರೆ ತಾಮಸವಾದ ಆಹಾರದಿಂದ ದೇಹದಲ್ಲಿ ಜಡತ್ವ ತುಂಬಿ ಭಗವಂತನ ಸ್ಮರಣೆಗೆ ಆಲಸ್ಯ ಮದ ಮಂದತ್ವಗಳು ಅಡ್ಡಿ ಬರಬಹುದೆಂಬ ನಿಲುವು ಇರಬಹುದು.ಒಟ್ಟಾರೆ ಶಿವನ ಸ್ಮರಣೆಯೇ ಇಲ್ಲಿ ಅತ್ಯಂತ ಮುಖ್ಯವಾಗಿ ಮಾಡಬೇಕಾಗಿರುವುದು ಇಲ್ಲಿ ನಂಬಿಕೆಯೇ ಅತ್ಯಂತ ಮುಖ್ಯವಾಗಿ ಬೇಕು ಆದ್ದರಿಂದಲೇ ಬಸವಣ್ಣನವರು ನಂಬಿಕರೆದರೆ ಓಎನ್ನನೆ ಶಿವನು?ಎಂದು ಹೇಳಿರುವರು…

ಜಿ.ಬಿ ವಿನಯ್ ರಾಜ್ ಆಚಾರ್ಯ ಶಕ್ತಿರತ್ನಂ
ಕವಿರತ್ನಚೂಡಮಣಿ ರಾಜ್ಯಪ್ರಶಸ್ತಿ ವಿಜೇತರು
ವಿಜಯನಗರ ಜಿಲ್ಲಾ ಇಟ್ಟಿಗಿ
8618182914..

ವರದಿ.ಪ್ರಕಾಶ್ ಇಟ್ಟಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend