ಕಾರು ಡಿಕ್ಕಿಯಾಗಿ ಆಂಜನೇಯಸ್ವಾಮಿ ದೇಗುಲಕ್ಕೆ ಹಾನಿ…

Listen to this article

ವರದಿ. ಸುರೇಶ್ ಹೊಳಲ್ಕೆರೆ

ಕಾರು ಡಿಕ್ಕಿಯಾಗಿ ಆಂಜನೇಯಸ್ವಾಮಿ ದೇಗುಲಕ್ಕೆ ಹಾನಿ

ಚಾಲಕನ ನಿಯಂತ್ರಣ ತಪ್ಪಿ ಕಾರು ಡಿಕ್ಕಿಯಾಗಿ ಆಂಜನೇಯಸ್ವಾಮಿ ದೇಗುಲಕ್ಕೆ ಹಾನಿಯಾಗಿರುವಂತಹ ಘಟನೆ ಪಟ್ಟಣದ ಹೊರ ವಲಯ ರಾಷ್ಟ್ರೀಯ ಹೆದ್ದಾರಿ -೧೩ರ ಕಣಿವೆಯಲ್ಲಿ ನಡೆದಿದೆ. ಇನ್ನು ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಎಂದು ತಿಳಿದು ಬಂದಿದೆ.
ಕಾರಿನಲ್ಲಿದ್ದ ನಾಲ್ವರು ವ್ಯಕ್ತಿಗಳು ಕಲ್ಬುರ್ಗಿ ಜಿಲ್ಲೆಯವರಾಗಿದ್ದು, ಶಹಪುರದಿಂದ ಹೊರನಾಡುಗೆ ಪ್ರವಾಸ ಹೊರಟಿದ್ದರು. ಚಿತ್ರದುರ್ಗ ಕಡೆಯಿಂದ ಬರುತ್ತಿದ್ದ ಕಾರು ಕಣಿವೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಆಂಜನೇಯ ಸ್ವಾಮಿ ದೇಗುಲಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ದೇವಸ್ಥಾನದ ಎಡ ಭಾಗದ ಗೋಡೆ ಸಂಪೂರ್ಣ ಬಿದ್ದುವಹೋಗಿದೆ ತಕ್ಷಣ ಸ್ಥಳಕ್ಕೆ ಆಗಮಿಸಿದ ವಿಎಚ್‌ಪಿ ಕಾರ್ಯರ್ತರು ಹಾಗೂ ಹೊಯ್ಸಳ ಸಂಘಟನೆ ಸದಸ್ಯರು ಅಪಘಾತದಲ್ಲಿ ಗಾಬರಿಗೊಂಡಿದ್ದ ನಾಲ್ವರನ್ನು ಸಮಾಧಾನ ಪಡಿಸಿ ಬಸ್ ಮೂಲಕ ವಾಪಸ್ ಕಲ್ಬುರ್ಗಿಗೆ ಕಳುಹಿಸಿದ್ದಾರೆ. ಬಳಿಕ ದೇಗುಲವನ್ನು ಸರಿಪಡಿಸಿದ್ದಾರೆ.
ಈ ಭಾಗದ ರಸ್ತೆ ಇಳಿಜಾರಿನಿಂದ ಕೂಡಿದೆ. ರಾಷ್ಟ್ರೀಯ ಹೆದ್ದಾರಿ ಆಗಿದ್ದರು ಕೂಡ ಯಾವುದೇ ಸೂಚನ ಫಲಕಗಳನ್ನು ಹಾಕಿಲ್ಲ. ಹಾಗೂ ತಡೆಗೋಡೆಯನ್ನು ಸಹ ನಿರ್ಮಿಸಿಲ್ಲ. ಇದರಿಂದಾಗಿ ಈ ಸ್ಥಳದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಇನ್ನಾದರು ಸಹ ಸಂಬಂಧಪಟ್ಟವರು ಕ್ರಮ ತೆಗೆದುಕೊಳ್ಳಬೇಕಿದೆ ಎನ್ನುತ್ತಾರೆ ಸ್ಥಳೀಯರು.
ಈ ವೇಳೆ ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್, ಹೇಮಂತ್, ಹೊಯ್ಸಳ ಸಂಘಟನೆ ಕಾರ್ಯಕರ್ತ ಅಣ್ಣಪ್ಪ, ಶ್ರೀನಿವಾಸ್, ಗೋಪಾಲ್ ನಾಯ್ಕ್, ದಯಾ, ಚಂದ್ರಣ್ಣ, ಅಪ್ಪಿ, ಅಂಜನಿ ಇತರರು ಇದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend