ಕೂಡ್ಲಿಗಿ:ಗುರು ಪೂರ್ಣಿಮೆ, ಶ್ರೀಸತ್ಯನಾರಾಯಣ ಪೂಜೆ*- ವಿಜಯನಗರ ಜಿಲ್ಲೆ ಕೂಡ್ಲಿಗಿ, ಪಟ್ಟಣದಲ್ಲಿನ ಶ್ರೀವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ. ಗುರು ಪೂರ್ಣಿಮೆಯ ಅಂಗವಾಗಿ, ಶ್ರೀಸತ್ಯನಾರಾಯಣ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಬಿಲ್ವಾರ್ಚನೆ ಯನ್ನು ಆಯೋಜಿಸಲಾಗಿತ್ತು. ಶ್ರೀವೆಂಕಟೇಶ್ವರ ದೇವಸ್ಥಾನ ಸೇವಾ ಸಮಿತಿಯಿಂದ, ಹಾಗೂ ಸವಿತಾ ಸಮಾಜ ಸೆವಾ ಸಂಘದ ಪದಾಧಿಕಾರಿಗಳಿಂದ ನೆರೆವೇರಿಸಲಾಯಿತು.
ಈ ಸಂದರ್ಭದಲ್ಲಿ ಆಧ್ಯಾತ್ಮ ಚಿಂತಕ ಡಂಬರ ಭರ್ಮಣ್ಣ ಮಾತನಾಡಿದರು, ಹರ ಮುನಿದರೂ ಗುರು ಕಾಯುವ ಎಂಬ ವಾಣಿಯಂತೆ. ಈ ಪ್ರಪಂಚದಲ್ಲಿ ಗುರುವಿನ ಹಾದಿಯಲ್ಲಿ ಯಾರು ನಡೆಯುತ್ತಾರೋ ಅವರು ದೇಶದಲ್ಲಿನ ಪ್ರತಿಷ್ಠಿತ ವ್ಯಕ್ತಿಯಾಗಿ ಹೊರ ಹೊಮ್ಮುತ್ತಾರೆ ಎಂದರು. ಆರ್ಯವೈದ್ಯರು ಹಾಗೂ ಸವಿತಾ ಸಮಾಜದ ಹಿರಿಯ ಮುಖಂಡರಾದ ಶ್ರೀನಿವಾಸಲು ಮಾತನಾಡಿ, ಗುರು ಪೂರ್ಣಿಮೆ ಅನ್ನುವುದು ಒಂದು ಗುರುವನ್ನ ಅನಂತಭಾವದಿಂದ ಕಾಣುವ ಉತ್ತಮ ದಿನವಾಗಿದೆ ಎಂದರು. ಶ್ರೀ ವೆಂಕಟೇಶ್ವರ ದೇವಸ್ಥಾನದ ಸೇವಾ ಸಮಿತಿ ಹಾಗೂ ನಾಗರೀಕರು, ಸವಿತಾ ಸಮಾಜದ ಕಾರ್ಯಕರ್ತರು ಮತ್ತು ಯುವಕರು, ಪಟ್ಟಣದ ನಾಗರೀಕರು ಮತ್ತು ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಮಹಿಳೆಯರು ಮಕ್ಕಳಾದಿಯಾಗಿ, ಶ್ರೀಸತ್ಯನಾರಾಯಣ ಸ್ವಾಮಿಯ ಅಸಂಖ್ಯಾತ ಭಕ್ತರು ಭಾಗವಹಿಸಿದ್ದರು. ವಿಷೇಶ ಪೂಜೆಯನ್ನಅರ್ಚಕರು ಹಾಗೂ ಪುರೋಹಿತರು ನೆರವೇಸಿದರು…
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030