ಸರಕಾರಿ ಬಸ್ಸಿಗೆ ಅಕ್ರಮ ಮರಳು ಟ್ರ್ಯಾಕ್ಟರ್ ಡಿಕ್ಕಿ. ಪ್ರಯಾಣಿಕರಿಗೆ ಗಾಯ…!!!

Listen to this article

ಸರಕಾರಿ ಬಸ್ಸಿಗೆ ಅಕ್ರಮ ಮರಳು ಟ್ರ್ಯಾಕ್ಟರ್ ಡಿಕ್ಕಿ. ಪ್ರಯಾಣಿಕರಿಗೆ ಗಾಯ.

ಸಿಂಧನೂರು : ಜುಲೈ.15. ಅಕ್ರಮ ಮರಳು ತುಂಬಿಕೊಂಡು ಸಾಗಾಣಿಕೆಯ ತೊಡಗಿದ ಟ್ರ್ಯಾಕ್ಟರ್ ಎನ್.ಕೆ.ಎಸ್.ಆರ್. ಟಿ. ಸಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಹಲವಾರು ಪ್ರಯಾಣಿಕರಿಗೆ ಗಾಯಗಳಾಗಿದ್ದು ಹಾಗೂ ಟ್ರಾಕ್ಟರ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಗಾಯಗೊಂಡ ಪ್ರಯಾಣಿಕರ ಹಾಗೂ ಟ್ರಾಕ್ಟರ್ ಚಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ದೇವದುರ್ಗ ಡಿಪೋದಿಂದ ಬೆಂಗಳೂರುಗೆ ಹೊರಟಿದ್ದ ಬಸ್ ನಂಬರ್ ಕೆ.ಎ 36 ಎಫ್ 1521 ಈ ಬಸ್ಸಿಗೆ ತಾಲೂಕಿನ ಕೆಂಗಲ್ ಕ್ರಾಸ್ ಹತ್ತಿರ ಅಕ್ರಮ ಮರಳು ತುಂಬಿದ ಟ್ರಾಕ್ಟರ್ ನಿನ್ನೆ ಮಧ್ಯಾಹ್ನ 12:30ಕ್ಕೆ ಡಿಕ್ಕಿ ಹೊಡೆದಿದ್ದು ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಹಲವಾರು ಪ್ರಯಾಣಿಕರಿಗೆ ಹಲ್ಲು ಮುರಿದು ಸಣ್ಣ ಪುಟ್ಟ ಗಾಯಗಳಾಗಿದ್ದು ಟ್ರಾಕ್ಟರ್ ಚಾಲಕನ ತಲೆಗೆ ತೀವ್ರ ಪೆಟ್ಟಾಗಿ ರಕ್ತ ಸೋರುತ್ತಿತ್ತು. ಗಾಯಗೊಂಡ ಪ್ರಯಾಣಿಕರನ್ನು ಹಾಗೂ ಚಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ದಾಖಲು ಮಾಡಲಾಗಿದೆ.ಬಸ್ಸಿನ ಚಾಲಕ ಹಾಗೂ ನಿರ್ವಾಹಕರಿಗೆ ಯಾವುದೇ ಗಾಯಗಳಾಗಿಲ್ಲ.

ದೇವದುರ್ಗದಿಂದ ಬೆಂಗಳೂರುಗೆ ಹೊರಟಿದ್ದ ಬಸ್ ತಾಲೂಕಿನ ಡದೇಸೂಗುರಿನ ಹತ್ತಿರ ಕೆಂಗಲ್ ಕ್ರಾಸ್ ಬಳಿ ಕೆಂಗಲ್ ಗ್ರಾಮದಿಂದ ಅಕ್ರಮ ಮರಳು ತುಂಬಿಕೊಂಡು ಬಂದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಬಸ್ಸಿಗೆ ಡಿಕ್ಕಿ ಹೊಡೆದ ರಭಸಕ್ಕೆ ಟ್ರ್ಯಾಕ್ಟರ್ ನ ಮುಂದಿನ ಗಾಲಿಗಳು ಮುರಿದುಬಿದ್ದು ಚಾಲಕ ನೆಲಕ್ಕೆ ಬಿದ್ದು ತಲೆಗೆ ಗಾಯವಾಗಿ ತೀವ್ರ ರಕ್ತ ಸ್ರಾವವಾಗಿದೆ.

ಬಸ್ಸಿಗೆ ಟ್ರಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸುಮಾರು ಗಂಟೆಗಳ ಕಾಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಚಾರ ಬಂದಾಗಿ ವಾಹನಗಳು ಸಾಲುಗಟ್ಟಿ ನಿಂತು ಪ್ರಯಾಣಿಕರಿಗೆ ತೊಂದರೆ ಯಾಗಿದ್ದು ಕಂಡು ಬಂತು. ಸ್ಥಳಕ್ಕೆ ಸಿಂಧನೂರು ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಎನ್ ಕೆ ಎಸ್ ಆರ್ ಟಿ ಸಿ ಬಸ್ಸಿಗೆ ಅಕ್ರಮ ಮರಳು ಟ್ರಾಕ್ಟರ್ ಡಿಕ್ಕಿ ಹೊಡೆದಿದ್ದು ಪ್ರಯಾಣಿಕರಿಗೆ ಹಲ್ಲುಗಳು ಮುರಿದಿದ್ದು,ಇನ್ನೂ ಕೆಲವರಿಗೆ ತಲೆ ಹೊಡೆದಿದ್ದು ಮೇಲಾಧಿಕಾರಿಗಳ ಗಮನಕ್ಕೆ ತಂದು ಪ್ರಯಾಣಿಕರನ್ನು ಬಳ್ಳಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಬಸ್ ಚಾಲಕ ಪರುಶುರಾಮ, ನಿರ್ವಾಹಕ ಶರಣಪ್ಪ ಪತ್ರಿಕೆಗೆ ತಿಳಿಸಿದರು.

ಬಸ್ಸಿಗೆ ಟ್ರಾಕ್ಟರ್ ಡಿಕ್ಕಿ ಹೊಡೆದ ಸುದ್ದಿ ಕೇಳಿ ಸಿಂಧನೂರು ಎನ್ ಕೆ ಎಸ್ ಆರ್ ಟಿ ಸಿ ಅಧಿಕಾರಿ ಈರಣ್ಣ ಅಪಘಾತ ನಡೆದ ಸ್ಥಳಕ್ಕೆ ಬಂದು ಪರಿಶೀಲಿಸಿ ಬಸ್ಸಿನ ಮುಂದಿನ ಭಾಗ ಜಖಂಗೊಂಡು ಸಂಸ್ಥೆಗೆ ನಷ್ಟವಾಗಿದ್ದು ಸಂಸ್ಥೆ ಹಿತದೃಷ್ಟಿಯಿಂದ ಗ್ರಾಮೀಣ ಪೊಲೀಸ್ ಠಾಣೆಗೆ ಟ್ರಾಕ್ಟರ್ ಚಾಲಕ ಹಾಗೂ ಮಾಲೀಕನ ವಿರುದ್ಧ ದೂರು ನೀಡಬೇಕಾಗಿತ್ತು. ಆದರೆ ಅಪಘಾತ ನಡೆದು 24 ಗಂಟೆ ನಡೆದರೂ ಸಹ ಸಾರಿಗೆ ಅಧಿಕಾರಿಗಳು ದೂರು ನೀಡದೆ ರಾಜಕೀಯ ಒತ್ತಡಕ್ಕೆ ಮಣಿದು ಅಕ್ರಮ ಮರಳು ಮಾಲೀಕರೊಂದಿಗೆ ಶಾಮೀಲಾಗಿ ಲಂಚ ಪಡೆದು ಕೇಸ್ ಮುಚ್ಚಿ ಹಾಕಿ ಸಂಸ್ಥೆಗೆ ದ್ರೋಹ ಮಾಡುತ್ತಿದ್ದು ಸಾರಿಗೆ ಜಿಲ್ಲಾಧಿಕಾರಿ ಗಳು ಇದರ ಬಗ್ಗೆ ತನಿಖೆ ನಡೆಸಿ ಪ್ರಕರಣ ದಾಖಲಿಸಿ ಕೇಸ್ ಮುಚ್ಚಿ ಹಾಕಲು ಯತ್ನಿಸಿದ ಅಧಿಕಾರಿ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುತ್ತಾರಾ ? ಕಾದುನೋಡಬೇಕಾಗಿದೆ…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend