ಇಂದು ಸಂವಿಧಾನವೇ ಹಲವಾರು ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ಎದುರಾಗಿದೆ…. ಎಚ್ಚರಿಕೆ!!!

Listen to this article

ಎಚ್ಚರಿಕೆ -2
ಸವಾಲುಗಳು

ಇಂದು ಸಂವಿಧಾನವೇ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳನ್ನು ಹಿಮ್ಮೆಟ್ಟಿಸದೇ ಹೋದರೆ ನಮ್ಮ ಸಂವಿಧಾನವನ್ನು ಹಾಗೂ ಅದು ನೀಡಿರುವ ಪ್ರಜಾಪ್ರಬುತ್ವವಾದಿ ಆಡಳಿತ ವ್ಯವಸ್ಥೆಯನ್ನ ಉಳಿಸಿಕೊಳ್ಳಲು ಸಾಧ್ಯವಿಲ್ಲ.ಸಂವಿಧಾನವನ್ನು ಉಳಿಸಿಕೊಳ್ಳದಿದ್ದರೆ ಪ್ರಜಾಪ್ರಭುತ್ವ ಹೋಗಿ ಅರಾಜಕತೆ ಬರುತ್ತದೆ.ಹಾಗಾಗಿ ಇಂದು ಸಂವಿಧಾನದ ಮುಂದಿರುವ ಸವಾಲುಗಳನ್ನ ಅರಿತುಕೊಳ್ಳುವುದು ಅತ್ಯಗತ್ಯ.

ಪ್ರಜಾಪ್ರಭುತ್ವ ಕ್ಷೀಣಿಸುವಿಕೆ ಮೊದಲ ಸವಾಲು.
ಭಾರತ ಸಂವಿಧಾನವು ಪಾಳೆಗಾರಿ ಪದ್ದತಿಯನ್ನ ರದ್ದುಪಡಿಸಿ ಪ್ರಜಾಪ್ರಭುತ್ವವಾದಿ ರಾಜಕೀಯ ಮತ್ತು ಆಡಳಿತ ಮತ್ತು ಆಡಳಿತ ವ್ಯವಸ್ಥೆಯನ್ನ ಸ್ಥಾಪಿಸಲು ಅನುವು ಮಾಡಿಕೊಟ್ಟಿದೆ.ಅದರಂತೆ 1952 ರಿಂದ ಇಲ್ಲಿಯವರೆಗೆ 16 ಲೋಕಸಭೆ ಚುನಾವಣೆಗಳು ನಡೆದಿವೆ. ಮತದಾರರು ತಮಗೆ ಬೇಕಾದ ಅಭ್ಯರ್ಥಿಯನ್ನ ಅಯ್ಕೆಮಾಡಿ ಸರ್ಕಾರ ರಚಿಸುತ್ತಾ ಬಂದಿದ್ದಾರೆ.ಅದರೆ ಇಂದು ಗ್ರಾಮ ಪಂಚಾಯತಿಯಿಂದ ಹಿಡಿದು ಸಂಸತ್ತಿನವರೆಗೆ ನಡೆಯುವ ಚುನಾವಣೆಗಳು ಧರ್ಮ, ಜಾತಿ,ಹಣ,ಮತ್ತು ಅಪರಾಧಿಕರಣದಂತಹ ಅನಿಷ್ಟಗಳಿಗೆ ಬಲಿಯಾಗಿವೆ.ಹೆಚ್ಚು ಹಣ ಹೊಂದಿರುವ ಮತ್ತು ಹೆಚ್ಚು ಕ್ರಿಮಿನಲ್ ಕೇಸ್ ಘೋಷಿಸಿಕೊಂಡಿರುವ ಅಭ್ಯರ್ಥಿಗಳು ಹೆಚ್ಚು ಮತ ಪಡೆದು ಗೆಲುವು ಸಾಧಿಸುತ್ತಿದ್ದು,ನಿಷ್ಠಾವಂತರು ಠೇವಣಿ ಕಳೆದುಕೊಳ್ಳುತ್ತಿದ್ದಾರೆ. ಎಲ್ಲಾ ಸಂಸ್ಥೆ ಗಳಲ್ಲಿ ಹಣಬಲ ಮತ್ತು ಅಪರಾಧದ ಹಿನ್ನಲೆ ಇರುವವರು ಚುನಾಯಿತರಾಗುತ್ತಿರುವ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. 2004 ರ 14ನೇ ಲೋಕಸಭಾ ಚುನಾವಣೆಯಲ್ಲಿ ಕ್ರಿಮಿನಲ್ ಕೇಸ್ ಹಿನ್ನೆಲೆ ಹೊಂದಿರುವವರು 24%,ಕೋಟ್ಯಾಧಿಪತಿಗಳು 30%,ರಾಜಕೀಯ ಹಿನ್ನೆಲೆಯವರು 45%.
2009ರ 15 ನೇ ಲೋಕಸಭಾ ಚುನಾವಣೆಯಲ್ಲಿ 30%
ಕ್ರಿಮಿನಲ್ ಕೇಸ್ ,ಕೋಟ್ಯಾಧಿಪತಿಗಳು 58% ರಾಜಕೀಯ ಹಿನ್ನಲೆಯವರು 45% .
2014ರ 16ನೇ ಲೋಕಸಭಾ ಚುನಾವಣೆಯಲ್ಲಿ 34% ಕ್ರಿಮಿನಲ್ ಕೇಸ್,82% ಕೋಟ್ಯಾಧಿಪತಿಗಳು 52% ರಾಜಕೀಯ ಹಿನ್ನಲೆಯವರು ಇದ್ದದ್ದು ಅತಂಕಕಾರಿಯಾಗಿದೆ.

ಹೊಸದಾಗಿ ಮಂಡಿಸುವ ಶಾಸನಗಳು ಚರ್ಚೆಯೇ ಇಲ್ಲದೆ ಅಂಗೀಕಾರವಾಗುತ್ತಿವೆ. ಜನಸಾಮಾನ್ಯರಿಗೆ, ಸಮಾಜಕ್ಕೆ ಮತ್ತು ದೇಶಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿಲ್ಲ.

ಚುನಾವಣೆ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುತ್ತವೆ. ಎಲ್ಲರ ಪ್ರಣಾಳಿಕೆಗಳಲ್ಲೂ ಬಡವರು,ರೈತರು,ಕಾರ್ಮಿಕರು ಹಾಗೂ ಜನಸಾಮಾನ್ಯರ ಅಭಿವೃದ್ಧಿಯ ಬಗ್ಗೆ ಅಪಾರ ಭರವಸೆ ನೀಡುತ್ತಾರೆ.ಬಡತನ ನಿವಾರಣೆ,ಸಂಪೂರ್ಣ ಸಾಕ್ಷರತೆ, ಮಹಿಳೆಯರು ,ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದವರ ಕಲ್ಯಾಣ ಇತ್ಯಾದಿ, ಕೋಟಿಗಟ್ಟಲೆ ಉದ್ಯೋಗ ಸೃಷ್ಟಿ ಮತ್ತು ಎಲ್ಲರ ಕಿಸೆಗೆ ಲಕ್ಷಗಟ್ಟಲೆ ರೂಪಾಯಿ ನೀಡುತ್ತೆವೆಂದು ಹೇಳುತ್ತಾರೆ. ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ರಾಜಕೀಯ ಪಕ್ಷಗಳು ಪ್ರಣಾಳಿಕೆಗಳಲ್ಲಿ ನೀಡಿರುವ ಬಹುಪಾಲು ಅಶ್ವಾಸನೆಗಳನ್ನು ಮರೆಯುತ್ತಿವೆ. ಹೀಗಾಗಿ ಚುನಾವಣಾ ಪ್ರಣಾಳಿಕೆಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿವೆ.
ಚುನಾಯಿತ ಸದಸ್ಯರಲ್ಲಿ ಕಾನೂನು ಮತ್ತು ಸಂವಿಧಾನದ ಬಗೆಗೆ ತಿಳುವಳಿಕೆಯೂ ಇರುವುದಿಲ್ಲ.ಅವಕಾಶವಾದಿತನ, ಅನುಕೂಲಕ್ಕೆ ತಕ್ಕಂತೆ ನಿಲುವುಗಳನ್ನ ಬದಲಾಯಿಸುವುದು,ಪಕ್ಷ ಬದಲಾವಣೆ, ನೈತಿಕ ಮೌಲ್ಯಗಳನ್ನು ಬದಿಗೊತ್ತಿ ನಡೆಯುವ ಈ ಸ್ಥಾನಾಂತರಗಳು. ಇದರಿಂದ ಮತ ನೀಡಿದ ಪ್ರಜೆಗಳಿಗಾಗಲಿ,ಪ್ರಜಾಪ್ರಭುತ್ವ ವ್ಯವಸ್ಥೆಗಾಗಲಿ ಯಾವುದೇ ಪ್ರಯೋಜನ ಅಗುವುದಿಲ್ಲ. ಇವು ಪ್ರಜಾಪ್ರಭುತ್ವೀಯ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿವೆ.
ಈ ವೈಫಲ್ಯಗಳು ಹೇಗೆ ಅದವು ? ಎಲ್ಲಿ ಸೋತೆವು? ಅತ್ಯತ್ತಮ ಸಂವಿಧಾನ ಇದ್ದರೂ ಅದನ್ನು ಅರಿತು ಗೌರವಿಸುತ್ತಾ. ಅದನ್ನು ಜಾರಿಗೆ ತರುವ ಪ್ರತಿನಿಧಿಗಳು ಇಲ್ಲದಿದ್ದರೆ ಹಾಗೂ ಸಂವಿಧಾನವನ್ನು ಅನುಸರಿಸಿ ಆಡಳಿತ ನಡೆಸಿ ಎಂದು ಅದೇಶಿಸುವ ಮತದಾರರು ಇಲ್ಲದಿದ್ದರೆ ಸಂವಿಧಾನ ತನ್ನಷ್ಟಕ್ಕೆ ಏನೂ ಮಾಡಲು ಬರುವುದಿಲ್ಲ. “ಸಂವಿಧಾನ ಎಷ್ಟೇ ಉತ್ತಮವಾಗಿರಲಿ,ಅದನ್ನು ನಿರ್ವಹಿಸುವವರು ಕೆಟ್ಟವರಾಗಿದ್ದರೆ ಅದೂ ಕೆಟ್ಟದಾಗಿ ಬಿಡುವುದು ಖಂಡಿತ”
ಎಂದು ಕರಡು ಸಂವಿಧಾನವನ್ನು ಅಂಗೀಕಾರಕ್ಕೆ ಮಂಡಿಸುತ್ತಾ ಡಾ. ಅಂಬೇಡ್ಕರ್ ರವರು ಹೇಳಿದ ಎಚ್ಚರಿಕೆಯ ಮಾತುಗಳನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.
ಮುಂದಿನ ಅಂಕಣದಲ್ಲಿ ವಿಸ್ತಾರವಾಗಿ ಚರ್ಚೆ ಮಾಡುವ ಸವಾಲು ಇನ್ನೂ ಇದೆ.

ಹೂವಿನಹಡಗಲಿ
( ಹುಗಲೂರು)
( ಅಂಕಿ ಅಂಶಗಳ ಮಾಹಿತಿ. ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್)

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend