ಶ್ರೀ ಕಲ್ಲೇಶ್ವರ ಸ್ವಾಮಿಯ ಸಹಸ್ರ ದೀಪೋತ್ಸವ ‘…!!”

Listen to this article

‘ಶ್ರೀ ಕಲ್ಲೇಶ್ವರ ಸ್ವಾಮಿಯ ಸಹಸ್ರ ದೀಪೋತ್ಸವ ‘ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷದ ಕಾರ್ತಿಕೋತ್ಸವ ದಿನಾಂಕ13-12-2021ರ ಸೋಮವಾರ ನೇರವೇರಿತು. ವಿಶೇಷ ಅಲಂಕಾರದೊಂದಿಗೆ ಗ್ರಾಮದ ಆರಾಧ್ಯದೈವವಾದ ಕಲ್ಲೇಶ್ವರ ಸ್ವಾಮಿಯು ಕಂಗೊಳಿಸುತ್ತಿದ್ದನು. ಸಂಜೆಯಾಗುತ್ತಲೆ ಭಕ್ತರು ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದು ಸಹಸ್ರದೀಪೋತ್ಸವ ಕಾರ್ಯಕ್ರಮವನ್ನು ಆರಂಭಮಾಡಿದರು. ಚಿಣ್ಣರು,ಯುವಕರು ವಿಶೇಷವಾಗಿ ಸಮೇಳ ವಾದ್ಯಗಳನ್ನು ನುಡಿಸಿ ಗಮನ ಸೆಳೆದರು. ಅಮವಾಸ್ಯೆಯೊಂದಿಗೆ ಕಾರ್ತಿಕ ಮಾಸ ಆರಂಭವಾಗುತ್ತದೆ.ಕಾರ್ತಿಕ ಮಾಸವೆಂದರೆ ಸಾಲು ಬೆಳಕಿನ ಹಬ್ಬಗಳನ್ನಾಚರಿಸುವಂತಹ ತಿಂಗಳು. ಹಣತೆಗಳ ಸಾಲು- ಸಾಲು ಬೆಳಗುವುದು ಕೂಡ ಇದೇ ತಿಂಗಳಲ್ಲಿ ಅನ್ನುವುದು ವಿಶೇಷ.

ಅಮವಾಸ್ಯೆಯ ಕತ್ತಲನ್ನು ಹೊಡೆದೋಡಿಸುವಜ್ಯೋತಿ ಅದು. ಅಂದು ಬೆಳಗಿದ ಜ್ಯೋತಿ ಮನೆ,ಮನವನ್ನು ಬೆಳಗುವುದು ಎಂಬುದು ಪ್ರತೀತಿ ಇದೆ. “ತಮಸೋಮ ಜ್ಯೋತಿರ್ಗಮಯ” ಎನ್ನುವ ನೀತಿ ವಾಕ್ಯವೂ ಇದರೊಂದಿಗೆ ಅರ್ಥಪೂರ್ಣವಾಗುತ್ತದೆ. ‘ನ ಕಾರ್ತಿಕ ಸಮೋ ಮಾಸಃ’- ಕಾರ್ತಿಕ ಮಾಸಕ್ಕೆ ಸಮನಾದ ಮಾಸ ಇನ್ನೊಂದಿಲ್ಲ.ಕಾರ್ತಿಕ ಮಾಸ ಭಗವಂತನಿಗೆ ಸುಪ್ರಭಾತದ ಕಾಲ.ಆದ್ದರಿಂದ ಆರಾಧನೆಗೆ ಶ್ರೇಷ್ಠವಾದ ಮಾಸ.ಕಾರ್ತಿಕ ಮಾಸದಲ್ಲಿ ೫೦ ಕ್ಕಿಂತ ಹೆಚ್ಚು ಹಬ್ಬಗಳಿವೆ.ಕಾರ್ತಿಕ ಸೋಮವಾರಗಳು ಶಿವ ಪೂಜೆಗೆ ಪ್ರಶಸ್ತವಾದುವುಗಳು ಎಂದು ಹೇಳಲಾಗಿದೆ. ಈ ನಂಬಿಕೆಗಳಂತೆ ಸಂಪ್ರದಾಯಗಳನ್ನು ನಾವು ನಡೆಸಿಕೊಂಡು ದೇವರ ಕೃಪೆಗೆ ಪಾತ್ರರಾಗುತ್ತ ನೆಮ್ಮದಿಯ ಜೀವನ ನಡೆಸೋಣ.

ವರದಿ-ಎ ಪ್ರಕಾಶ್ ಇಟ್ಟಿಗಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend