ಎಚ್ಚರಿಕೆ ಪತ್ರಿಕಾ ಬಳಗದ “ಟೈಮ್ಸ್ ಆಪ್ ಬಳ್ಳಾರಿ “ಪತ್ರಿಕಾ ವರದಿಗೆ ಸ್ಪಂದಿಸಿದ ಅಧಿಕಾರಿಗಳು…!!!

Listen to this article

ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಸಾರ್ವಜನಿಕ ಗ್ರಂಥಾಲಯಕ್ಕೆ ಬೇಟಿ. ಪರಿಶೀಲನೆ

ಸಿಂಧನೂರು : ಜುಲೈ 15. ನಗರದ ಪ್ರವಾಸಿ ಮಂದಿರದ ಹತ್ತಿರ ಇರುವ ಸಾರ್ವಜನಿಕ ಗ್ರಂಥಾಲಯದಲ್ಲಿ ಶುದ್ಧ ಕುಡಿಯುವ ನೀರು, ವಿದ್ಯುತ್ ಕಡಿತವಾದಾಗ ಬ್ಯಾಟರಿ ವ್ಯವಸ್ಥೆ ಇಲ್ಲದೇ ಕತ್ತಲಲ್ಲಿ ಕುಳಿತು ವಿದ್ಯಾರ್ಥಿಗಳು ಓದುತ್ತಿರುವ ವಿಷಯ ಕುರಿತು ನಮ್ಮ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು, ಸುದ್ದಿ ತಿಳಿದ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ರವರು ಗ್ರಂಥಾಲಯಕ್ಕೆ ಖುದ್ದು ಬೇಟಿ ನೀಡಿ ಪರಿಶೀಲಿಸಿ ವಿಧ್ಯಾರ್ಥಿಗಳಿಂದ ಅಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.

ಪೌರಾಯುಕ್ತರು ಬೇಟಿ ನೀಡಿದಾಗ ಗ್ರಂಥಪಾಲಕ ಇಲ್ಲದಿರುವುದನ್ನು ಗಮನಿಸಿ ಪೋನ್ ಕರೆ ಮಾಡಿ ಎಲ್ಲಿದ್ದಿರಾ ಎಂದು ಕೇಳಿದಾಗ ಟೀ ಕುಡಿಯಲು ಬಂದಿದ್ದೇನೆ ಸರ್ ಎಂದು ಓಡೋಡಿ ಬಂದರು. ಗ್ರಂಥಾಲಯದಲ್ಲಿ ಎಷ್ಟು ದಿನದಿಂದ ವಿದ್ಯುತ್ ಬ್ಯಾಟರಿ ಇಲ್ಲಾ ಎಂದು ಕೇಳಿದಾಗ ಗ್ರಂಥಪಾಲಕ ವಿಶ್ವನಾಥ ಕುಲಕರ್ಣಿ ತಡವಡಿಸಿದರು. ಸ್ಥಳದಲ್ಲಿದ್ದ ಓದುಗರು ಎರಡು ತಿಂಗಳಿನಿಂದ ಇದೇ ಸಮಸ್ಯಯಿದೆ ಎಂದು ತಿಳಿಸಿದರು. ಇಲ್ಲದಿರುವ ಬಗ್ಗೆ ನಿಮ್ಮ ಮೇಲಾದಿಕಾರಿಗಳ ಗಮನಕ್ಕೆ ತಂದು ಯಾಕೆ ಬಗೆಹರಿಸಿಲ್ಲ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ಸ್ಥಳದಲ್ಲಿಯೇ ದೂರವಾಣಿ ಕರೆ ಮೂಲಕ ಮಾತನಾಡಿದ ಅವರು ನಗರ ಸಭೆಯಿಂದ 2021-22ರ ಸಾಲಿನಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ 22,17, 788 ರೂಪಾಯಿ, 2022-23 ನೇ ಸಾಲಿನಲ್ಲಿ ಏಪ್ರಿಲ್ ನಲ್ಲಿ 4 ಲಕ್ಷ 47 ಸಾವಿರ, ಮೇ ನಲ್ಲಿ 4 ಲಕ್ಷ 90 ಸಾವಿರ, ಜೂನ್ ತಿಂಗಳಿನಲ್ಲಿ 2 ಲಕ್ಷ 37 ಸಾವಿರ ರೂಪಾಯಿ ಒಟ್ಟು 38 ಲಕ್ಷ ರೂಪಾಯಿ ಸೆಸ್ ಕಟ್ಟಿದ್ದೇವೆ ಇಷ್ಟೇಲ್ಲಾ ನೀಡಿದರೂ ಸೆಸ್ ಕಡಿಮೆಯಿದೆ ಎಂದು ಹೇಳುತ್ತೀರಾ ಎಂದು ಅಂಕಿ ಅಂಶಗಳ ಮೂಲಕ ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿಗೆ ಮಾಹಿತಿ ನೀಡಿದರು.

ನಂತರ ಪತ್ರಿಕೆಯೊಂದಿಗೆ ಮಾತನಾಡಿದ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಅವರು ಸಾರ್ವಜನಿಕ ಗ್ರಂಥಾಲಯದಲ್ಲಿ ಮೂಲ ಸೌಕರ್ಯವನ್ನು ಒದಗಿಸುವಲ್ಲಿ ನಗರಸಭೆ ನಿರ್ಲಕ್ಷ ಮಾಡುತ್ತಿದೆ ಎಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದರಿಂದ ಇಂದು ‌ಖುದ್ದಾಗಿ ಬೇಟಿ ನೀಡಿ ವಿದ್ಯುತ್ ಕುಡಿಯುವ ನೀರು, ವಿದ್ಯಾರ್ಥಿಗಳಿಗೆ ಓದುವದಕ್ಕೆ ಪುಸ್ತಕ ಇನ್ನೂ ಅನೇಕ ಮೂಲ ಸೌಕರ್ಯ ಇಲ್ಲದಿರುವುದು ಕಂಡು ಬಂದಿದೆ. ನಾನು ಈಗಲೇ ದೂರವಾಣಿ ಮೂಲಕ ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅವರು ಎರಡು ಮೂರು ದಿನಗಳಲ್ಲಿ ಖುದ್ದಾಗಿ ಭೇಟಿ ನೀಡಿ ಇಲ್ಲಿರುವ ಸಮಸ್ಯಗಳನ್ನು ಪರಿಶೀಲನೆ ಮಾಡಿ ಬಗೆಹರಿಸುತೇನೆಂದು ತಿಳಿಸಿದ್ದಾರೆ.

ವಿಶೇಷವಾಗಿ ತಾಲೂಕಿನಲ್ಲಿ ಹಲವಾರು ವಿದ್ಯಾರ್ಥಿಗಳು ಬಡತನದ ಪ್ರತಿಭೆಗಳು ಸಾರ್ವಜನಿಕ ಗ್ರಂಥಾಲಯದಲ್ಲಿ ಓದುತ್ತಿದ್ದಾರೆ. ನಗರಸಭೆಯಿಂದ ಸಾರ್ವಜನಿಕ ಗ್ರಂಥಾಲಯಕ್ಕೆ ಬರುವ ಅನುದಾನವನ್ನು ಕೋಟಿದ್ದೇವೆ. ಮುಖ್ಯ ಗ್ರಂಥಾಲಯದ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ನಗರದ ಎಲ್ಲಾ ಗ್ರಂಥಾಲಯದಲ್ಲಿ ಇನ್ನೂ ಯಾವ ಯಾವ ಸೌಲಭ್ಯಗಳು ಬೇಕು ಎಂಬುದನ್ನು ತಿಳಿದುಕೊಂಡು ಅವುಗಳನ್ನು ಸಂಪೂರ್ಣವಾಗಿ ಸರಿಪಡಿಸುವದಕ್ಕೆ ಪ್ರಯತ್ನ ಮಾಡುತೇನೆ.ಇಲ್ಲಿ ಬಡ ವಿದ್ಯಾರ್ಥಿಗಳು ಓದುವದಕ್ಕೆ ಬರುತ್ತಾರೆ ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಇನ್ನೂ ಮುಂದೆ ಹೀಗೆ ಮುಂದುವರೆದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು.

ನಾನು ಕೂಡಾ ವಿಧ್ಯಾರ್ಥಿ ಜೀವನದಲ್ಲಿ ಕೆಎಎಸ್, ಕೆ.ಎಮ್.ಎಸ್. ಸಾರ್ವಜನಿಕ ಗ್ರಂಥಾಲಯದಲ್ಲಿ ಓದಿ ಉನ್ನತ ಹುದ್ದೆಯಲ್ಲಿ ಇದ್ದೇನೆ, ನೀವುಗಳು ಕೂಡಾ ಮೊಬೈಲ್ ಬಳಕೆ ಕಡಿಮೆ ಮಾಡಿ ವಿಧ್ಯಾಭ್ಯಾಸಕ್ಕೆ ಹೆಚ್ಚು ಒತ್ತು ಕೊಟ್ಟು ಉನ್ನತ ಮಟ್ಟದಲ್ಲಿ ಬೆಳೆದು ತಾಲೂಕಿನ ಹೆತ್ತವರ ಹೆಸರು ತರುವಂತರಾಗಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend