ಪೋಲೀಸರಿಂದ ವಾಹನಗಳ ವಿಮೆ ಜನ ಮೆಚ್ಚಿಗೆ
ಸಿಂಧನೂರ : ಜುಲೈ 5 ವಾಹನ ಚಾಲಕರು ಹಾಗೂ ಅವನ ನಂಬಿದ ಕುಟುಂಬಸ್ಥರ ಹಿತದೃಷ್ಟಿಯಿಂದ ನಗರದಲ್ಲಿ ಪೊಲೀಸರು ವಾಹನಗಳನ್ನು ಹಿಡಿದು ಅವರಿಗೆ ತಿಳುವಳಿಕೆ ಹೇಳಿ ವಾಹನಗಳಿಗೆ ಇನ್ಸೂರೆನ್ಸ ಮಾಡಿಸಿ ಕಳಿಸುವ ಪೋಲೀಸರ ಕಾರ್ಯ ನಗರದ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.
ಜಿಲ್ಲಾ ಪೋಲೀಸ್ ವರಿಷ್ಠಾದಿಕಾರಿ ನಿಖೀಲ್ ಬಿ. ಮಾರ್ಗದರ್ಶನದಲ್ಲಿ ಇಂದು ನಗರದಲ್ಲಿ ಸಿಪಿಐ ಉಮೇಶ ಕಾಂಬಳೆ ನೇತೃತ್ವದಲ್ಲಿ ಪೋಲೀಸರ ತಂಡ ನಗರದಲ್ಲಿ ರಸ್ತೆಗೆ ಇಳಿದು ವಾಹನಗಳನ್ನು ತಡೆದು ವಿಮೆ ಇಲ್ಲದ ವಾಹನಗಳಿಗೆ ತಡೆದು ತಪಾಸಣೆ ಮಾಡಿ ಠಾಣೆಯಲ್ಲಿಯೇ ವಿಮೆ ಕಂಪನಿಗಳ ಅಧಿಕಾರಿಗಳು ವಿಮೆ ಹಣ ಕಟ್ಟಿಸಿ ವಾಹನವನ್ನು ಕಳಿಸಿ ಕೊಡಲಾಯಿತು.
ಎಮ್.ಸಿ.ವಾಹನಕ್ಕೆ 1000 ರೂ.ಎಲ್.ಎಂ.ಆರ್.2000 ರೂ, ಎಚ್. ಎಂ. ಆರ್ 4000 ರೂ,ಗಳ ದಂಡ ಹಾಕಲಾಗುತ್ತದೆ ದಂಡ ಬೇಡ ವೆಂದರೆ ವಾಹನಕ್ಕೆ ವಿಮೆ ಮಾಡಿಸಿ ರಸೀಧಿ ತೋರಿಸಿದರೆ ವಾಹನಗಳನ್ನು ಬಿಟ್ಟು ಕಳಿಸಿ ಕೊಡುವ ಕೆಲಸವನ್ನು ಪೋಲೀಸರು ಮಾಡುತ್ತಿದ್ದು ಪೋಲೀಸರ ಕೆಲಸವನ್ನು ಜನ ಶ್ಲಾಘನೀಯ ವ್ಯಕ್ತಪಡಿಸಿದರು.
ವಾಹನಗಳಿಗೆ ವಿಮೆ ಇಲ್ಲದಿದ್ದರೆ ಆಕಸ್ಮಿಕ ವಾಗಿ ಅಪಘಾತದ ಸಂಭವಿಸಿದಾಗ ಚಾಲಕ ಹಾಗೂ ಆತನ ನಂಬಿದ ಕುಟುಂಬಸ್ಥರಿಗೆ ಯಾವುದೆ ರೀತಿಯ ಸೌಲಭ್ಯ ಸಿಗದೆ ಕುಟುಂಬಸ್ಥರು ಜೀವನ ಪೂರ್ತಿ ಕಣ್ಣಿರಿನಲ್ಲಿ ಕೈಯಿ ತೊಳೆಯಬೇಕಾಗುತ್ತೆ ಚಾಲಕ ಹಾಗು ಆತನ ನಂಬಿದ ಕುಟುಂಬಸ್ಥರ ಹಿತದೃಷ್ಟಿಯಿಂದ ವಾಹನಗಳನ್ನು ಇಡಿದು ತಪಾಸಣೆ ಮಾಡಿ ವಿಮೆ ಕಂಪನಿಗಳ ಎಜೆಂಟರನ್ನು ಕರೆಯಿಸಿ ಮಾನವೀಯ ಕೆಲಸ ಮಾಡಲಾಗುತ್ತದೆ, ಇದಕ್ಕೆ ವಾಹನ ಸವಾರರು ಹಾಗೂ ಸಾರ್ವಜನಿಕರು ಪೋಲೀಸರ ಜೋತೆ ಕೈಗೂಡಿಸಬೇಕು ಎಂದು ಸಿಪಿಐ ಉಮೇಶ ಕಾಂಬಳೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸಂಚಾರಿ ಪೋಲೀಸ್ ಠಾಣೆಯ ಪಿಎಸ್ಐ ಬಸವರಾಜ ಸೇರಿದಂತೆ ಇತರ ಪೋಲೀಸ ಸಿಬ್ಬಂದಿಗಳು ವಿಮೆ ಮಾಡಿಸುವ ಕಾರ್ಯದಲ್ಲಿ ಹಾಜರಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030