ಗೂಂಡಾತರ ರೂಲ್ ಆಫ್ ಲಾ ಗಂಡಾಂತರ…!!!

Listen to this article

ಗೂಂಡಾತರ ರೂಲ್ ಆಫ್ ಲಾ ಗಂಡಾಂತರ

ಭಾರತದಲ್ಲಿ ಸಂವಿಧಾನವೇ ಸರ್ವಶ್ರೇಷ್ಠ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಕಾರ್ಯ ನಿರ್ವಹಣೆ ಸಂವಿಧಾನಾತ್ಮಕವಾಗಿರಬೇಕು. ಸಂವಿಧಾನಕ್ಕಿಂತ ಮೇಲೆ ಯಾರೂ ಇಲ್ಲ ‘ರಾಜನೇ ಕಾನೂನಲ್ಲ, ಕಾನೂನೇ ರಾಜ ‘ ಎನ್ನುವಂತೆ.

ಅದರೆ ಇತ್ತಿಚಿನ ಕೆಲವು ಬೆಳವಣಿಗೆಗಳು ‘ರೂಲ್ ಆಫ್ ಲಾ ‘ ಎಂಬ ತತ್ವಕ್ಕೆ ತದ್ವಿರುದ್ಧವಾಗಿದೆ. ದೇಶದ ಪ್ರತಿ ನಗರದಲ್ಲಿ ಕ್ರಿಮಿನಲ್ ಮಾಫಿಯಾಗಳು ಸಕ್ರೀಯ ವಾಗಿ ಕೆಲಸ ಮಾಡುತ್ತಿವೆ. ರಾಜಾರೋಷವಾಗಿ ಮಾರುಕಟ್ಟೆಯಲ್ಲಿ ತರಕಾರಿ ಮಾರಿದಂತೆ ಮಾಫಿಯಾಗಳ ರೇಟುಗಳನ್ನ ನಿಗದಿಗೊಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೂಲ್ ಆಫ್ ಲಾ ಎನ್ನುವುದು ಎಲ್ಲಿರಲು ಸಾಧ್ಯ ?

ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆ ( ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ _ N C R B) ವರದಿಯ (2018) ಪ್ರಕಾರ ಅಸ್ಪ್ಯಶ್ಯರ ಮೇಲೆ ಪ್ರತಿದಿನ ಸರಾಸರಿ 27 ದೌರ್ಜನ್ಯಗಳುನಡೆಯುತ್ತಿವೆ. ಪ್ರತಿದಿನ 5 ಮನೆಗಳು ಬೆಂಕಿಯಿಂದ ಸುಡಲಾಗುತ್ತದೆ, 3 ಮಹಿಳೆಯರ ಮೇಲೆ ಲೈಂಗಿಕ ಅತ್ಯಾಚಾರ ನಡೆಯುತ್ತಿದೆ, 11 ಜನರ ಮೇಲೆ ದೈಹಿಕ ದೌರ್ಜನ್ಯ ನಡೆಯುತ್ತದೆ. ಪ್ರತಿವಾರ 13 ಅಸ್ಪೃಶ್ಯರ ಕೊಲೆಯಾಗುತ್ತಿವೆ. ಸುಮಾರು ನೂರು ರೀತಿಯ ದೌರ್ಜನ್ಯಗಳು ಅಸ್ಪೃಶರ ಮೇಲೆ ನಡೆಯುತ್ತಿವೆ. ಎಂದು ಅಧ್ಯಯನಗಳು ತಿಳಿಸಿವೆ. ಇದರಲ್ಲಿ ಅನೇಕ ಪ್ರಕರಣಗಳು ವರದಿಯಾಗುವುದಿಲ್ಲ. ವರದಿಯಾದ ಬಹುತೇಕ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿಲ್ಲ.

ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆಯ 2018 ರ ವರದಿಯ ಪ್ರಕಾರ ಪ್ರತಿ 15 ನಿಮಿಷಕ್ಕೆ ಒಬ್ಬ ಮಹಿಳೆಯ ಮೇಲೆ ಅತ್ಯಾಚಾರವಾಗುತ್ತದೆ, 77 ನಿಮಿಷಕ್ಕೆ ಒಬ್ಬ ಮಹಿಳೆ ಹಿಂಸೆಯಿಂದ ಸಾಯುತ್ತಿದ್ದಾಳೆ. ಪ್ರತಿ 6 ಗಂಟೆಗೆ ಒಬ್ಬ ವಿವಾಹಿತ ಮಹಿಳೆಯನ್ನು ಜೀವಂತವಾಗಿ ಸುಡಲಾಗುತ್ತದೆ. ಅಥವಾ ಹೊಡೆದು ಸಾಯಿಸಲಾಗುತ್ತಿದೆ. ಅಥವಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ದುಸ್ಥತಿಗೆ ತಳ್ಳಲಾಗುತ್ತಿದೆ.
ವಿವಾಹವಾಗಿರುವ 100 ಮಹಿಳೆಯರ ಪೈಕಿ 20 ಮಹಿಳೆಯರು ಪ್ರತಿನಿತ್ಯವೂ ಗಂಡನಿಂದ ಅಥವಾ ಕುಟುಂಬದವರಿಂದ ದೈಹಿಕ ಹಲ್ಲೆಗೆ ಗುರಿಯಾಗುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಶೇಕಡಾ 96ರಷ್ಟು ಮಹಿಳಾ ಕಾರ್ಮಿಕರು ಒಂದಲ್ಲ ಒಂದು ಬಾರಿ ಅತ್ಯಾಚಾರಕ್ಕೆ ಗುರಿಯಾಗುತ್ತಿದ್ದಾರೆ. ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ಆಸಿಡ್ ದಾಳಿ, ಬಿಸಿಎಣ್ಣೆ ಎರಚುವುದು ಇತ್ಯಾದಿಗಳು ದಿನೇ ದಿನೇ ಹೆಚ್ಚುತ್ತಿವೆ. ಅನೇಕ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ.
ಸಾಮಾಜಿಕ ವಿಜ್ಞಾನ ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಕಾರ ಭಾರತದಲ್ಲಿ 45 ಸಾವಿರ ಮಕ್ಕಳ ಪ್ರತಿವರ್ಷ ಕಾಣೆಯಾಗುತ್ತಿದ್ದಾರೆ, ಆ ಪೈಕಿ 11 ಸಾವಿರ ಮಕ್ಕಳು ಮರಳಿ ಸಿಗುವುದಿಲ್ಲ. ಮಕ್ಕಳನ್ನ ಅಪಹರಿಸಿ ಭಿಕ್ಷಾಟನೆ, ವೇಶ್ಯಾವೃತ್ತಿಗೆ ನೂಕುತ್ತಿರುವ ದಂದೆಯ ಅವ್ಯಾಹತವಾಗಿ ನಡೆಯುತ್ತಿವೆ. ಇಲ್ಲಿ ಮಕ್ಕಳು ಮತ್ತು ಮಹಿಳೆಯರು ಮಾರಟದ ಸರಕಾಗಿದ್ದಾರೆ.

ಉತ್ತರ ಭಾರತದಲ್ಲಿ ಕೆಲವು ರಾಜ್ಯಗಳು ಕಾಫ್ ಪಂಚಾಯತಿಗಳು ದೇಶದ ಸಂವಿಧಾನ ಮತ್ತು ಕಾನೂನುಗಳನ್ನು ದಿಕ್ಕರಿಸಿ ಹೆಣ್ಣು ಮಕ್ಕಳ ಮೇಲೆ ಅನೇಕ ನಿರ್ಬಂಧ ಹೇರುತ್ತಿವೆ.ಸಂವಿಧಾನದ ಆಶಯಕ್ಕೆ ವಿರುದ್ಧವಾದ ಫರಮಾನ್ ಗಳನ್ನು ಹೊರಡಿಸಿ ಅನುಷ್ಠಾನಗೊಳಿಸುತ್ತಿವೆ. ಕಾಫ್ ಪಂಚಾಯತಿಯ ಯಾವುದೇ ನಿಯಮವನ್ನು ಉಲ್ಲಂಘಿಸಿದರೆ ಮರ್ಯಾದೆಯ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನ ಬಹಿರಂಗವಾಗಿ ಹತ್ಯೆ ಕೂಡ ಮಾಡಲಾಗುತ್ತಿದೆ. ಹೀಗೆ ಪರ್ಯಾಯ ಕಾನೂನುಗಳು ಮತ್ತು ಪಂಚಾಯತಿ ಎಂಬ ನ್ಯಾಯಲಯಗಳು ಇನ್ನೂ ಜೀವಂತವಾಗಿವೆ.

ಪೋಲಿಸರ ಪ್ರಮುಖ ಕೆಲಸವೆಂದರೆ ಪ್ರಜೆಗಳ ಜೀವ ರಕ್ಷಿಸುವುದು ಮತ್ತು ಅವರ ಅಸ್ತಿ ಪಾಸ್ತಿಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು. ಅದರೆ ಪೋಲೀಸ್ ಠಾಣೆಗಳಲ್ಲಿ ಚಿತ್ರಹಿಂಸೆ ನೀಡುವ ಮೂಲಕ ಜನರನ್ನ ಸಾಯಿಸುತ್ತಿರುವ ಪ್ರಕರಣಗಳು ಸುದ್ದಿಯಾಗಿವೆ. ಜೈಲುಗಳಲ್ಲಿರುವ ಕೈದಿಗಳು ಸಹ ಚಿತ್ರಹಿಂಸೆ ಹಾಗೂ ಇತರೆ ಕಾರಣಗಳಿಂದ ಸಾಯುತ್ತಿದ್ದಾರೆ. 2017 ರಲ್ಲಿ ನ್ಯಾಯಾಂಗ ಬಂಧನದಲ್ಲಿರುವ 894 ಕೈದಿಗಳು ಸತ್ತಿದ್ದಾರೆ. ಹಿಂದೆ ಉತ್ತರ ಪ್ರದೇಶದಲ್ಲಿ 1200 ಎನ್ ಕೌಂಟರ್ ಪ್ರಕರಣಗಳು ನಡೆದು 50 ಸಾವುಗಳು ಸಂಭವಿಸಿವೆ. ಬೇಲಿಯೇ ಎದ್ದು ಹೊಲವನ್ನ ಮೇಯುವಂತ ಇಂತಹ ಪರಿಸ್ಥಿತಿಯಲ್ಲಿ ಕಾನೂನು ಸುವ್ಯವಸ್ಥೆಯು ಇಲ್ಲವಾಗುತ್ತಿದೆ. ಈ ಸಂಖ್ಯೆಗಳು ವರದಿಯಾಗಿರುವ ಪ್ರಕರಣಗಳು. ಅದರೆ ಇಂತಹ ಅನೇಕ ಪ್ರಕರಣಗಳು ವರದಿಯಾಗುವುದಿಲ್ಲ ಮತ್ತು ಬೆಳಕಿಗೆ ಬರುವುದಿಲ್ಲ. ವರದಿಯಾದ ಅನೇಕ ಅಪರಾಧಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ ಎಚ್ಚರಿಕೆ.

ಅಜಯ.ಚ (ಹುಗಲೂರು)
ಹೂವಿನ ಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend