ವಿಜಯನಗರ ಜಿಲ್ಲಾ ಹಗರಿಬೊಮ್ಮನಹಳ್ಳಿ .ಪೊಲೀಸರ ಮಿಂಚಿನ ಕಾರ್ಯಾಚರಣೆ ಪಟ್ಟಣದ.ಲೋಕೋಪಯೋಗಿ ಇಲಾಖೆ ವಸತಿ ಗೃಹಗಳ ಹತ್ತಿರ ಇರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಆಟ ಆಡುತ್ತಿದ್ದ ವ.5 ವರ್ಷದ ಅಪ್ರಾಪ್ತ ಬಾಲಕನನ್ನು ಯಾರೋ ದುಷ್ಕರ್ಮಿಗಳು ದಿನಾಂಕ 3/7/22/ರಂದು ಮಧ್ಯಾಹ್ನ 1.30 ಗಂಟೆಯ ಸಮಯದಲ್ಲಿ ಅಪಹರಿಸಿಕೊಂಡು ಹೋಗಿದ್ದು ನಂತರ ಆರೋಪಿತರು ಮಗುವನ್ನು ಪೋಷಕರಿಗೆ ವಾಪಸ್ ಕೊಡಲು 15ಲಕ್ಷ ರೂಪಾಯಿಗಳ ಬೇಡಿಕೆ ಇಟ್ಟು ಕೊನೆಗೆ 3ಲಕ್ಷ ರೂಪಾಯಿಗಳ ತoದು ಕೊಡುವಂತೆ ಇಲ್ಲದಿದ್ದಲ್ಲಿ ಪಕ್ಷದಲ್ಲಿ ನಿಮ್ಮ ಮಗು ವಾಪಸ್ ಸಿಗುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆ .ಈ ಕುರಿತು ಹಗರಿ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೊಳಗಾದ ಬಾಲಕನ ಅಜ್ಜ ಈ ಕೃಷ್ಣಮೂರ್ತಿ ವಾಸ ಹಗರಿಬೊಮ್ಮನಹಳ್ಳಿ ಇವರು ಅದೇ ದಿವಸ ಸಂಜೆ 7ಗಂಟೆಗೆ ನೀಡಿದ ದೂರಿನ ಮೇರೆಗೆ ಹಬೊ,ಹಳ್ಳಿ ಠಾಣೆ ಗುನ್ನೆ ನಂ107/2022 ಕಾಲಂ 363.364 (ಎ )ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ ಪ್ರಕರಣದ ಮಾಹಿತಿ ಪೊಲೀಸ್ ಠಾಣೆಗೆ ಬಂದ ತಕ್ಷಣವೇ ಅಪಹರಣಕಾರರನ್ನು ಮತ್ತು ಮಗುವನ್ನು ಪತ್ತೆ ಮಾಡುವ ಕುರಿತು ಶ್ರೀ ಜಿ ಹರೀಶ್ ಡಿಎಸ್ಪಿ ಕೂಡ್ಲಿಗಿ ಶ್ರೀ ಟಿ ಮಂಜಣ್ಣ ಸಿಪಿಐ ಹಬ್ಬೊಹಳ್ಳಿ ಶ್ರೀಮತಿ ಸರಳಾ ಪಿ.ಎಸ ಐ ಹಬ್ಬೊ ಹಳ್ಳಿ 2)ವಸಂತ್ ಅಸೋದಿ ಸಿಪಿಐ ಕೂಡ್ಲಿಗಿ ಶ್ರೀ ನಾರಾಯಣ್ ಪಿಎಸ್ಐ ತಂಬ್ರಹಳ್ಳಿ ಮತ್ತು ಸಿಬ್ಬಂದಿ ಇವರಿಂದ ಎರಡನೆ ತಂಡ ಹಾಗೂ 3)ಶ್ರೀ ಜಯಪ್ರಕಾಶ್ ಕೆ ಪಿ ಐ ಚಿತ್ತವಾಡಗಿ ಶ್ರೀ ಹನುಮಂತಪ್ಪ ಪಿಎಸ್ಐ ಎಂ,ಎಂ,ಹಳ್ಳಿ ಸಿಬ್ಬಂದಿಯವರಾದ ಜಾವೇದ್ ಮತ್ತು ರಾಘವೇಂದ್ರ ಒಳಗೊಂಡ ಒಟ್ಟು 3 ತಂಡಗಳನ್ನು ರಚನೆ ಮಾಡಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ ಪ್ರಕರಣ ವರದಿಯಾದ ಕೇವಲ 3ಗಂಟೆಯ ಒಳಗಾಗಿ ಅಪಹರಣಕ್ಕೊಳಗಾದ ಅಪ್ರಾಪ್ತ ಬಾಲಕನನ್ನು ಮೋರಿಗೇರಿ ರಸ್ತೆ ನಿರ್ಜನ ಪ್ರದೇಶದ ಕಗ್ಗತ್ತಲಲ್ಲಿ ಅಪಹರಣಕಾರರಿಂದ ಮಗುವನ್ನು ವಶಕ್ಕೆ ಪಡೆದು ಪತ್ತೆ ಮಾಡಲಗಿರುತ್ತದೆ ಆ ಸಮಯದಲ್ಲಿ ಅಪಹರಣಕಾರರು ಕತ್ತಲಲ್ಲಿ ತಪ್ಪಿಸಿಕೊಂಡು ಪರಾರಿಯಾಗಿದ್ದರು ಅಪಹರಣಕ್ಕೊಳಗಾದ ಮಗುವನ್ನು ಸುರಕ್ಷಿತವಾಗಿ ಪೋಷಕರ ಸುಪರ್ದಿಗೆ ಒಪ್ಪಿಸಲಾಗಿರುತ್ತದೆ ಎಂದು ಮಾಹಿತಿ ತಿಳಿಸಿದರು .ತಪ್ಪಿಸಿಕೊಂಡು ಅಪಹರಣಕಾರರ ಪತ್ತೆ ಕಾರ್ಯ ಕುರಿತು ನಿರಂತರವಾಗಿ ತನಿಖೆ ಕೈಗೊಂಡ ಆರೋಪಿಗಳ ಜಾಡು ಹಿಡಿದು ಅಪಹರಣ ಮಾಡಿದ ಆರೋಪಿತರಾದ 1)ಅಲ್ಲಾಭಕ್ಷಿ ತಂದೆ ಕರೀಂ ಸಾಬ್ 25 ವರ್ಷ .ವಾಸ ಹಗರಿಬೊಮ್ಮನಹಳ್ಳಿ 2)ಚನ್ನಬಸಪ್ಪ ತಂದೆ ಸೋಮಪ್ಪ 26 ವರ್ಷ ವಾಸ ಹಲಗಾಪುರ 3) ರಮೇಶ್ ತಂದೆ ದೊಡ್ಡನಿಂಗಪ್ಪ ವರ್ಷಾ.22 ವಾಸ ಕೇಶವರಾಯನ ಬಂಡಿ 4)ಬಸವರಾಜ ತಂದೆ ನಿಂಗಪ್ಪ 22 ವರ್ಷಾ.ವಾಸ ಕೇಶವರಾಯನ ಬಂಡಿ 5)ಕೊಟ್ರೇಶ್ ತಂದೆ ಜಂಬಪ್ಪ ವರ್ಷ 23 ವಾಸ ಹಲಗಾಪುರ 6)ರವಿ ತಂದೆ ನಿಂಗಪ್ಪ 38 ವರ್ಷ ವಾಸ ಹಂಪಾಪಟ್ಟಣ . ಇವರನ್ನು ಪ್ರಕರಣ ದಾಖಲಾದ 24 ಗಂಟೆಗಳ ಒಳಗಾಗಿ ಪತ್ತೆಮಾಡಿ ಬಂಧಿಸಲಾಗಿರುತ್ತದೆ ಆರೋಪಿತರನ್ನು ವಿಚಾರಣೆಗೊಳಪಡಿಸಿದಾಗ. ಕೃತ್ಯವೆಸಗಿದ ಬಗ್ಗೆ ತಪ್ಪನ್ನು ಒಪ್ಪಿಕೊಂಡಿರುತ್ತಾರೆ ಮತ್ತು ಕೃತ್ಯವೆಸಗುವ ಕುರಿತು ಅವರು ಉಪಯೋಗಿಸಿದ ಬಗ್ಗೆ ತಪ್ಪನ್ನು ಒಪ್ಪಿಕೊಂಡಿದ್ದಾರೆ ಮತ್ತು ಕೃತ್ಯವೆಸಗುವ ಕುರಿತು ಅವರು ಉಪಯೋಗಿಸಿದ ಒಟ್ಟು 7ಮೊಬೈಲ್ ಫೋನ್ ಗಳು ಹಾಗೂ 2ದ್ವಿಚಕ್ರ ವಾಹನಗಳ ಮೋಟಾರ್ ಸೈಕಲ್ ನಂ/35 EE–7913.ಮತ್ತು ಮೋಟರ್ ಸೈಕಲ್ ನ/ಕೆಎ 35/ ಎಲ್-382ಗಳನ್ನು ವಶಕ್ಕೆ ಪಡೆದು ಕೊಂಡಿರುತ್ತಾರೆ .ಪತ್ತೆ ಕಾರ್ಯದಲ್ಲಿ ತೊಡಗಿದ ಎಲ್ಲ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಡಾ॥ ಕೆ. ಅರುಣ್ ಪೊಲೀಸ್ ಅಧೀಕ್ಷಕರು ವಿಜಯನಗರ ಜಿಲ್ಲಾ ರವರು ಪ್ರಶಂಸೆಯನ್ನು ವ್ಯಕ್ತ ಪಡಿಸಿರುತ್ತಾರೆ ಮತ್ತು ಪ್ರಕರಣದ ತನಿಖೆಯನ್ನು ಸಿಪಿಐ ಹಗರಿಬೊಮ್ಮನಹಳ್ಳಿ ರವರು ವಹಿಸಿಕೊಂಡಿರುತ್ತಾರೆ .ಎಂದು ಮಾಹಿತಿಯನ್ನು ನೀಡಿದರು…
ವರದಿ.ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030