ಮೊಳಕಾಲ್ಮೂರು: ತುಮಕೂರ್ಲಹಳ್ಳಿ ಗ್ರಾ.ಪಂ ಉದ್ಯೋಗ ಖಾತ್ರಿ ಮರೀಚಿಕೆ ಧೋರಣೆಯನ್ನು ಖಂಡಿಸಿ ಬೀಗ ಜಡಿದ ಗ್ರಾಮಸ್ಥರು.!

Listen to this article

ಹೌದು… ಪಿಡಿಓ ಹಾಗೂ ಕಂಪ್ಯೂಟರ್ ಆಪರೇಟರ್ ನಡವಳಿಕೆಯಿಂದ ಬೇಸತ್ತು ಹೋಗಿದ್ದೇವೆ ಎಂದುರು ಗ್ರಾಮಸ್ಥರು.!
ವಿಕ್ಷರೆ.. ಬನ್ನಿ ನೊಡಣ..!

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ತುಮಕೂರ್ಲಹಳ್ಳಿ ಗ್ರಾಮದಲ್ಲಿ ನರೇಗಾ ಕಾಮಗಾರಿಯನ್ನು ಏಕಾಏಕಿ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಸಾವಿರಾರು ಕೂಲಿ ಕಾರ್ಮಿಕರು ಗುರುವಾರ ಪಂಚಾಯಿತಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಇಂದು (ಜು-22) ಗ್ರಾಮ ಪಂಚಾಯಿತಿ ಧೋರಣೆಗಳನ್ನು ವಿರೋಧಿಸಿ ಗ್ರಾಮ ಪಂಚಾಯಿತಿ ಕಛೇರಿಗೆ ಬೀಗ ಜಡಿದು ಪ್ರತಿಭಟಿಸಿರುವ ಘಟನೆ ಮೊಳಕಾಲ್ಮೂರು ತಾಲ್ಲೂಕಿನ ತುಮಕೂರ್ಲಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ. ರೈತರಿಗೆ ಕೃಷಿ ಹೊಂಡ, ಬದು ನಿರ್ಮಾಣ ಸೇರಿದಂತೆ ನರೇಗಾ ಯೋಜನೆಯಡಿಯಲ್ಲಿ ಯಾವುದೇ ಕೆಲಸಗಳು ನೀಡುತ್ತಿಲ್ಲ, ಜನಸಾಮಾನ್ಯರ ಪರವಾಗಿ ನಿಲ್ಲಬೇಕಾದ ಪಿಡಿಓ ಜನಪ್ರತಿನಿಧಿಗಳು ತಮಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆ ರೂಪಿಸಿಕೊಂಡು ಕೆಲವೇ ಕೆಲವು ವ್ಯಕ್ತಿ ಗಳಿಗೆ ನರೇಗಾ ಕೆಲಸ ನೀಡಲಾಗುತ್ತಿದೆ. ಕೋವಿಡ್ ಸಂಕಷ್ಟದಲ್ಲಿರುವ ಜನರಿಗೆ ಸಾಮೂಹಿಕ ಕೆಲಸ ನೀಡಿ, ನಿರುದ್ಯೋಗದ ಸಮಸ್ಯೆ ನಿವಾರಿಸಬೇಕಾದ ಪಂಚಾಯಿತಿಯ ಯಾವುದೇ ಅಭಿವೃದ್ಧಿ ಪರ ಕೆಲಸ ನೀಡದೇ ಆಧಿಕಾರಿಗಳು ಹುಂಬತನದ ಮೆರೆಯುತ್ತಿದ್ದಾರೆ. ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿಕಾರ್ಮಿಕರ ಕೂಲಿ ಹಣವನ್ನು ಪಂಚಾಯತ್ ಕಛೇರಿಯಲ್ಲೇ ಕೂತು ಎನ್‌.ಎಂ‌.ಆರ್ ಡೇಟಾ ಎಂಟ್ರಿ ಮಾಡಬೇಕಾದ ಕಂಪ್ಯೂಟರ್ ಅಪ ರೇಟರ್ ಯಾರ ಕೈಗೂ ಸಿಗದೇ ಮನೆಯಲ್ಲಿಯೇ ಕೂತು ಬಡ ಕೂಲಿ ಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾನೆ. ಜನಸಾಮಾನ್ಯರ ಕೈಗೆ ಸಿಗುತ್ತಿಲ್ಲ. ಇಂತಹ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ವಜಾಗೊಳಿಸಬೇಕು. ಎಲ್ಲಾ ಸಮಸ್ಯೆಗಳು ಈಡೇರುವವರಗೆ ಪಂಚಾಯಿತ್ ಬಾಗಿಲು ತೆಗೆಯುವುದಿಲ್ಲ ಪಿಡಿಓ ಹಾಗೂ ಕಂಪ್ಯೂಟರ್ ಆಪರೇಟರ್ ನಡವಳಿಕೆಯಿಂದ ಬೇಸತ್ತು ಹೋಗಿದ್ದೇವೆ. ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರತಿಭಟನೆಯಲ್ಲಿ ಕೂಲಿ ಕಾರ್ಮಿಕರಾದ ಶ್ರೀನಿವಾಸ್‌, ಪಾಲಯ್ಯ, ಕರಿಬಸವ, ಪಾಪರಾಜ, ಓಬಣ್ಣ, ಮಲ್ಲಿಕಾರ್ಜುನ, ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಯ ಕೂಲಿಕಾರ್ಮಿಕರು ಪಾಲ್ಗೊಂಡಿದ್ದರು..

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend